ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಒಲಿಯವುದೇ ಸಚಿವ ಸ್ಥಾನ?

KannadaprabhaNewsNetwork |  
Published : May 30, 2026, 04:00 AM IST
28ಸದಬ,ದ | Kannada Prabha

ಸಾರಾಂಶ

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಹೊಸದಾಗಿ ಸಚಿವರಾಗುವ ಹಲವು ಶಾಸಕರ ಕನಸು ಈಡೇರುವ ಕಾಲ ಸನ್ನಿಹಿತವಾಗಿದ್ದು, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡರೂ ಕೂಡ ಈ ಬಾರಿ ಕ್ಯಾಬಿನೇಟ್‌ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂಬ ಮಾತುಗಳು ಸದ್ಯ ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಕೇಳಿ ಬರುತ್ತಿದೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಹೊಸದಾಗಿ ಸಚಿವರಾಗುವ ಹಲವು ಶಾಸಕರ ಕನಸು ಈಡೇರುವ ಕಾಲ ಸನ್ನಿಹಿತವಾಗಿದ್ದು, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡರೂ ಕೂಡ ಈ ಬಾರಿ ಕ್ಯಾಬಿನೇಟ್‌ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂಬ ಮಾತುಗಳು ಸದ್ಯ ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಕೇಳಿ ಬರುತ್ತಿದೆ.ಕಾಂಗ್ರೆಸ್‌ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿರುವ ನಾಡಗೌಡರು ಪಕ್ಷ ನೀಡಿದ ಹಲವು ಮಹತ್ತರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜತೆಗೆ ಪ್ರಬಲ ಲಿಂಗಾಯತ ರೆಡ್ಡಿ ಸಮುದಾಯದ ಮುಖಂಡರಾಗಿದ್ದು, ಕಳೆದ 2-3 ಬಾರಿ ಸಚಿವ ಸ್ಥಾನದಿಂದ ವಂಚಿತಗೊಂಡಿದ್ದರೂ ಪಕ್ಷದ ವಿರುದ್ಧವಾಗಲಿ ಅಥವಾ ಹೈಕಮಾಂಡ್‌ ವಿರುದ್ಧ ಮಾತಾಡದೇ ಪಕ್ಷದ ಏಳಿಗ್ಗೆಗೆ ಶ್ರಮಿಸಿದ್ದಾರೆ. ಈ ಬಾರಿ ಅಪ್ಪಾಜಿ ನಾಡಗೌಡರನ್ನು ಗೆಲ್ಲಿಸಿ ಅವರು ನನ್ನ ಕ್ಯಾಬಿನೆಟ್‌ನಲ್ಲಿ ಮಂತ್ರಿ ಮಾಡುತ್ತೇವೆಂದು 2023ರ ಚುನಾವಣೆಯಲ್ಲಿ ಕೈ ನಾಯಕರು ಭರವಸೆ ನೀಡಿದ್ದರು. ಆದರೆ, ಮಂತ್ರಿಗಳ ಪಟ್ಟಿಯಿಂದ ಕೈಡಲಾಯಿತು. ಅದು ಯಾವ ಕಾರಣಕ್ಕೆ ಕೈಬಿಡಲಾಯಿತು ಎಂಬುವುದು ಇಂದಿಗೂ ಕೂಡ ಯಕ್ಷ ಪ್ರಶ್ನೆಯಾಗಿದೆ.1981ರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಕಾಲಿಟ್ಟು 6 ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಸಿ.ಎಸ್.ನಾಡಗೌಡ ಅವರನ್ನು ಕ್ಯಾಬಿನೇಟ್‌ ದರ್ಜೆಯ ಸಚಿವ ಸ್ಥಾನ ನೀಡಿ ಗೌರವಿಸಬೇಕೆನ್ನವುದು ಈ ಭಾಗದ ಜನರ ಬೇಡಿಕೆಯಾಗಿದೆ. ಕಳೆದ 2013ರಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಿಂದ 5 ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚೇತಕರಾಗಿ, ಸಿಎಲ್‌ಪಿ ಕಾರ್ಯದರ್ಶಿಯಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ ಮತ್ತು ಹಲವು ಸಮಿತಿಗಳ ಸದಸ್ಯರಾಗಿ ಹಾಗೂ ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಮತಕ್ಷೇತ್ರ ಅಭಿವೃದ್ಧಿ ಹಾಗೂ ಜಿಲ್ಲೆಯ ಜನತೆಯ ಪ್ರೀತಿ, ವಿಶ್ವಾಸದೊಂದಿಗೆ ಸಾವಿರಾರು ಕೋಟಿಗಳ ಅನುದಾನ ತರುವ ಮೂಲಕ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸರ್ಕಾರದ ಜನಪ್ರಿಯತೆಗೆ ಶ್ರಮಿಸಿದ್ದಾರೆ. ಹೀಗಾಗಿಯೇ ಇತ್ತೀಚಿನ 3 ದಶಕಗಳಲ್ಲಿಯೇ ಕರ್ನಾಟಕದ ವಿಧಾನಸಭಾ ಕಂಡ ಅತೀ ಅಪರೂಪದ ರಾಜಕಾರಣಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.2023ರಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಇಡೀ ರಾಜ್ಯದಲ್ಲಿಯೇ 135 ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಶಾಸಕರ ಹಿರಿತನ ಮುನ್ನೆಲೆಗೆ ಬಂದಿದೆ. ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತುಸಿದ್ದರಾಮಯ್ಯ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಈ ಬಾರಿ ರಾಜ್ಯ ಸರ್ಕಾರದ ಕ್ಯಾಬಿನೇಟ್‌ ದರ್ಜೆ ಸಚಿವರಾಗುವುದಲ್ಲಿ ಸಹಕಾರಿ ಆಗಲಿದೆಂಬ ಕೈ ಪಾಳ್ಯೆಯದಲ್ಲೇ ಕೇಳಿ ಬರುತ್ತಿದೆ. ಅವಕಾಶ ಸಿಕ್ಕರೆ ಈ ಭಾಗ ಇನ್ನಷ್ಟು ನೀರಾವರಿ ಪ್ರದೇಶ ಆಗುವುದರಲ್ಲಿ ಸಂದೇಹವಿಲ್ಲ ಎಂಬುವುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಅಲ್ಲದೇ, ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಗಣ್ಯ ವ್ಯಾಪಾರಸ್ಥರು, ಹೋರಾಟಗಾರರು, ಸಾಹಿತಿಗಳು ಒತ್ತಾಯವು ಸಹ ಅದೇ ಆಗಿದೆ.ಈಗಾಗಲೇ ಮತಕ್ಷೇತ್ರದ ಅಭಿವೃದ್ಧಿಗೆ ಸಿ.ಎಸ್.ನಾಡಗೌಡರು ಶ್ರಮಿಸಿದ್ದು, ಮೈಸೂರು ಸ್ಯಾಂಡಲ್‌ ಸಾಬೂನು ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೂ ಸರ್ಕಾರಕ್ಕೆ ಸಂಸ್ಥೆಗೆ ಹೆಚ್ಚು ಲಾಭ ಕಲ್ಪಿಸಿದ್ದಾರೆ. ಅಲ್ಲದೇ ವಿದೇಶಗಳಲ್ಲಿಯೂ ಮೈಸೂರು ಸ್ಯಾಂಡೆಲ್ ಸಂಸ್ಥೆಯ ಉತ್ಪನ್ನಗಳ ಬೇಡಿಕೆ ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ. ತಮಗೆ ನೀಡಿದ ಹುದ್ದೆಯನ್ನು ಅತ್ಯಂತ ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವ ಅಪ್ಪಾಜಿ ನಾಡಗೌಡರಿಗೆ ಕಾಂಗ್ರೆಸ್ ಹೈಮಾಂಡ್‌ ನಾಯಕರು ಗಂಭೀರವಾಗಿ ಪರಿಗಣಿಸಿ ಸಂಪುಟ ದರ್ಜೆ ಸಚಿವ ಸ್ಥಾನಮಾನ ನೀಡಬೇಕು.

-ಶ್ರೀಶೈಲ ಮರೋಳ,

ಗಣ್ಯರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಅಧ್ಯಕ್ಷರು ಪಿಕೆಪಿಎಸ್‌ ತಂಗಡಗಿ.ನಾಡಗೌಡರು ದೇಶಗತ್ತಿ ಮನೆತನದವರು. ಅಲ್ಲದೇ, ಸರಳ ಸ್ವಭಾವ ಜಾತ್ಯಾತೀತ ಮನೋಭಾವವುಳ್ಳ ನಾಯಕರಾಗಿದ್ದಾರೆ. ಬರಡು ಭೂಮಿ ಆಗಿದ್ದ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಾಗರಬೆಟ್ಟ ಏತ ನೀರಾವರಿ, ಚಿಮ್ಮಲಗಿ ಏತನೀರಾವರಿ ಹಾಗೂ ಪಿರಾಪೂರ ಬೂದಿಹಾಳ ಏತನೀರಾವರಿ ಪ್ರಾರಂಭಿಸುವ ಮೂಲಕ ರೈತರರು ಮೆಣಸಿನಕಾಯಿ, ದ್ರಾಕ್ಷಿ, ಕಬ್ಬು ಸೇರಿ ಇತರೇ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಲಕ್ಷ ಲಕ್ಷ ಆದಾಯ ಬರುವಂತೆ ಮಾಡಿದ ಕೀರ್ತಿ ಸಿ.ಎಸ್.ನಾಡಗೌರಿಗೆ ಸಲ್ಲುತ್ತದೆ. ಅವರೊಬ್ಬ ಅನುಭವಿ ಹಿರಿಯ ರಾಜಕಾರಿಣಿ, ಹೈಕಮಾಂಡ್ ಅವರನ್ನು ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನಕ್ಕೆ ಸೂಚಿಸಬೇಕು.

- ಅಕ್ಷತಾ ಶರಣಬಸು ಚಲವಾದಿ,
ಅಧ್ಯಕ್ಷರು ತಾಲೂಕು ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಘಟಕ ಮುದ್ದೇಬಿಹಾಳ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಸಂಖ್ಯೆ ಆಧರಿಸಿ ಮೂಲಸೌಕರ್ಯ ಒದಗಿಸಲು ಆದ್ಯತೆ
ಸಿದ್ದು ನ್ಯಾಮಗೌಡ ಸೌಹಾರ್ದ ಬ್ಯಾಂಕ್‌ಗೆ ₹5 ಕೋಟಿ ಲಾಭ