)
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆ.24ರಂದು ರಾತ್ರಿ ರೈಲ್ವೆ ಮೇಲ್ಸೇತುವೆಯಿಂದ ತುಂಗಾ ನದಿಗೆ ಭವಾನಿ ತನ್ನ ಮೂವರು ಮಕ್ಕಳೊಂದಿಗೆ ಜಿಗಿದಿದ್ದರು. ಈ ವೇಳೆ ಭವಾನಿ ಮತ್ತು 11 ತಿಂಗಳ ಮಗುವನ್ನು ಸ್ಥಳೀಯರಾದ ದಾದಾಪೀರ್ ಮತ್ತು ನವೀನ್ ಎಂಬುವರು ರಕ್ಷಿಸಿದ್ದರು. ಘಟನೆಯಲ್ಲಿ ಸಾನ್ವಿಕಾ (5) ಮತ್ತು ತಾನ್ವಿಕಾ (3) ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಭವಾನಿಯೇ ತನ್ನ ಮಕ್ಕಳನ್ನು ನೀರಿಗೆ ತಳ್ಳಿ, ತನ್ನ ಗಂಡು ಮಗುವಿನೊಂದಿಗೆ ನದಿಗೆ ಜಿಗಿದಿದ್ದರು ಎಂದು ಆರೋಪಿಸಲಾಗಿತ್ತು.
ಏನಿದೆ ದೂರಿನಲ್ಲಿ?:ಆ.24ರಂದು ಮಧ್ಯಾಹ್ನ ಮೂವರು ಮಕ್ಕಳೊಂದಿಗೆ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಂದಿದ್ದಾಗಿ ಭವಾನಿ ದೂರಿನಲ್ಲಿ ತಿಳಿಸಿದ್ದಾರೆ. ಮಕ್ಕಳನ್ನು ಲಯನ್ ಸಫಾರಿಗೆ ಕರೆದೊಯ್ಯಲು ಯೋಜಿಸಿದ್ದರು. ಆದರೆ ಊಟ ಮಾಡಿಸುವಷ್ಟರಲ್ಲಿ ಸಮಯ ಮೀರಿದ್ದರಿಂದ ಪುನಃ ಊರಿಗೆ ತೆರಳಲು ಹೊಳೆ ಬಸ್‌ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು.
ಸೇತುವೆ ಮೇಲಿಂದ ಬಿದ್ದಿದ್ದ ಸಾನ್ವಿಕಾ ಮತ್ತು ತನ್ವಿಕಾ ಅವರ ಸುಳಿವು ಇನ್ನೂ ಸಿಕ್ಕಿಲ್ಲ. ಘಟನೆ ನಡೆದ ದಿನದಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೋಟ್ ಬಳಸಿ ತುಂಗಾ ನದಿಯ ನೀರಿನ ಅಡಿ, ನದಿ ದಂಡೆ ಮೇಲೆ ಹುಡುಕಾಟ ನಡೆಸಲಾಗುತ್ತಿದ್ದು, ಇದುವರೆಗೆ ಮಕ್ಕಳ ಸುಳಿವು ಪತ್ತೆಯಾಗಿಲ್ಲ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.