ಬಸರವಳ್ಳಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ

KannadaprabhaNewsNetwork |  
Published : Sep 25, 2026, 01:15 AM IST
೨೪ಬಿಹೆಚ್‌ಆರ್ ೧: ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆಯ ಬಸರವಳ್ಳಿ ಬಳಿ ಗುರುವಾರ ಬೆಳಿಗ್ಗೆ ಕಾಡಾನೆ ಸಂಚಾರ ಕಂಡುಬಂದಿತು. | Kannada Prabha

ಸಾರಾಂಶ

Wild elephant spotted on Basaravalli Road.

ಬಾಳೆಹೊನ್ನೂರು: ಚಿಕ್ಕಮಗಳೂರು-ಬಾಳೆಹೊನ್ನೂರು ಮುಖ್ಯರಸ್ತೆಯ ಬಸರವಳ್ಳಿ-ಕಣತಿ ಬಳಿ ಗುರುವಾರ ಬೆಳಿಗ್ಗೆ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಚಿಕ್ಕಮಗಳೂರು-ಬಾಳೆಹೊನ್ನೂರು ಸಂಪರ್ಕ ಕಲ್ಪಿಸುವ ಬಸರವಳ್ಳಿ ಮುಖ್ಯರಸ್ತೆಯ ಕಾಫಿ ತೋಟದಿಂದ ಹೊರಬಂದ ಕಾಡಾನೆಯು ಮತ್ತೊಂದು ತೋಟಕ್ಕೆ ದಾಟಲು ವಿಫಲ ಪ್ರಯತ್ನವನ್ನು ನಡೆಸಿ, ಕೆಲ ಕಾಲ ಮುಖ್ಯರಸ್ತೆಯಲ್ಲಿಯೇ ಸಂಚಾರ ನಡೆಸಿದೆ. ಬೆಳ್ಳಂಬೆಳಿಗ್ಗೆ ಕಾಡಾನೆ ಕಂಡ ಸ್ಥಳೀಯರು ಆತಂಕಕ್ಕೀಡಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಚಾಲಕರು ಸಹ ಗಾಬರಿಗೊಂಡಿದದ್ದಾರೆ. ಕೆಲ ಹೊತ್ತಿನ ಬಳಿಕ ಕಾಡಾನೆಯು ಕಾಫಿ ತೋಟದೊಳಗೆ ಮರೆಯಾಗಿ ಹೋಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಂಚೋಳಿ ಪಟ್ಟಣದಲ್ಲಿ ರಸ್ತೆ ದುರಸ್ತಿ ಮರೀಚಿಕೆ
ಪಿಎಫ್‌ ಸಮಸ್ಯೆ: ಅರವಿಂದ್ ಗಾರ್ಮೆಂಟ್ಸ್ ನೌಕರರಿಂದ ಪ್ರತಿಭಟನೆ