ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕಿದೆ: ಸುಮಂಗಲಾ ಹಿರೇಮನಿ

KannadaprabhaNewsNetwork |  
Published : Oct 21, 2025, 01:00 AM IST

ಸಾರಾಂಶ

ಇಂದು ಪ್ರತಿಯೊಬ್ಬ ಮಹಿಳೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು. ಅದಕ್ಕಾಗಿ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳ ಮೂಲಕ ಸಹಾಯ ಹಾಗೂ ಸಹಕಾರ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಸುಮಂಗಲಾ ಹಿರೇಮನಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ಪ್ರತಿಯೊಬ್ಬ ಮಹಿಳೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು. ಅದಕ್ಕಾಗಿ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳ ಮೂಲಕ ಸಹಾಯ ಹಾಗೂ ಸಹಕಾರ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಸುಮಂಗಲಾ ಹಿರೇಮನಿ ತಿಳಿಸಿದರು.

ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆ ಮತ್ತು ಮಹಿಳಾ ಕಿಸಾನ ದಿವಸ್‌ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರ್ಥಿಕ, ಸಾಮಜಿಕವಾಗಿ ಸಬಲೀಕರಣರಾಗಬೇಕೆಂದು ಆಶಿಸಿದರು. ಬಾಲ್ಯವಿವಾಹ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು. ಕೃಷಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ ಮತ್ತು ಆತ್ಮನಿರ್ಭರ ಭಾರತದ ಕನಸು ನನಸಾಗಲು ಮಹಿಳೆಯರ ಪಾತ್ರ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಗತಿಪರ ರೈತ ಮಹಿಳೆಯರಾದ ಸುಪ್ರಿಯಾ ರೇಳೇಕರ ಅವರು ಸಾವಯವ ಕೃಷಿ ಮತ್ತು ನೈರ್ಸಗಿಕ ಕೃಷಿಯ ಪ್ರಾಮುಖ್ಯತೆ ತಿಳಿಸಿದರು. ಅವರು ತಾವು ಹೇಗೆ ಕಬ್ಬಿನಲ್ಲಿ, ತರಕಾರಿ ಬೆಳೆಗಳಲ್ಲಿ ಸಾವಯವ ಕೃಷಿಯ ಮೂಲಕ ಅಧಿಕ ಇಳುವರಿ ಮಾಡಲು ಸಾಧ್ಯ ಎಂಬ ಸ್ವತಃ ಉದಾರಣೆ ಸಮೇತ ರೈತರಿಗೆ, ರೈತ ಮಹಿಳೆಯರಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮ ಸಂಯೋಜಕರಾದ ಡಾ.ರಮಿತ ಬಿ. ಈ ಅವರು ಪೌಷ್ಟಿಕ ಕೈತೋಟ, ಮಹಿಳೆಯರಲ್ಲಿ/ಮಕ್ಕಳಲ್ಲಿ ಪೌಷ್ಟಿಕತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಿದರು. ಭಾಗವಹಿಸಿದ ರೈತ ಮಹಿಳೆಯರಿಗೆ ವಿವಿಧ ತರಕಾರಿ ಬೀಜಗಳ ಕಿಟ್ ಮತ್ತು ಹಣ್ಣಿನ ಸಸಿಗಳನ್ನು ವಿತರಿಸಲಾಯಿತು. ಅಧ್ಯಕ್ಷ ಸ್ಥಾನ ವಹಿಸಿಕೊಂಡ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಗುರುದತ್ತ ಎಂ.ಹೆಗಡೆ ಅವರು ಕೃಷಿಯಲ್ಲಿ ಅನ್ನದಾತೆಯರ ಪಾತ್ರ ಮತ್ತು ಕೃಷಿಕರಿಗೆ ನಿರಂತರ ಸಹಕಾರ ನೀಡಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದು ತಿಳಿಳಿಸಿದ ಅವರು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳೆಯರ ಸಬಲೀಕರಣ ಮತ್ತು ಕೃಷಿಯಲ್ಲಿ ಮಹಿಳೆ ತರಬೇತಿಗಳಲ್ಲಿ ಭಾಗವಹಿಸಲು ಸೂಚನೆ ನೀಡಿದರು. ಡಾ.ವೆಂಕಣ್ಣ ಬಳಗಾನೂರು, ಪಶು ವಿಜ್ಞಾನಿ ಇವರು ಉಪಸ್ಥಿತರಿದ್ದರು. ಡಾ. ಸಿದ್ಧಪ್ಪ ಅಂಗಡಿ, ಹಿರಿಯ ತಾಂತ್ರಿಕ ಅಧಿಕಾರಿಗಳು ಸ್ವಾಗತಿಸಿದರು. ಡಾ. ಭವ್ಯ ಎಂ. ಆರ್, ಬೇಸಾಯ ಶಾಸ್ತçಜ್ಞರು ವಂದರ್ಣಾಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌