12 ನೇ ಶತಮಾನದಿಂದ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ

KannadaprabhaNewsNetwork |  
Published : Oct 25, 2023, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

12 ಶತಮಾನದಿಂದ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಲೋಕ ತೆರೆದುಕೊಂಡಿತೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಬಸವಕೇಂದ್ರ ಮುರುಘಾಮಠದ ಆಡಳಿತಾಧಿಕಾರಿ ಬಿ.ಎಸ್.ರೇಖಾ ಅಭಿಪ್ರಾಯಪಟ್ಟರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಅನುಭವ ಮಂಟಪದಲ್ಲಿ ಆಯೋಜಿಸಲಾದ ವಚನಕಾರ್ತಿಯರ ಅರಿವಿನ ನೆಲೆ ಕುರಿತ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂದು ನೀಡಿದ ಪ್ರಾತಿನಿಧ್ಯದ ಫಲವಾಗಿ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾಳೆ. ಕುಟುಂಬದ ಜವಾಬ್ದಾರಿ ಹೊರಲು ಕಾರಣವಾಗಿದೆ. ಎಲ್ಲ ಕ್ಷೇತ್ರದಲ್ಲಿಯೂ ತನ್ನ ಇರುವಿಕೆಯ ಪಡೆದುಕೊಂಡಿದ್ದಾಳೆಂದರು.

ಶರಣ ಸಂಸ್ಕೃತಿ ಉತ್ಸವದ ಮಹಿಳಾ ಸಮಾವೇಶದಲ್ಲಿ ನ್ಯಾಯಾಧೀಶೆ ಬಿ.ಎಸ್.ರೇಖಾ ಕನ್ನಡಪ್ರಭ ವಾರ್ತೆ ಚಿತ್ರದುರ್ಗ 12 ಶತಮಾನದಿಂದ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಲೋಕ ತೆರೆದುಕೊಂಡಿತೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಬಸವಕೇಂದ್ರ ಮುರುಘಾಮಠದ ಆಡಳಿತಾಧಿಕಾರಿ ಬಿ.ಎಸ್.ರೇಖಾ ಅಭಿಪ್ರಾಯಪಟ್ಟರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಅನುಭವ ಮಂಟಪದಲ್ಲಿ ಆಯೋಜಿಸಲಾದ ವಚನಕಾರ್ತಿಯರ ಅರಿವಿನ ನೆಲೆ ಕುರಿತ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂದು ನೀಡಿದ ಪ್ರಾತಿನಿಧ್ಯದ ಫಲವಾಗಿ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾಳೆ. ಕುಟುಂಬದ ಜವಾಬ್ದಾರಿ ಹೊರಲು ಕಾರಣವಾಗಿದೆ. ಎಲ್ಲ ಕ್ಷೇತ್ರದಲ್ಲಿಯೂ ತನ್ನ ಇರುವಿಕೆಯ ಪಡೆದುಕೊಂಡಿದ್ದಾಳೆಂದರು. ನಮ್ಮದು ಶರಣರ ಶರಣ ಸಂಸ್ಕೃತಿ. ಸಾರ್ವಜನಿಕರ ಹಣ ಸಾರ್ವಜನಿಕರಿಗೆ ಮೀಸಲು. ಸ್ವಂತಕ್ಕೆ ಯಾರು ಖರ್ಚು ಮಾಡಿಕೊಳ್ಳಬಾರದು. ಹತ್ತು ಜನ ಉತ್ತಮ ಸೇವೆ ಮಾಡುವವರು ನಮಗೆ ಸಾಥ್ ನೀಡಬೇಕು. ಸತ್ಯ ನಿಷ್ಠೆಯಿಂದ ಕೆಲಸ ಮಾಡುವವರು ಬೇಕಿದೆ. ಆಡಳಿತಾಧಿಕಾರಿಯಾಗಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಸೇವೆಯನ್ನು ಮಾಡುತ್ತೇನೆ. ಸಮಾಜದವರು ಸಹಕಾರ ನೀಡಬೇಕು. ತಪ್ಪಿದ್ದರೆ ತಿದ್ದುವ ಕೆಲಸ ಮಾಡಬೇಕು. ಕ್ರಾಂತಿಯ ಸೊಬಗನ್ನು ನಾವು ಎಲ್ಲಡೆ ಪಸರಿಸಬೇಕೆಂದರು. ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕೈ ಪದ್ಮಶಾಲಿ ಮಾತನಾಡಿ, ಲಿಂಗತ್ವದ ಆಧಾರದ ಮೇಲೆ ಈ ಸಮಾಜದಲ್ಲಿ ಶೋಷಣೆ ಅನುಭವಿಸುತ್ತಿರುವ ನಮ್ಮಂತವರನ್ನು ರೇಖಾ ಮೇಡಂ ಗುರುತಿಸಿ ಸನ್ಮಾನಿಸುತ್ತಿರುವುದು ನಮ್ಮಗಳಿಗೆ ಸಂದ ಗೌರವವಾಗಿದೆ. ಸಾಂಸ್ಕೃತಿಕ ಚೌಕಟ್ಟಿನಿಂದ ನಮ್ಮನ್ನು ದೂರವಿಟ್ಟಿದ್ದಾರೆ. ನಮ್ಮಗಳದು ನಿಷ್ಕಲ್ಮಷವಾದ ಮನಸ್ಸು. ನಾವುಗಳು ಶೋಷಿತ ಸಮಾಜಕ್ಕೆ ಸೇರಿದವರು. ಮಹಿಳೆಯರನ್ನು ಶೋಷಿತ ರೂಪದಲ್ಲಿ ನೋಡುವ ಸಮಾಜಕ್ಕೆ ನನ್ನದೊಂದು ಧಿಕ್ಕಾರವಿದೆ. ಸಮಾಜದಲ್ಲಿ ಶೋಷಿತರ ಸುಧಾರಣೆ ತರುವಲ್ಲಿ ಶ್ರಮಿಸುತ್ತೇವೆ ಎಂದರು. ವಿಷಯಾವಲೋಕನ ಮಾಡಿ ಮಾತನಾಡಿದ ಚಿಂತಕಿ ಡಾ.ಶುಭಾ ಮರವಂತೆ, ಜಗತ್ತಿನಲ್ಲಿ ಸುಂದರ ಯುಗ ಅಂತ ಇದ್ದರೆ ಅದು ವಚನದ ಯುಗ. ಕಾರಣ ಅಂದು ಹೆಣ್ಣಿಗೆ ಸಮಾನತೆಯ ಅವಕಾಶ ಕೊಟ್ಟರು. ಬಲೆಯನ್ನು ಬಿಚ್ಚಿ ಸಮಾಜಕ್ಕೆ ತೋರಿಸಿದ ಯುಗ ಬಸವಾದಿ ಪ್ರಮಥರದು. ಎಲ್ಲಿ ಸ್ತ್ರೀ ಶಕ್ತಿ ತುಂಬಿರುತ್ತದೆಯೋ ಅಲ್ಲೆಲ್ಲಾ ನವರಾತ್ರಿ ಇದ್ದಂತೆ. ಹನ್ನೆರಡನೇ ಶತಮಾನ ದಲ್ಲಿ ಬಸವಾದಿ ಶಿವಶರಣರ ಕಾಲದಲ್ಲಿ ಸ್ತ್ರೀಯರಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡಿದರು. ಅದನ್ನು ಅಂಬೇಡ್ಕ ರ್ ರವರು ಇಂದಿನ ಸಮಾಜದಲ್ಲಿ ಮುಂದುವರೆಸಿದವರಾಗಿದ್ದಾರೆ ಎಂದರು. ಮಾಜಿ ಸಚಿವ ಎಚ್ ಆಂಜನೇಯ, ವೈದ್ಯ ಡಾ.ಶಿಲ್ಪ.ಜಿ.ಬಿ, ಕೆ.ಸಿ.ವೀಣಾ ಸುರೇಶ್ ಬಾಬು, ಶರಣ ಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷ ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ಉಸ್ತುವಾರಿ ಬಸವಪ್ರಭುಸ್ವಾಮಿಗಳು, ಬಸವತತ್ತ್ವ ಪ್ರಸಾರಕರಾದ ಬೀದರ್‌ನ ಶರಣೆ ಸತ್ಯಕ್ಕ, ಎಸ್.ಜೆಎಂವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್‍ಕುಮಾರ್ ಶರಣಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ಸವಿತಾ ಅಮರಶೆಟ್ಟಿ, ಮಾಯಾ ಎಸ್ ನಾಯಕ್, ಅಜೀದಾ ಬೇಗಂ ಉಪಸ್ಥಿತರಿದ್ದರು. ಸಮಾಜ ಸೇವಕಿ ಕೆ.ಅರ್ಪಿತಾ ಹಾಗೂ ಗಾನಶ್ರೀ ಸಿ ಪಿ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ