ಗೃಹ ಸಚಿವರು ಈಗ ಮುತ್ತು ಕೊಡುತ್ತಾರೋ, ಶಿಕ್ಷೆಯೋ?

KannadaprabhaNewsNetwork | Published : Jan 13, 2025 12:47 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಎರಡೂವರೆ ಎಕರೆ ಜಾಗವನ್ನು ಪಶು ಆಸ್ಪತ್ರೆ ಮಾಡಲು ದಾನಿಗಳು ಜಮೀನು ಕೊಟ್ಟಿದ್ದರು. ಜಮೀರ್ ಅಹ್ಮದ್ ಖಾನ್ ಅದನ್ನು ವಕ್ಫ್ ಎಂದು ಮಾಡಿದ್ದರು. ವಕ್ಪ್ ಎನ್ನುವುದಕ್ಕೆ ಹೈಕೋರ್ಟ್‌ನಿಂದ ತಡೆಯಾಗಿದ್ದಕ್ಕೆ ಮತಾಂಧರು ರೊಚ್ಚಿಗೆದ್ದು ಗೋವಿನ ಕೆಚ್ಚಲು ಕತ್ತರಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಗೇಡಿಗಳ ಮೇಲೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎರಡೂವರೆ ಎಕರೆ ಜಾಗವನ್ನು ಪಶು ಆಸ್ಪತ್ರೆ ಮಾಡಲು ದಾನಿಗಳು ಜಮೀನು ಕೊಟ್ಟಿದ್ದರು. ಜಮೀರ್ ಅಹ್ಮದ್ ಖಾನ್ ಅದನ್ನು ವಕ್ಫ್ ಎಂದು ಮಾಡಿದ್ದರು. ವಕ್ಪ್ ಎನ್ನುವುದಕ್ಕೆ ಹೈಕೋರ್ಟ್‌ನಿಂದ ತಡೆಯಾಗಿದ್ದಕ್ಕೆ ಮತಾಂಧರು ರೊಚ್ಚಿಗೆದ್ದು ಗೋವಿನ ಕೆಚ್ಚಲು ಕತ್ತರಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಗೇಡಿಗಳ ಮೇಲೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕತ್ತರಿಸಿದ ಕಿಡಿಗೇಡಿಗಳ ನೀಚಕೃತ್ಯಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಿಡಿಕಾರಿದರು. ದುಷ್ಟರು ಗೋವಿನ ಕೆಚ್ಚಲು ಕಡಿಯುವಷ್ಟು ಕೆಳಮಟ್ಟಕ್ಕೆ ಹೋಗಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ, ಸರ್ಕಾರ ಮುಸ್ಲಿಂ ತುಷ್ಟಿಕರಣ ಮಾಡುತ್ತಿದೆ. ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ, ಈಗ ಗೋವುಗಳು ಸುರಕ್ಷಿತವಾಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದಿದ್ದು ಮುಸ್ಲಿಂರಿಗೆ ದೊಡ್ಡ ಶಕ್ತಿ ಕೊಟ್ಟಂತಾಗಿದೆ. ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದವರಿಗೆ ಮುತ್ತು ಕೊಡಬೇಕಾಗಿ ಎಂದು ಪ್ರಶ್ನೆ ಮಾಡಿದ್ದರು. ಈಗ ಗೃಹ ಸಚಿವರು ಹಸುವಿನ ಕೆಚ್ಚಲು ಕತ್ತರಿಸಿದವರಿಗೆ ಮುತ್ತು ಕೊಡುತ್ತಾರೋ ಅಥವಾ ಶಿಕ್ಷೆ ಕೊಡುತ್ತಾರೋ ನೋಡಬೇಕು ಎಂದು ಕಿಡಿ ಕಾರಿದರು.ಲಕ್ಷ್ಮಿ ಹೆಬ್ಬಾಳ್ಕರ ಗೂಂಡಾಗಿರಿ:

ಡಿ.ಕೆ.ಶಿವಕುಮಾರ ನನ್ನ ಹಿಂದೆ ಇದ್ದಾರೆಂದು ಲಕ್ಷ್ಮಿ ಹೆಬ್ಬಾಳ್ಕರ ಮಾಡುತ್ತಿರುವ ಗೂಂಡಾಗಿರಿ ಒಳ್ಳೆಯದಲ್ಲ. ಸಮಾಜದ ಮೇಲೆ ಲಾಠಿ ಚಾರ್ಜ್ ಆದಾಗ ಹೆಬ್ಬಾಳ್ಕರ ಖಂಡನೆ ಮಾಡಲಿಲ್ಲ. ಸಮಾವೇಶಕ್ಕೆ ಬಂದಾಗ ಸಮಾಜದ ಮಗಳಾಗಿ ಬಂದಿದ್ದೇನೆ ಎಂದು ಹೇಳಿದರು. ಬಳಿಕ ನಾನು ಮಂತ್ರಿಯಾಗಿ ಹೋಗಿದ್ದೆ ಎಂದು ಹೇಳಿದರು. ಲಾಠಿ ಚಾರ್ಜ್ ಘಟನೆಯಲ್ಲಿ ಸತೀಶ ಜಾರಕಿಹೊಳಿ ಪಾತ್ರವಿಲ್ಲ, ಹಸ್ತಕ್ಷೇಪ ಡಿ.ಕೆ.ಶಿವಕುಮಾರದ್ದು ಆಗುತ್ತಿದೆ. ಯಾರಿಂದ ಸರ್ಕಾರ ಪತನವಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಸರ್ಕಾರ ಪತನವಾಗುವ ಲಕ್ಷಣ ಕಾಣುತ್ತಿವೆ. ಲಕ್ಷ್ಮಿ ಹೆಬ್ಬಾಳ್ಕರ ಅವರೇ ಸರ್ಕಾರ ಬೀಳಲು ಕಾರಣವಾಗುತ್ತಾರೆ ಎಂದು ಶಾಸಕ ಯತ್ನಾಳ ಹೊಸ ಬಾಂಬ್‌ ಸಿಡಿಸಿದರು.

ಕೋಟ್‌ಇದೇ ರೀತಿಯಾದರೆ ರಾಜ್ಯದಲ್ಲಿ ಹಿಂದೂಗಳು ಜೀವನ ಮಾಡೋದಕ್ಕಾಗಲ್ಲ. ಜಮೀನು ವಿಚಾರವಾಗಿ ದೂರು ನೀಡಿದ್ದ ವ್ಯಕ್ತಿಗೆ ಸೇರಿದ್ದ ನಾಲ್ಕು ಹಸುಗಳ ಕೆಚ್ಚಲು ಕೊಯ್ಯಲಾಗಿದೆ. ವಿಪಕ್ಷ ನಾಯಕ ಆರ್‌.ಅಶೋಕ ಸಹ ನನ್ನೊಂದಿಗೆ ಮಾತನಾಡಿ ಹೋರಾಟ ಮಾಡಲು ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೂಗಳು ಜೀವನ ಮಾಡಬೇಕಾ? ಅಥವಾ ಬೇಡವಾ ಎಂಬುದನ್ನ ಸಿಎಂ ಹೇಳಬೇಕು.ಬಸನಗೌಡ ಪಾಟೀಲ, ಬಿಜೆಪಿ ಶಾಸಕಬಾಕ್ಸ್‌ಕೊಳಕು ಬುದ್ದಿಗೆ ಇವರು ಸಿಎಂ ಆಗಲ್ಲನನಗೆ ರಾಜಯೋಗ ಇದೆ ಎಂದು ಡಿಸಿಎಂ‌ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ ಪೂಜೆ ಮಾಡುತ್ತಿರುವುದೇ ಪ್ರತ್ಯಂಗಿ ಹೋಮ, ಈ ಹೋಮ ಶತ್ರುನಾಶಕ್ಕೆ ಮಾಡಲಾಗುತ್ತದೆ. ಅವರ ಶತ್ರುಗಳು ಸಿದ್ದರಾಮಯ್ಯ, ಸತೀಶ ಜಾರಕಿಹೋಳಿ, ರಾಜಣ್ಣ ಇದ್ದಾರೆ. ಇವರು ನಾಶ ಆಗಬೇಕೆಂದು ಹೋಮ ಮಾಡಿದ್ದಾರೆ. ಎಲ್ಲಾ ದೇವಸ್ಥಾನ ತಿರುಗಾಡುತ್ತಿದ್ದಾರೆ. ಸಿಎಂ ಆಗಬೇಕೆಂದು ದೇವರ ಬಳಿ ಬೇಡಿಕೊಳ್ಳುತ್ತಾರೆ. ಆದರೆ ನಮ್ಮ ಧರ್ಮಕ್ಕೆ ಏನಾದರೂ ಆದರೆ ಗಮನ ಕೊಡಲ್ಲ. ಗಣೇಶನ ಹಬ್ಬದಲ್ಲಿ ಹಲ್ಲೇ ಆಯ್ತು, ಬೆಂಕಿ ಹಚ್ಚುವ ಕೆಲಸ ಆಯ್ತು. ಕಲ್ಲು ತೂರಾಟವಾಯ್ತು. ಆಗ ಏನು ಇರಲಿಲ್ಲ. ಕುರ್ಚಿ ಬೇಕಾದಾಗ ಹಿಂದೂ ಧರ್ಮ, ಸನಾತನ ಧರ್ಮ ಬೇಕು. ಕುರ್ಚಿ ಬಂದ ಬಳಿಕ ಮುಸ್ಲಿಂ ನಮ್ಮ ಸಹೋದರರು, ಅವರಿಗೆ ಏನಾದರೂ ಮಾಡಿದರೆ ಹುಷಾರ್ ಎನ್ನುತ್ತಾರೆ. ಅವರ ಕೊಳಕ ಬುದ್ಧಿಯನ್ನು ನೋಡಿದರೆ ಎಂದೂ ಸಿಎಂ ಆಗಲ್ಲ ಎಂದು ಯತ್ನಾಳ ಭವಿಷ್ಯ ನುಡಿದರು. ಡಿಕೆಶಿ ವಿರುದ್ಧ ದೊಡ್ಡ ತಂಡವೇ ತಯಾರಾಗಿದೆ. ಯಾವ ಶತ್ರು ನಾಶಕ್ಕೆ ಹೋಮ ಮಾಡಿದ್ದಾರೋ ಅವರೇ ಇವರನ್ನ ಮನೆಗೆ ಕಳುಹಿಸುತ್ತಾರೆ ಎಂದು ಟೀಕಿಸಿದರು.

Share this article