ಕನ್ನಡಪ್ರಭ ವಾರ್ತೆ ಗದಗ
ಇಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಪದವಿಪೂರ್ವ ವಿಭಾಗದಲ್ಲಿ ಯುವ ಸಂಸತ್ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಶಾರದಾ ಪಿ.ಯು.ಕಾಲೇಜಿನ ಧೃವ ಬಾಸ್ಕರ ದೇವಾಡಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ದ್ವಿತೀಯ ಸ್ಥಾನ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸ.ಪ.ಪೂ ಮ.ವಿದ್ಯಾಲಯದ ಮಹಾಲಕ್ಷ್ಮೀ ಮೂಲಿಮನಿ, ತೃತೀಯ ಸ್ಥಾನ ಮೈಸೂರು ಜಿಲ್ಲೆಯ ಸಂತೆಮಾಳದ ಸ.ಪ.ಪೂ.ಮ.ವಿದ್ಯಾಲಯದ ಲಿಖಿತಾ ಟಿ.ಎಸ್., ಚತುರ್ಥ ಸ್ಥಾನ ಚಿಕ್ಕೋಡಿಯ ಎಸ್.ಎಸ್.ಎಂ.ಎಸ್. ಪಿ.ಯು ಕಾಲೇಜಿನ ಪ್ರಕೃತಿ ಸಿಂದಗಿ, ಐದನೇ ಸ್ಥಾನ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸ.ಪ.ಪೂ ಕಾಲೇಜಿನ ವಹೀದ ಕಡಿವಾಲ, ಆರನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಪಿ.ಯು.ಕಾಲೇಜಿನ ಆಕಾಶ ಎಂ ರಾವ್, ಏಳನೇ ಸ್ಥಾನ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಾಲಕರ ಸ.ಪ.ಪೂ ಕಾಲೇಜಿನ ಮಗ್ಗಂ ಕುರುಬ ಲಕ್ಷ್ಮಣ ಮೂರ್ತಿ, ಎಂಟನೇ ಸ್ಥಾನ ಕೋಲಾರ ಜಿಲ್ಲೆ ಬಂಗಾರ ಪೇಟೆಯ ಸ.ಪ.ಪೂ ಕಾಲೇಜಿನ ಮೋನಿಕಾ ಬಿ.ಸಿ, ಒಂಭತ್ತನೇ ಸ್ಥಾನ ತುಮಕೂರ ಜಿಲ್ಲೆಯ ಕೋಲಾಳದ ಬಸವೇಶ್ವರ ಪಿ.ಯು.ಕಾಲೇಜಿನ ಮೇಘನಾ, ಹತ್ತನೇ ಸ್ಥಾನ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸ.ಪ.ಪೂ ಕಾಲೇಜಿನ ಬಸವರಾಜ ಸಂಪಗಾವಿ ಪಡೆದಿದೆ.ಪ್ರೌಢಶಾಲಾ ವಿಭಾಗ: ಪ್ರಥಮ ಸ್ಥಾನ ಉಡುಪಿ ಜಿಲ್ಲೆಯ ಸಾಣೂರಿನ ಕಾರ್ತಿಕ, ದ್ವಿತೀಯ ಸ್ಥಾನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಭಾಷ ನಗರದ ಜಿ.ಎಚ್.ಎಸ್.ನ ಭೂಮಿಕ ಬಿ.ಜಿ., ತೃತೀಯ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಗದ್ದೆಯ ಜಿ.ಪಿ.ಯು.ಸಿ.ಯ ಅರ್ಪಿತ ಎ., ಚತುರ್ಥ ಸ್ಥಾನ ಉಡುಪಿ ಜಿಲ್ಲೆಯ ಸಾಣೂರಿನ ಜಿ.ಪಿ.ಯು.ಯ ನವ್ಯ, ಐದನೇ ಸ್ಥಾನ ಮೈಸೂರಿನ ಜಿಲ್ಲೆಯ ಜಿ.ಎಚ್.ಎಸ್ ನ ಅಮೂಲ್ಯ ಎಚ್.ಎಸ್., ಆರನೇ ಸ್ಥಾನ ಚಿಕ್ಕಮಗಳೂರ ಜಿಲ್ಲೆಯ ಕಡೂರಿನ ಶ್ರೇಯಾ ಟಿ.ಸಿ., ಏಳನೆ ಸ್ಥಾನ ಕೋಲಾರ ಜಿಲ್ಲೆಯ ಜಿ.ಬಿ.ಜೆ.ಸಿ.ಯ ಮಹಮದ್‌ಖಾನ, ಎಂಟನೇ ಸ್ಥಾನ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಆದರ್ಶ ವಿದ್ಯಾಲಯದ ಸುಶ್ಮಿತಾ ಗದ್ಯಾಳ, ಒಂಭತ್ತನೇ ಸ್ಥಾನ ಶಿವಮೊಗ್ಗ ಜಿಲ್ಲೆಯ ಪಿಳ್ಳೂರಿ ಗಿರಿಯ ಪ್ರಜ್ವಲ. ಡಿ., ಹತ್ತನೇ ಸ್ಥಾನ ಬೆಂಗಳೂರ ದಕ್ಷಿಣದ ಅನೇಕಲ ತಾಲೂಕಿನ ಹಾರದಗದ್ದೆಯ ಹುಸೇನ ಬಿ. ಪಡೆದಿದ್ದಾರೆ.