- ನೆಲಕಚ್ಚಿದ ತೋಟಗಾರಿಕೆ ಬೆಳೆಗಳು । 45 ವಿದ್ಯುತ್ ಕಂಬಗಳಿಗೆ ಧಕ್ಕೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ
ತರಗನಹಳ್ಳಿ ಗ್ರಾಮದ ಸುತ್ತಮುತ್ತ ಭಾರಿ ಗಾಳಿ ಬೀಸಿದೆ. ಸುಮಾರು 90 ಎಕರೆಯಷ್ಟು ಬೆಳೆಹಾನಿ ಸಂಭವಿಸಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಜಿ. ರೇಖಾ ಪತ್ರಿಕೆಗೆ ತಿಳಿಸಿದ್ದಾರೆ. 85 ಎಕರೆಯಲ್ಲಿ ಬೆಳೆದಿದ್ದ ಬಾಳೆ ಹಾಗೂ 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ನಾಶವಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.
ನೂರಾರು ಎಕರೆ ಅಡಕೆ ತೋಟದಲ್ಲಿ ಕೂಡ 10 ರಿಂದ 20 ಅಡಕೆ ಮರಗಳು ನೆಲಕ್ಕುರುಳಿವೆ. ಆದರೆ ಅವುಗಳ ನಷ್ಠದ ಪ್ರಮಾಣ ಎನ್‍ಡಿಆರ್‌ಎಫ್ ಮಾರ್ಗದರ್ಶಿ ಸೂಚಿಯ ಪ್ರಕಾರ ಪರಿಗಣಿಸಲು ಬರುವುದಿಲ್ಲ. ಶೇ.33ರಷ್ಟು ನಷ್ಟ ಸಂಭವಿಸಿದರೆ ಮಾತ್ರ ಅದಕ್ಕೆ ಪರಿಹಾರ ಕೋರಿ ಸರ್ಕಾರಕ್ಕೆ ವರದಿ ಕಳಿಸಬಹುದು ಎಂದು ಜಿ.ರೇಖಾ ಹೇಳಿದ್ದಾರೆ.ಹೊನ್ನಾಳಿ ತಾಲೂಕು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಮೇಶಗೌಡ ಅವರು ನಷ್ಟಕ್ಕೊಳಗಾದ ರೈತರ ತೋಟಗಳಿಗೆ ಭೇಟಿ ನೀಡಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ತರಗಹನಳ್ಳಿ ಗ್ರಾಮದ ರೈತ ರುದ್ರನಗೌಡ, ಪಿ.ಎಂ. ಬಸವರಾಜ್, ತಿಪ್ಪೇಶಪ್ಪ, ಎಸ್.ಜಿ. ಬಸವನಗೌಡ, ಟಿ.ರಾಜಪ್ಪ ಅವರಿಗೆ ಸೇರಿದ ಬಾಳೆತೋಟ ನಷ್ಟವಾಗಿದೆ. ಅಡಕೆ ಮರಗಳು ಉರುಳಿ ಬಿದ್ದಿದ್ದು, ಲಕ್ಷಾಂತರ ರು.ಗಳ ನಷ್ಟ ಸಂಭವಿಸಿದೆ ಎಂದು ಹೇಳಿದ್ದಾರೆ.
- - - -20ಎಚ್.ಎಲ್.ಐ3ಎ: ತರಗನಹಳ್ಳಿಯಲ್ಲಿ ರೈತ ಎಸ್.ಜಿ. ಬಸವನಗೌಡ ಅವರ ಪಪ್ಪಾಯಿ ತೋಟದಲ್ಲಿ ಬೆಳೆ ಹಾನಿಯಾಗಿರುವುದು.
-20ಎಚ್.ಎಲ್.ಐ3ಬಿ: ತರಗನಹಳ್ಳಿ ಸಮೀಪ ವಿದ್ಯುತ್ ಟಿ.ಸಿ. ಕಂಬ ಗಾಳಿಗೆ ಮುರಿದು ವಾಲಿರುವುದು.