ದೇವನಹಳ್ಳಿ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂತಹಂತವಾಗಿ ೧೦೦ ಕೋಟಿ ಅನುದಾನ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ದೇವನಹಳ್ಳಿ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂತಹಂತವಾಗಿ ೧೦೦ ಕೋಟಿ ಅನುದಾನ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಅಂಗನವಾಡಿ, ಬಸ್ ತಂಗುದಾಣ, ಕೆರೆ ಏರಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಿಂದ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ವಿವಿಧ ಅನುದಾನಗಳಿಂದ ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದೇನೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಸಿಎಸ್ಆರ್ ಅನುದಾನದಲ್ಲಿ ಹೈಟೆಕ್ ಶಾಲೆಗಳು ನಿರ್ಮಾಣವಾಗಲಿವೆ. ಬೆಟ್ಟೇನಹಳ್ಳಿ ಗ್ರಾಮದಲ್ಲಿ ಜಾಲಿಗೆ ಗ್ರಾಪಂ ಸದಸ್ಯ ಬೆಟ್ಟೇನಹಳ್ಳಿ ಮಹೇಶ್‌ಬಾಬು ಅವರು ಅವರ ಹಿರಿಯರಾದ ದೊಡ್ಡ ಅರಸಪ್ಪ ಸ್ಮರಣಾರ್ಥ ಬಸ್‌ ತಂಗುದಾಣ ನಿರ್ಮಿಸಿಕೊಟ್ಟಿದ್ದಾರೆ ಎಂದರು.

ಜಾಲಿಗೆ ಗ್ರಾಪಂ ಸದಸ್ಯ ಬೆಟ್ಟೇನಹಳ್ಳಿ ಮಹೇಶ್‌ಬಾಬು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಗ್ರಾಮದಲ್ಲಿ ಅಂಗನವಾಡಿ, ಕೆರೆ ಏರಿ ರಸ್ತೆ ಕಾಮಗಾರಿ ಮಾಡಿಕೊಟ್ಟಿದ್ದಾರೆ. ಅವರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಸಚಿವರಿಗೆ ಬೆಳ್ಳಿಗದೆ ನೀಡಿ ಅಭಿನಂದಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು ಎಂದರು.

ಇದೆ ವೇಳೆ ಜಾಲಿಗೆ ಗ್ರಾಪಂ ಅಧ್ಯಕ್ಷ ಎಸ್.ಎಂ.ಆನಂದ್‌ಕುಮಾರ್, ಬಯಪ ಅಧ್ಯಕ್ಷ ಶಾಂತಕುಮಾರ್, ಸದಸ್ಯ ಪ್ರಸನ್ನಕುಮಾರ್, ಗ್ಯಾರಂಟಿ ಯೋಜನೆಗಳ ತಾಲುಕು ಅಧ್ಯಕ್ಷ ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ,ಮಂಜುನಾಥ್, ವೆಂಕಟೇಶ್,ಬೆಂಗಳೂರು ಹಾಲು ಒಕ್ಕೂಟದ ನೀರ್ದೇಶಕ ಎಸ್.ಪಿ.ಮುನಿರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಕರ್, ಕೆಪಿಸಿಸಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಆರ್.ನಾಗೇಶ್, ಪಿಡಿಒ ಪ್ರಕಾಶ್, ಗ್ರಾಪಂ ಸದಸ್ಯರು, ಬೆಟ್ಟೇನಹಳ್ಳಿ ಗ್ರಾಮಸ್ಥರು ಇದ್ದರು. ೩ ದೇವನಹಳ್ಳಿ ಚಿತ್ರಸುದ್ದಿ; ೩

ಬೆಟ್ಟೇನಹಳ್ಳಿ ಮಹೇಶ್‌ಬಾಬು ಹಾಗೂ ಸಚಿವ ಕೆ.ಎಚ್.ಮುನಿಯಪ್ಪನವರಿಗೆ ಬೆಳ್ಳಿಗದೆ ನೀಡಿ ಅಭಿನಂದಿಸಿದರು.