ಪ್ರಿಯಕರನ ಜೊತೆ ಸೇರಿ ಪತಿ ಕೊಲೆಗೆ ಯತ್ನಿಸಿದ ಪತ್ನಿ!

KannadaprabhaNewsNetwork |  
Published : Sep 09, 2025, 01:01 AM IST
8ಐಎನ್‌ಡಿ4, ಆರೋಪಿ ಸುನಂದಾ ಭಾವಚಿತ್ರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಪ್ರಿಯಕರನೊಂದಿಗೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ. ಈ ಘಟನೆ ಸೆ.1 ರಂದೇ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಸುನಂದ ಬೀರಪ್ಪ ಪೂಜಾರಿ ಎಂಬಾಕೆ ತನ್ನ ಪತಿ ಕೊಲೆಗೆ ಯತ್ನಿಸಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ

ಪ್ರಿಯಕರನೊಂದಿಗೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ. ಈ ಘಟನೆ ಸೆ.1 ರಂದೇ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಸುನಂದ ಬೀರಪ್ಪ ಪೂಜಾರಿ ಎಂಬಾಕೆ ತನ್ನ ಪತಿ ಕೊಲೆಗೆ ಯತ್ನಿಸಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಸುನಂದ ಪ್ರಿಯಕರ ಸಿದ್ದಪ್ಪ ಕ್ಯಾತನಕೇರಿ ಎಂಬಾತ ಘಟನೆ ಬಳಿಕ ನಾಪತ್ತೆಯಾಗಿದ್ದು ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ. ಸುನಂದ ಪತಿ ಬೀರಪ್ಪ ಪೂಜಾರಿ(36) ಈ ಬಗ್ಗೆ ಇಂಡಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೆ.1 ರಂದು ರಾತ್ರಿ ಮಲಗಿದ್ದ ಬೀರಪ್ಪ ಪೂಜಾರಿಯನ್ನು ಪತ್ನಿ ಸುನಂದ ಹಾಗೂ ಸಿದ್ದಪ್ಪ ಕ್ಯಾತನಕೇರಿ ಸೇರಿ ಕೊಲೆಗೆ ಯತ್ನಿಸಿದ್ದಾರೆ. ಸುನಂದ ಬೀರಪ್ಪನ ಎದೆಯ ಮೇಲೆ ಕುಳಿತು ಕತ್ತು ಮತ್ತು ಆತನ ಮರ್ಮಾಂಗವನ್ನು ಹಿಸುಕಿ ಕೊಲೆ ಮಾಡಲು ಮುಂದಾಗಿದ್ದರು. ಅಲ್ಲದೇ, ಸಿದ್ದು ಬಿಡಬೇಡ, ಖಲ್ಲಾಸ್‌ ಮಾಡು " ಎಂದು ಕೂಗುತ್ತಿದ್ದಳು. ಈ ವೇಳೆ ಬೀರಪ್ಪ ಜೋರಾಗಿ ಸದ್ದು ಮಾಡಿ ಪಕ್ಕದಲ್ಲಿದ್ದ ಪೀಠೋಪಕರಣಗಳು ಕೆಳಗೆ ಬೀಳುವಂತೆ ಮಾಡಿದ್ದಾನೆ. ಇದರ ಶಬ್ದಕ್ಕೆ ಮನೆಯ ಮಾಲೀಕರು ಬಂದಿದ್ದು, ಆಗ ಸಿದ್ದಪ್ಪ ಕ್ಯಾತನಕೇರಿ ಸ್ಥಳದಿಂದ ಓಡಿ ಹೋಗಿದ್ದಾನೆ. ಆಗಲೇ ಇಬ್ಬರ ಕೃತ್ಯ ಬಯಲಿಗೆ ಬಂದಿದೆ. ಈ ಬಗ್ಗೆ ಇಂಡಿ ನಗರ ಠಾಣೆಯಲ್ಲಿ ಬೀರಪ್ಪ ದೂರು ನೀಡಿದ್ದು, ಬಳಿಕ ಸುನಂದಾಳನ್ನು ಇಂಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆಯೂ ಸುನಂದ ಸಿದ್ದಪ್ಪನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುವಾಗ ರೆಡ್‌ ಹ್ಯಾಂಡಾಗಿ ಗಂಡನ ಕೈಯಲ್ಲಿ ಸಿಕ್ಕಿ ಬಿದ್ದಿದ್ದಳು. ಆಗಲೇ ಬೀರಪ್ಪ ಎಚ್ಚರಿಕೆ ನೀಡಿದ್ದ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಸುನಂದ ಭರವಸೆ ನೀಡಿದ್ದಳು. ಆದರೆ, ಸಾಲದಿಂದಾಗಿ ಅಂಜುಟಗಿ ಗ್ರಾಮದ ಜಮೀನನ್ನು ಮಾರಾಟ ಮಾಡಿ, ಬೀರಪ್ಪ ಇಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಇಲ್ಲಿಯೂ ಸುನಂದ ಸಿದ್ದಪ್ಪನೊಂದಿಗೆ ಸಂಪರ್ಕದಲ್ಲಿದ್ದಳು.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ