ವಿಕಸಿತ ಭಾರತ ಸಾಕಾರಕ್ಕೆ ಬಿಜೆಪಿ ಗೆಲ್ಲಿಸಿ

KannadaprabhaNewsNetwork |  
Published : Apr 28, 2024, 01:18 AM IST
27 ರೋಣ 1. ಬಾಗಲಕೋಟಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಪರ ನರಗುಂದ ಯುವ ದುರೀಣ ಉಮೇಶಗೌಡ .ಸಿ.ಪಾಟೀಲ ಬೆಳವಣಕಿ ಗ್ರಾಮದಲ್ಲಿ ಮನೆ ಮನೆಗೆ ತಡರಳಿ ಮತಯಾಚಿಸಿದರು. | Kannada Prabha

ಸಾರಾಂಶ

ಭಾರತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಿ ಜಗತ್ತಿನಲ್ಲಿಯೇ ನಂಬರ್ ದೇಶವಾಗಬೇಕು ಎಂಬುದು ಪ್ರಧಾನಿ ಮೋದಿಯವರ ಧ್ಯೇಯ

ರೋಣ: ಪ್ರಧಾನಿ ನರೇಂದ್ರ ಮೋದಿ ಹೊಂದಿರುವ ವಿಕಸಿತ ಭಾರತದ ಕನಸು ನನಸಾಗಲು ಮತ್ತೊಮ್ಮೆ ಬಿಜೆಪಿಗೆ ಆಶೀರ್ವದಿಸಿ ಎಂದು ನರಗುಂದ ಬಿಜೆಪಿ ಯುವ ಧುರೀಣ ಉಮೇಶಗೌಡ. ಸಿ. ಪಾಟೀಲ ಹೇಳಿದರು.

ಅವರು ಶನಿವಾರ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರ ಮನೆ ಮನೆಗೆ ಪ್ರಚಾರ ಕೈಗೊಂಡು ಮಾತನಾಡಿದರು.

ಭಾರತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಿ ಜಗತ್ತಿನಲ್ಲಿಯೇ ನಂಬರ್ ದೇಶವಾಗಬೇಕು ಎಂಬುದು ಪ್ರಧಾನಿ ಮೋದಿಯವರ ಧ್ಯೇಯವಾಗಿದೆ, ದೇಶದ ಜನತೆ ನೆಮ್ಮದಿಯಿಂದ ಜೀವನ ಸಾಗಿಸುವಲ್ಲಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು, ಕೃಷಿ ಕ್ಷೇತ್ರ ಅಭಿವೃದ್ಧಿಯಾಗಬೇಕು. ಕ್ರೀಡಾ ಲೋಕಕ್ಕೆ ಉತ್ತೇಜನ ಸಿಗುವಂತಾಗಬೇಕು. ಯುವಕರು ಉದ್ಯೋಗ ಸಿಕ್ಕಿಲ್ಲ ಎಂದು ಚಿಂತೆ ಮಾಡದೇ ಸ್ವದ್ಯೋಗಿಗಳಾಗಬೇಕು, ಹೀಗೇ ಹಲವಾರು ಸದುದ್ದೇಶಗಳು ಸಾಕಾರಗೊಂಡು,ದೇಶ ಪ್ರಗತಿಯಾಗಬೇಕು ಎಂಬ ಮಹದಾಸೆ ಹೊತ್ತಿರುವ ಪ್ರಧಾನಿ ಮೋದಿ, ಸಾಕಷ್ಟು ಯೋಜನೆ ಅನುಷ್ಠಾನಗೊಳಿಸಿದ್ದಲ್ಲದೇ ದೇಶದ ಪ್ರತಿಯೊಬ್ಬರಿಗೆ ಯೋಜನೆ ಪ್ರಯೋಜನವಾಗುವಲ್ಲಿ ಅಪಾರ ಶ್ರಮಿಸಿದ್ದಾರೆ. ಸದಾ ದೇಶ ಪ್ರಗತಿ, ಐಕ್ಯತೆ, ಸುಭದ್ರತೆ ಬಗ್ಗೆ ಚಿಂತನೆ ಮಾಡುತ್ತಿರುವ ನರೇಂದ್ರ ಮೋದಿ ಈ ಬಾರಿಯೂ ದೇಶದ ಪ್ರಧಾನಿಯಾಗಬೇಕಿದೆ. ಈ ದಿಶೆಯಲ್ಲಿ ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಅವರನ್ನು ಗೆಲ್ಲಿಸಿ ಆಶಿರ್ವದಿಸಬೇಕು ಎಂದು ವಿನಂತಿಸಿದರು.

ವಿವಿದೆಢೆ ಮನೆ ಮನೆಗೆ ಭೇಟಿ: ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರ ಮತಯಾಚನೆಗಾಗಿ ಯುವ ಧುರೀಣ ಉಮೇಶಗೌಡ ನೇತೃತ್ವದಲ್ಲಿ ತಾಲೂಕಿನ ಬೆಳವಣಕಿ,ಮಲ್ಲಾಪೂರ, ಸಂದಿಗವಾಡ, ಹೊನ್ನಾಪೂರ, ಕೌಜಗೇರಿ, ಯಾವಗಲ್ಲ ಸೇರಿದಂತೆ ವಿವಿಧ ಗ್ರಾಮಗಳ ಮನೆ ಮನೆಗಳಿಗೆ ಮತಯಾಚನೆ ಮಾಡಿದರು.

ಈ ವೇಳೆ ಬಿಜೆಪಿ ಹೊಳೆಆಲೂರ ಮಂಡಳ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಎಸ್.ಸಿ. ಮೋರ್ಚಾ ಅಧ್ಯಕ್ಷ ಶೇಖಪ್ಪ ಚಲವಾದಿ, ಸುರೇಶಗೌಡ ಪಾಟೀಲ, ಸೋಮನಗೌಡ ಹುಡೇದಮನಿ, ಶರಣು ಬರಶಟ್ಟಿ ,ಶರಣಪ್ಪ ಹದ್ಲಿ, ಸೋಮಶೇಖರ ಚರೇದ, ಈರಪ್ಪ ತಾಳಿ, ಬಸವಂತಪ್ಪ ತಳವಾರ, ಗಿರೀಶಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ