ಗೌರಿ ಹಬ್ಬಕ್ಕೆ ತವರು ಊರಿಗೆಕಳುಹಿಸದಕ್ಕೆ ಪತ್ನಿ ಆತ್ಮ*ತ್ಯೆ

KannadaprabhaNewsNetwork |  
Published : Aug 29, 2025, 02:00 AM ISTUpdated : Aug 29, 2025, 09:57 AM IST
Dead Body

ಸಾರಾಂಶ

ಗೌರಿ ಹಬ್ಬಕ್ಕೆ ತವರೂರಿಗೆ ಕಳುಹಿಸದ ಕಾರಣಕ್ಕೆ ಕೋಪಗೊಂಡು ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬರ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :  ಗೌರಿ ಹಬ್ಬಕ್ಕೆ ತವರೂರಿಗೆ ಕಳುಹಿಸದ ಕಾರಣಕ್ಕೆ ಕೋಪಗೊಂಡು ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬರ ಪತ್ನಿ ಆತ್ಮ*ತ್ಯೆಗೆ ಶರಣಾಗಿರುವ ಘಟನೆ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಸ್‌.ಜಿ. ಪಾಳ್ಯದ ಗಂಗ್ರೋತಿ ಸರ್ಕಲ್ ಸಮೀಪದ ನಿವಾಸಿ ಶಿಲ್ಪಾ (27) ಮೃತ ದುರ್ದೈವಿ. ಈ ಘಟನೆ ಸಂಬಂಧ ವರದಕ್ಷಿಣೆ ಕಿರುಕುಳದ ಆರೋಪದ ಮೇರೆಗೆ ಮೃತಳ ಪತಿ ಪ್ರವೀಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗೌರಿ ಹಬ್ಬದ ಮಂಗಳವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಶಿಲ್ಪಾ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಫ್ಟ್‌ವೇರ್ ಉದ್ಯೋಗಿ ಪ್ರವೀಣ್ ಹಾಗೂ ಶಿಲ್ಪಾ ವಿವಾಹವಾಗಿದ್ದು, ಈ ದಂಪತಿಗೆ 1.8 ವರ್ಷದ ಗಂಡು ಮಗುವಿದೆ. ಮದುವೆ ಬಳಿಕ ಎಸ್‌.ಜಿ.ಪಾಳ್ಯ ಸಮೀಪ ಸತಿ-ಪತಿ ನೆಲೆಸಿದ್ದರು. ಪ್ರವೀಣ್ ಹಾಗೂ ಶಿಲ್ಪಾ ಅನ್ಯೋನ್ಯವಾಗಿಯೇ ಇದ್ದರು. ಆದರೆ ಗೌರಿ-ಗಣೇಶ ಹಬ್ಬಕ್ಕೆ ತವರಿಗೆ ಹೋಗುವ ವಿಚಾರವಾಗಿ ಸತಿ-ಪತಿ ಮಧ್ಯೆ ಜಗಳವಾಗಿದೆ. ಇದರಿಂದ ಬೇಸರಗೊಂಡ ಶಿಲ್ಪಾ, ಮಂಗಳವಾರ ರಾತ್ರಿ 9 ಗಂಟೆಯಲ್ಲಿ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಅವರ ಕೋಣೆಗೆ ಮೃತರ ಪತಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣವೆಂದು ಆರೋಪಿಸಿ ಅಳಿಯ ಪ್ರವೀಣ್ ವಿರುದ್ಧ ಮೃತಳ ತಾಯಿ ದೂರು ನೀಡಿದ್ದರು. ಅದರನ್ವಯ ಪ್ರವೀಣ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದೂವರೆ ತಿಂಗಳ ಗರ್ಭಿಣಿ?

ಮೃತ ಶಿಲ್ಪಾ ಅವರು ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದರು. ತಮ್ಮ ಎರಡನೇ ಮಗುವಿನ ನಿರೀಕ್ಷೆ ಕುರಿತು ಹೆತ್ತವರ ಜತೆ ಅವರು ಖುಷಿ ಹಂಚಿಕೊಂಡಿದ್ದರು. ಆದರೆ ಕೌಟುಂಬಿಕ ಕಲಹದಿಂದ ಶಿಲ್ಪಾ ಅವರು ಹೊಸ ಜೀವಕ್ಕೆ ಉಸಿರು ನೀಡುವ ಮುನ್ನವೇ ತಾವೇ ಉಸಿರು ಚೆಲ್ಲುವಂತಾಯಿತು.

ಮೂರು ವರ್ಷಗಳ ಹಿಂದೆ ಎರಡು ಕುಟುಂಬಗಳು ಒಪ್ಪಿಯೇ ಪ್ರವೀಣ್ ಹಾಗೂ ಶಿಲ್ಪಾ ಅವರ ಮದುವೆ ಮಾಡಿದ್ದರು. ಕೊಪ್ಪಳದ ಗಂಗಾವತಿಯಲ್ಲಿ ವಿವಾಹವನ್ನು ಶಿಲ್ಪಾ ಕುಟುಂಬದವರು ಅದ್ದೂರಿಯಾಗಿ ಮಾಡಿದ್ದರು. ಆದರೆ ವರದಕ್ಷಿಣೆ ಹಣದ ವಿಚಾರವಾಗಿ ಶಿಲ್ಪಾ ಮೇಲೆ ಪ್ರವೀಣ್ ದೌರ್ಜನ್ಯ ನಡೆಸುತ್ತಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

PREV
Read more Articles on

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’