। ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ
ಮಹಿಳೆ ಅಬಲೆ ಅಲ್ಲ, ಸಬಲೆ ಎನ್ನುವುದನ್ನು ಈಗಾಗಲೇ ನಿರೂಪಿಸಿದ್ದಾಳೆ. ಆಕೆ ಯಾವುದೇ ಸೀಮಿತ ಕ್ಷೇತ್ರದಲ್ಲಿ ಅಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥಳು ಎಂದು ಹಿರಿಯ ನ್ಯಾಯವಾದಿ ಸಂಧ್ಯಾ ಮಾದಿನೂರು ಹೇಳಿದರು.
ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಸಭಾಂಗಣದಲ್ಲಿ ರೆಡ್ಡಿ ಮಹಿಳಾ ಸಂಘದವರು ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯನ್ನು ಅನಾದಿಕಾಲದಿಂದ ಕೇವಲ ಅಡುಗೆ ಮನೆಗೆ ಸೀಮಿತ ಮಾಡಲಾಗಿತ್ತು. ಆದರೆ, ಆಕೆ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಶಕ್ತಿ ತೋರಿಸಿದ್ದರಿಂದ ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶ ದೊರೆಯುತ್ತಿದ್ದು, ತನ್ನ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾಳೆ. ಆದರೂ ಇನ್ನು ಹೆಚ್ಚು ಹೆಚ್ಚು ಅವಕಾಶದ ಅವಶ್ಯಕತೆ ಇದೆ ಎಂದರು.
ಡಾ. ಕಸ್ತೂರು ಕರಮುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಕಾಲದಲ್ಲಿ ಮಹಿಳೆಯರು ಸಬಲರಾಗಿದ್ದಾರೆ. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶದ ಬದುಕು ಇಂದಿಗೂ ಮಾದರಿಯಾಗಿದೆ ಎಂದರು.
ಮಹಿಳೆಯರಿಗೆ ಕವಿತಾ ಅಳವಂಡಿ ವಿವಿಧ ಆಟಗನ್ನಾಡಿಸಿ, ರಂಜಿಸಿದರು.
ರತ್ನಾ ಕಾತರಕಿ ಪ್ರಾರ್ಥನಾ ಗೀತೆ ಹಾಡಿದರು. ಲಕ್ಷ್ಮೀ ಚಂದ್ರಶೇಖರ ವಂದಿಸಿದರು.