ಕಾಡಾನೆಗಳಿಂದ ಅಡಿಕೆ ಮರಗಳ ನಾಶ

KannadaprabhaNewsNetwork |  
Published : Jul 21, 2024, 01:16 AM IST
20ಎಚ್ಎಸ್ಎನ್3 : ಅರಕಲಗೂಡು ತಾಲೂಕಿನ ಪಾರಸನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಬಲಿಯಾಗಿರುವ ಅಡಿಕೆ ಮರಗಳು. | Kannada Prabha

ಸಾರಾಂಶ

ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಪಾರಸನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಡಿಕೆ ಮರಗಳನ್ನು ನಾಶಪಡಿಸಿವೆ.ಕೊಡಗಿನ ಕಟ್ಟೇಪುರ ಅರಣ್ಯ ಪ್ರದೇಶದ ಕಡೆಯಿಂದ ಶುಕ್ರವಾರ ರಾತ್ರಿ ಪಾರಸನಹಳ್ಳಿಯತ್ತ ಲಗ್ಗೆ ಇಟ್ಟಿರುವ ಮೂರು ಕಾಡಾನೆಗಳು ಶಾರದಮ್ಮ ಎಂಬುವರಿಗೆ ಸೇರಿದ 50 ಅಡಿಕೆ ಮರಗಳನ್ನು ಮನಬಂದಂತೆ ಮುರಿದು ನೆಲಕ್ಕುರುಳಿಸಿವೆ. ಕಾಡಾನೆಗಳ ದಾಳಿಯಿಂದ ಇತ್ತ ಪರಿಹಾರವೂ ದೊರೆಯುತ್ತಿಲ್ಲ, ಕಾಡನೆಗಳ ಹಾವಳಿಯನ್ನು ನಿಯಂತ್ರಿಸುತ್ತಿಲ್ಲ ಎಂದು ರೈತ ಮನು ಅಳಲು ತೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಪಾರಸನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಡಿಕೆ ಮರಗಳನ್ನು ಮುರಿದು ನಾಶಪಡಿಸಿವೆ.

ಕೊಡಗಿನ ಕಟ್ಟೇಪುರ ಅರಣ್ಯ ಪ್ರದೇಶದ ಕಡೆಯಿಂದ ಶುಕ್ರವಾರ ರಾತ್ರಿ ಪಾರಸನಹಳ್ಳಿಯತ್ತ ಲಗ್ಗೆ ಇಟ್ಟಿರುವ ಮೂರು ಕಾಡಾನೆಗಳು ಶಾರದಮ್ಮ ಎಂಬುವರಿಗೆ ಸೇರಿದ 50 ಅಡಿಕೆ ಮರಗಳನ್ನು ಮನಬಂದಂತೆ ಮುರಿದು ನೆಲಕ್ಕುರುಳಿಸಿವೆ.ಕೆಲ ದಿನಗಳಿಂದ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಸಂಜೆಯಾದೊಡನೆ ಪಾರಸನಹಳ್ಳಿ, ದಾಸನಪುರ ಸೇರಿದಂತೆ ಮಲ್ಲಿಪಟ್ಟಣ ಹೋಬಳಿಯ ಕಾಡಂಚಿನ ಬೆಳೆ ಪ್ರದೇಶದತ್ತ ನುಗ್ಗಿ ದಾಳಿ ನಡೆಸುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತುಳಿದು ತಿಂದು ಹಾನಿಪಡಿಸುತ್ತಿದ್ದು ದಿಕ್ಕು ತೋಚದ ಪರಿಸ್ಥಿತಿಗೆ ಸಿಲುಕಿದ್ದೇವೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.ಕಳೆದ ವರ್ಷ ಕಾಡಾನೆಗಳು ದಾಳಿ ನಡೆಸಿ 150 ಅಡಿಕೆ ಮರಗಳು ಮುರಿದು ನಾಶಪಡಿಸಿದ್ದವು. ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಅಲೆದಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಮೇಲಾಧಿಕಾರಿಗಳು ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಬೆಳೆ ನಷ್ಟದ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಇದೀಗ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೀಡಾಗಿದ್ದೇವೆ. ಇದರ ಜತೆಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ಕಾಡಾನೆಗಳು ದಾಳಿ ನಡೆಸಿ ಅಡಿಕೆ ಮರಗಳನ್ನು ಸಿಗಿದು ನಾಶಪಡಿಸಿವೆ. ಕಾಡಾನೆಗಳ ದಾಳಿಯಿಂದ ಇತ್ತ ಪರಿಹಾರವೂ ದೊರೆಯುತ್ತಿಲ್ಲ, ಕಾಡನೆಗಳ ಹಾವಳಿಯನ್ನು ನಿಯಂತ್ರಿಸುತ್ತಿಲ್ಲ ಎಂದು ರೈತ ಮನು ಅಳಲು ತೋಡಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಮರು ಡಾಂಬರೀಕರಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ
ಸಕಲೇಶಪುರ ಪ್ರೆಸ್‌ಕ್ಲಬ್‌ ಅಧ್ಯಕ್ಷರಾಗಿ ಕಾಂತರಾಜ್‌ ಹೊನ್ನೇಕೋಡಿ ಆಯ್ಕೆ