ಸಾರಾಂಶ
ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಮುಂದಾದವರು ಮುಂದೆ ಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರು : ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಮುಂದಾದವರು ಮುಂದೆ ಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಜುನಾಥನ ಶಕ್ತಿಯನ್ನು ಯಾರೂ ಕಡಿಮೆ ಮಾಡಲು ಸಾಧ್ಯವಿಲ್ಲ. ಅಪಪ್ರಚಾರ ಮಾಡಲು ಹೋಗಬಾರದು. ಒಂದು ವೇಳೆ ಅಪಪ್ರಚಾರ ಮಾಡಲು ಹೋದರೆ ಮುಂದೆ ಅಂತವರು ಕಷ್ಟಕ್ಕೆ ಸಿಲುಕುವುದು ಗೋಚರ ಆಗಲಿದೆ ಎಂದು ತಿಳಿಸಿದರು.
ಧರ್ಮಸ್ಥಳದ ಮಂಜುನಾಥನ ಶಕ್ತಿ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಧರ್ಮಸ್ಥಳ ವಿವಾದ ಪ್ರಕರಣಕ್ಕೆ ಸಂಬಂಧಿಸಿ ನಾವು ಯಾವುದೇ ಪರ, ವಿರೋಧ ಮಾತನಾಡಲು ಹೋಗಲ್ಲ. ಈ ಸಮಾಜದಲ್ಲಿ ಎಲ್ಲ ರೀತಿಯ ಜನ ಇದ್ದಾರೆ. ಅವರ ಜತೆ ನಾವು ಪೈಪೂಟಿ ಮಾಡಲು ಹೋಗಬಾರದು. ಈ ವಿಚಾರದಲ್ಲಿ ನಾವು ಅತ್ಯಂತ ಗಂಭೀರವಾಗಿ ಯೋಚನೆ ಮಾಡುತ್ತೇವೆ. ಹೀಗಾಗಿ ಇಂಥ ವಿಚಾರದಲ್ಲಿ ದೇವರನ್ನೇ ಪ್ರಾರ್ಥಿಸುತ್ತೇವೆ. ಅಂತಿಮ ತೀರ್ಮಾನ ನೀನೆ ಕೊಡು ಎಂದು ಕೇಳಿಕೊಳ್ಳುತ್ತೇವೆ ಎಂದರು.