ಅಭಿವೃದ್ಧಿ ಪರ್ವ ಮುಂದುವರೆಯಲು ಮೋದಿ ಗೆಲ್ಲಿಸಿ: ಕಾರಜೋಳ

KannadaprabhaNewsNetwork | Published : Apr 16, 2024 1:00 AM

ಸಾರಾಂಶ

ದೇಶದ ಅಭಿವೃದ್ಧಿ ಪರ್ವ ಮುಂದುವರೆಯಲು ಮತ್ತೋಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ಹೊಸದುರ್ಗ: ದೇಶದ ಅಭಿವೃದ್ಧಿ ಪರ್ವ ಮುಂದುವರೆಯಲು ಮತ್ತೋಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ತಾಲೂಕಿನಲ 6 ಜಿಲ್ಲಾ ಪಂಚಾಯತ್‌ ಕ್ಷೇತ್ರಗಳಾದ ಮಾಡದಕೆರೆ, ಬಾಗೂರು, ದೇವಪುರ , ಬೆಲಗೂರು, ಶ್ರೀರಾಂಪುರ ಹಾಗೂ ಮತ್ತೋಡು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದರು.

ದೇಶದ ಅಭಿವೃದ್ಧಿಯನ್ನೇ ಉಸಿರಾಗಿಕೊಂಡಿರುವ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಸಾರಥ್ಯದಲ್ಲಿ ದೇಶ ಮುನ್ನಡೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಗಮಾರ್ಹ ಬದಲಾವಣೆಗಳಾಗಿವೆ. ಜನತೆ ಮೋದಿ ಅವರ ಸ್ವಾಭಿಮಾನ, ಸ್ವಚ್ಛ ಸುಂದರವಾದ ಆಡಳಿವನ್ನು ಮೆಚ್ಚಿಕೊಂಡಿದ್ದಾರೆ. ಸದಾ ನಮ್ಮ ಮೇಲೆ ವಿಷ ಕಾರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದು, ಅಲ್ಲದೇ ಕಾಶ್ಮೀರದ ಪ್ರತ್ಯೇಕ ಸ್ಥಾನಮಾನವನ್ನು ರದ್ದುಗೊಳಿಸಿ ಅಲ್ಲಿ ಅಭಿವೃದ್ಧಿ ಶಕೆ ಆರಂಭಿಸಿದ್ದಾರೆ ಎಂದರು.

ಬಯಲು ಸೀಮೆಯಾಗಿರುವ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಾಗೂ ಬೊಮ್ಮಾಯಿ ಅವರ ನೇತೃತ್ವದ ಹಿಂದಿನ ಸರ್ಕಾರ ಸಾಕಷ್ಟು ಅನುದಾನ ನೀಡಿದೆ ಆದರೆ ಅವುಗಳನ್ನು ಈಗಿನ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿದ ಕಾರಜೋಳ ನನಗೆ ಮತ ನೀಡಿ ಗೆಲ್ಲಿಸಿ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ. ಜಿಲ್ಲೆಗೆ ನೀರಾವರಿ ಸೌಲಭ್ಯ ತರುವಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂದರು.

ಚಿತ್ರದುರ್ಗ ಲೋಕಸಭಾ ಚುನಾವಣೆಯ ಬಿಜೆಪಿ ಸಂಚಾಲಕ ಎಸ್‌.ಲಿಂಗಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌ ಯೋಜನೆಗೆ ಹಿಂದಿನ ಯಡಿಯೂರಪ್ಪನವರ ಸರ್ಕಾರ 4 ಸಾವಿರ ರು. ಸೇರಿಸಿ ಕೊಡುತ್ತಿದ್ದೆವು. ಕಾಂಗ್ರೆಸ್‌ ಸರ್ಕಾರ ಅದನ್ನು ನಿಲ್ಲಿಸಿದೆ. ಜೊತೆಗೆ ಭಾಗ್ಯಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿದೆ. ಬಿಟ್ಟಿ ಭಾಗ್ಯದ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಹಂಚಿಗೆ ತಂದಿರುವ ಕಾಂಗ್ರೆಸ್‌ ಜಾತಿಯ ವಿಷ ಬೀಜ ಬಿತ್ತಿ, ಹಣಬಲ ತೋಳ್ಬಲದಿಂದ ಮತ ಪಡೆಯಲು ಯತ್ನಸಿತ್ತಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ರಹಿತವಾದ ದೇಶವಾಗಬೇಕಾದರೆ ಸರ್ಕಾರಗಳು ನೀಡುವ ಸವಲತ್ತುಗಳು ನೇರವಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ತಲುಪಬೇಕು ಎಂಬ ಚಿಂತನೆಯಿಂದ ಬ್ಯಾಂಕ್‌ಗಳಲ್ಲಿ ಖಾತೆ ತೆರೆಸುವ ಮೂಲಕ ನೇರವಾಗಿ ನಿಮ್ಮ ಖಾತೆಗಳಿಗೆ ಹಣ ಬರುವಂತೆ ಮಾಡಿದ್ದಾರೆ. ದೇಶ ಸುಭದ್ರವಾಗಿರುವ ಮೋದಿಜಿಯವರು ಸೈನ್ಯಕ್ಕೆ ನೀಡಿದ ಬಲ. ಸೈನಿಕರ ಬಲಿದಾನ ಅವರ ನರಳಲ್ಲಿ ಇಂದು ದೇಶ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ನಮಗೆ ರಾಜಕೀಯ, ಅಧಿಕಾರ ಮುಖ್ಯವಲ್ಲ ಈ ಚುನಾವಣೆ ಈ ದೇಶದ ಚುನಾವಣೆ. ನೆಮ್ಮದಿಯಿಂದ ದೇಶ ಇರಬೇಕಾದರೆ ಬಿಜೆಪಿಗೆ ಒಂದು ಮತ ಹಾಕಬೇಕು ಎಂದರು.

Share this article