ನಕ್ಸಲರ ಶರಣಾಗತಿ ತರಾತುರಿ ಆಗಿದ್ದೇಕೆ?: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork |  
Published : Jan 12, 2025, 01:15 AM IST
44 | Kannada Prabha

ಸಾರಾಂಶ

ನಕ್ಸಲರ ಶರಣಾಗತಿಗೆ ನಾನು ವಿರೋಧ ಮಾಡುತ್ತಿಲ್ಲ. ನಕ್ಸಲರಿ​ಗೆ ಪ್ಯಾಕೇಜ್‌ ವ್ಯವಸ್ಥೆ ಎಲ್ಲ ಸರ್ಕಾರದಲ್ಲಿದೆ. ನಕ್ಸಲ ಚಳವಳಿಯನ್ನು ಬೇರು ಸಮೇತ ಕಿ​ತ್ತು ಹಾಕುವ ಚಿಂತನೆ ಕೇಂದ್ರ ಸರ್ಕಾರ ಮಾಡುತ್ತಿದೆ. ನ​ಕ್ಸಲ ಚ​ಟು​ವ​ಟಿ​ಕೆ​ಯಲ್ಲಿ ರಾಜ್ಯದ ಯುವಕರು ಸಿಲುಕಿದ್ದಾರೆ.

ಹು​ಬ್ಬ​ಳ್ಳಿ:

ತರಾತುರಿಯಲ್ಲಿ ಆರು ಜನ ನಕ್ಸಲರನ್ನು ಶರಣಾಗತಿ ಮಾಡಿಸಲಾಗಿದೆ. ಶರಣಾಗತಿಯಾದ ನಕ್ಸಲರು ಎಷ್ಟು ಶಸ್ತ್ರಾಸ್ತ್ರಗಳು ಒಪ್ಪಿಸಿದ್ದಾರೆ? ಅವರು ನೀಡಿರುವ ಮಾಹಿತಿ ಏನು? ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈ ಬಗ್ಗೆ ಸಿಎಂ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಸು​ದ್ದಿ​ಗಾ​ರ​ರೊಂದಿಗೆ ಶ​ನಿ​ವಾರ ಮಾ​ತ​ನಾ​ಡಿದ ಅ​ವ​ರು, ನಕ್ಸಲರಿಗೆ ವಿದೇಶಿದಿಂದ ಹಣಕಾ​ಸಿನ ಸಹಾಯವಾಗುತ್ತದೆ. ಇದರಲ್ಲಿ ನಮ್ಮ ರಾಜ್ಯದ ಯುವಕರೂ ಸಿಲುಕಿದ್ದಾರೆ. ಬೇರೆ ಬೇರೆ ಭಾಗಗಳಲ್ಲಿ ಶರಣಾಗತಿ ಆದ ನಕ್ಸಲರು ತಮ್ಮ ಬಳಿ ಇದ್ದ ಎಲ್ಲ ಶಸ್ತಾಸ್ತ್ರಗಳನ್ನು ಒಪ್ಪಿಸಿದ್ದಾರೆ. ಆ​ದರೆ, ರಾಜ್ಯದಲ್ಲಿ ನ​ಡೆದ ನ​ಕ್ಸ​ಲರ ಶ​ರ​ಣಾ​ಗ​ತಿ​ಯಲ್ಲಿ ಅದು ಆ​ಗ​ದಿ​ರು​ವುದು ಹ​ಲವು ಅ​ನು​ಮಾ​ನಕ್ಕೆ ಕಾ​ರ​ಣ​ವಾ​ಗಿದೆ ಎಂದ​ರು.

ನಕ್ಸಲರ ಶರಣಾಗತಿಗೆ ನಾನು ವಿರೋಧ ಮಾಡುತ್ತಿಲ್ಲ. ನಕ್ಸಲರಿ​ಗೆ ಪ್ಯಾಕೇಜ್‌ ವ್ಯವಸ್ಥೆ ಎಲ್ಲ ಸರ್ಕಾರದಲ್ಲಿದೆ. ನಕ್ಸಲ ಚಳವಳಿಯನ್ನು ಬೇರು ಸಮೇತ ಕಿ​ತ್ತು ಹಾಕುವ ಚಿಂತನೆ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದ ಅವರು, ನ​ಕ್ಸಲ ಚ​ಟು​ವ​ಟಿ​ಕೆ​ಯಲ್ಲಿ ರಾಜ್ಯದ ಯುವಕರು ಸಿಲುಕಿದ್ದಾರೆ. ನಕ್ಸಲ್‌ ಪ್ಯಾಕೇಜ್‌ ಇತರೇ ನಕ್ಸಲರಿಗೆ ಸಲುಗೆಯಾಗದಿರಲಿ. ಆರು ಜನ ನಕ್ಸಲ್‌ ಶರಣಾದರೆ, ರಾಜ್ಯದಲ್ಲಿ ನಕ್ಸಲ ಚಳವಳಿ ಮುಗಿಯಿತು ಎಂದು ಬಿಂಬಿಸಲಾಗುತ್ತಿದೆ. ಆ್ಯಂಟಿ ನಕ್ಸಲ ತಂಡದ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಜೋ​ಶಿ ಪ್ರಶ್ನಿಸಿದರು.

ಪಕ್ಷದ ಸಭೆ ಅಷ್ಟೇ:

ವಿಜಯೇಂದ್ರ ಯಾವುದೇ ಡಿನ್ನರ್‌ ಪಾರ್ಟಿ ಎಂದು ಕರೆದಿಲ್ಲ. ಪಕ್ಷದ ಸಭೆ ಕರೆದಿದ್ದರು. ನನಗೂ ಕರೆದಿದ್ದರು ನಾನೂ ಹೋಗಿದ್ದೆ ಎಂದು ಪ್ರಶ್ನೆಯೊಂದಕ್ಕೆ ಜೋಶಿ ಉತ್ತರಿಸಿದರು. ಕಾಂಗ್ರೆಸ್‌ನ ಒಳಜಗಳದಿಂದ ಭ್ರಷ್ಟಾಚಾರ, ಅನೇಕ ರೀತಿಯ ಹಗರಣದಿಂದ ಸರ್ಕಾರ ನಿ​ಯಂತ್ರಣ ತ​ಪ್ಪಿ​ದೆ. ಕೆಎಸ್‌ಆರ್‌ಟಿಸಿ ಮತ್ತು ಎಲ್ಲ ಅಂಗ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ ಎಂದರು.

ದಲಿತರ ಪರ ಅಲ್ಲ:

ಇತ್ತೀಚಿಗೆ ಗೃಹ ಸಚಿವ ಡಾ.ಪರಮೇಶ್ವರ ದಲಿತ ಶಾಸಕರು, ಸಚಿವರ ಸಭೆ ಕರೆದಿದ್ದು ಅದು ದಿಢೀರನೆ ಮುಂದೂಡಲ್ಪಟ್ಟಿತು. ದಲಿತರ ಸಭೆಗೆ ಬ್ರೇಕ್‌ ಹಾಕಿದ್ಯಾರು, ದಲಿತರ ಕಾರ್ಯಕ್ರಮವನ್ನು ಯಾರು ಸಹಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ ಬ​ಹಿ​ರಂಗಪ​ಡಿ​ಸಲಿ. ಕಾಂಗ್ರೆಸ್‌ ಯಾವತ್ತೂ ದಲಿತರ ಪರವಾಗಿಲ್ಲ ಎಂದರು.

ಕಾಂಗ್ರೆಸ್‌ ಅಂಬೇಡ್ಕರ್‌ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಅವರಿಗೆ ಗೌರವ ಕೊಟ್ಟಿಲ್ಲ. ಈಗಿನ ದಲಿತ ನಾಯಕರಿಗೆ ಗೌರವ ನೀಡುತ್ತೆ ಎಂದು ಕೆ​ಲ​ವರು ಭ್ರ​ಮೆ​ಯ​ಲ್ಲಿ​ದ್ದಾ​ರೆ. ದ​ಲಿ​ತ​ರನ್ನು ತಪ್ಪು ದಾರಿಗೆಳೆಯುವ, ಕತ್ತಲಲ್ಲಿ ಇಡುವ ಕಾರ್ಯ ಕಾಂಗ್ರೆಸ್‌ನಲ್ಲಿ ನ​ಡೆ​ಯುತ್ತಿದೆ. ದಲಿತ ನಾಯಕರು ಎಚ್ಚರಿಕೆಯಿಂದ ಇರಬೇಕು ಎಂದು ಜೋಶಿ ಕಿವಿಮಾತು ಹೇಳಿದರು.

ಇಂಡಿಯಿಂದ ಕಾಂಗ್ರೆಸ್‌ ಔ​ಟ್‌:

ಇಂಡಿ ಘಟಬಂಧನದಿಂದ ಕಾಂಗ್ರೆಸ್‌ನ್ನೇ ಹೊರಹಾಕಲಾಗಿದೆ. ಕಾಂಗ್ರೆಸ್‌ಗೆ ಎಲ್ಲಿಯೂ ನೆಲೆ ಇಲ್ಲದಂತಾ​ಗಿ​ದೆ. ಅ​ವ​ರ​ಲ್ಲಿನ ಒಳ ಜಗಳದ ಪರಿಣಾಮ ಈ ರೀತಿಯಲ್ಲಿ ಆಗುತ್ತಿದೆ. ದೆಹಲಿ ಚು​ನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನವನ್ನು ಗೆ​ಲ್ಲು​ವು​ದಿ​ಲ್ಲ. ಅದು ರಾಷ್ಟ್ರೀಯ ಪಕ್ಷದಿಂದ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ಲೇ​ವಡಿ ಮಾ​ಡಿ​ದ​ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ