ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮೊನ್ನೆ ತಾನೇ ಮರುಡಾಂಬರೀಕರಣ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಾ ಸರ್ಕಾರವನ್ನು ಟೀಕೆ ಮಾಡಿರುವ ಶಾಸಕರು ಇತ್ತೀಚೆಗೆ ಸುಮಾರು ೩೦ ಕೋಟಿ ರು,ಗಳ ಕಾಮಗಾರಿಯ ಗುದ್ದಲಿಪೂಜೆ ಮಾಡಿದ್ದಾರೆ. ಇದು ಸರ್ಕಾರದಿಂದ ಬಂದ ಅನುದಾನ ಅಲ್ಲವೇ? ಮಹಾರಾಷ್ಟ್ರ, ಬಿಹಾರ ರಾಜ್ಯದಲ್ಲಿ ಇದೇ ಗ್ಯಾರಂಟಿ ಯೋಜನೆಗಳ ಮೂಲಕವೇ ಅಧಿಕಾರ ಹಿಡಿದ ಅಲ್ಲಿನ ಸರ್ಕಾರಗಳು ಮಹಿಳೆಯರ ಖಾತೆಗೆ ಹಣ ಜಮಾ ಮಾಡಿದ್ದಾರೆ. ಆ ವಿಷಯ ಮರೆತಿರಾ ಎಂದು ಟೀಕಿಸಿರುವ ಅಬಿದ್‌ಅಲಿ, ಗ್ಯಾರಂಟಿ ಯೋಜನೆಗಳಿಂದ ಬಡವರ ಅಭಿವೃಧ್ದಿ ಆಗಿದೆ. ಅಂದರೆ ರಾಜ್ಯದ ಅಭಿವೃಧ್ದಿಯಾಗಿದೆ ಎಂದು ತಿಳಿಯಬೇಕು, ಹೀಗೆ ಟೀಕೆ ಮಾಡುತ್ತಾ ಕಾಲಹರಣ ಮಾಡುವ ಶಾಸಕರು, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್ ಮ್ಲಲಿಕಾರ್ಜುನ್‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುದಾನಕ್ಕೆ ಮನವಿ ಮಾಡಬೇಕು, ಆಗ ಇನ್ನು ಹೆಚ್ಚು ಅಭಿವೃಧ್ದಿ ಮಾಡಬಹುದು ಎಂದು ಸಲಹೆ ನೀಡಿದರು.
ಮೊನ್ನೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜನಹಳ್ಳಿಗೆ ಆಗಮಿಸಿದಾಗ ಇದೇ ಶಾಸಕ ಹರೀಶ್ ಹಾಜರಿದ್ದು ನಂತರ ತೆರಳಿ ಶಿಷ್ಠಾಚಾರ ಉಲ್ಲಂಘನೆಯಾಗಿದೆ ಎಂದು ದೂರು ನೀಡುವ ಅಗತ್ಯವೇನಿತ್ತು ಎಂದು ಇವರೇ ಅಧಿಕಾರಿಗಳನ್ನು ಹೆದರಿಸಿ ಗುದ್ದಲಿಪೂಜೆ ಮಾಡಿದ್ದಾರೆ ಎಂದು ಗೇಲಿ ಮಾಡಿದರು.ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಜಿ ಮಂಜುನಾಥ್ ಮಾತನಾಡಿ, ಶಾಸಕ ಹರೀಶ್ ವಿರೋಧ ಪಕ್ಷದ ಶಾಸಕರಾಗಿದ್ದು ಸರ್ಕಾರದ ಸಚಿವರನ್ನು ವಿಶ್ವಾಸದಿಂದ, ಗೌರವದಿಂದ ಕಾಣುವುದನ್ನು ಬಿಟ್ಟು ಟೀಕಿಸುವ ಜರೂರು ಏನಿದೆ, ಟೀಕಿಸಿದರೆ ಸರ್ಕಾರದಿಂದ ಅನುದಾನ ಕನಸಾಗುತ್ತದೆ, ಬರೀ ಬಿಜೆಪಿ ಮುಕಂಡರ ಆಂತರಿಕ ಕಚ್ಚಾಟದಿಂದ ಸಮಯ ಕಳೆಯುತ್ತಾರೆ ಎಂದರು.
ಮುಖಂಡರಾದ ಶಬ್ಬೀರ್‌ಸಾಬ್, ಸೈಫುಲ್ಲಾ, ವೀರಯ್ಯ, ಗಂಗಾಧರ್, ಅಬ್ದುಲ್ ರೆಹೆಮಾನ್, ಅರಿಫ್‌ಅಲಿ, ಭೋವಿ ಶಿವು,ಕೊಟ್ರೇಶ್‌ನಾಯ್ಕ್, ಶೆರ್‌ಅಲಿ, ಕುಮಾರ್, ಗಿರೀಶ್ ಮತ್ತಿತರರು ಇದ್ದರು.