ಕೆರೆಗೆ ಬಿದ್ದು ಮಹಿಳೆ ಸಾವು

KannadaprabhaNewsNetwork |  
Published : Oct 07, 2026, 04:15 AM IST
  ಜಮಖಂಡಿ ತಾಲುಕಿನ ಹುನ್ನೂರ  ಕೆರೆಗೆ ಬಿದ್ದ ಮಹಿಳೆ  ದೀಪಾ ಅಂಬಿ | Kannada Prabha

ಸಾರಾಂಶ

ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಬಸ್‌ ನಿಲ್ದಾಣ ಸಮೀಪದಲ್ಲಿರುವ ಹೂವಿನಸಿದ್ದ ಸರೋವರ ಕೆರೆಯಲ್ಲಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಹುನ್ನೂರ ಗ್ರಾಮದ ಬಸ್‌ ನಿಲ್ದಾಣ ಸಮೀಪದಲ್ಲಿರುವ ಹೂವಿನಸಿದ್ದ ಸರೋವರ ಕೆರೆಯಲ್ಲಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.ಆಸಂಗಿ ಗ್ರಾಮದ ದೀಪಾ ಮಲ್ಲಿಕಾರ್ಜುನ ಅಂಬಿ (27) ಮೃತ ಮಹಿಳೆ. ಸಿದ್ದಾಪುರ ಗ್ರಾಮದ ಪತಿಯ ಮನೆಯಲ್ಲಿ ವಾಸವಾಗಿದ್ದರು. ಸಂಬಧಿಕರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೈಕೆಗೆಂದು ಹುನ್ನೂರಿಗೆ ಬಂದಿದ್ದರು ಎನ್ನಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕೆರೆಯ ದಂಡೆಯ ಮೆಟ್ಟಿಲುಗಳ ಬಳಿ ಮಹಿಳೆ ಧರಿಸಿದ್ದ ಚಪ್ಪಲಿಗಳು ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜಮಖಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಳು ಬಿದ್ದ ಸರ್ಕಾರಿ ವಸತಿ ಗೃಹದಲ್ಲಿ ವ್ಯಕ್ತಿ ಆತ್ಮಹತ್ಯೆ
ಕಡಪಟ್ಟಿ ಪಿಡಿಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ