ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ರಕ್ಷಣೆ ಮಹಿಳೆಯರ ಪಾತ್ರ ದೊಡ್ಡದು

KannadaprabhaNewsNetwork |  
Published : Mar 09, 2025, 01:46 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಚಂದನವನ ರೈತ ಉತ್ಪಾದಕ ಕಂಪನಿಯು ಕೃಷಿ ಇಲಾಖೆ ಮತ್ತು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ   ಗ್ರಾಮದ ಹಿರಿಯ ಮಹಿಳಾ ಹೋರಾಟಗಾರ್ತಿ ಜಯಮ್ಮ ಯಲಭೋವಿ ಅವರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಿದರು. | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟ, ದೇಶದ ರಕ್ಷಣೆಗೆ, ಸಾಮಾಜಿಕ ಸೇವೆ, ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹಳ ಮಹತ್ವ ಪೂರ್ಣವಾದದ್ದು ಎಂದು ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಹೇಳಿದರು.

ಡಂಬಳ: ಸ್ವಾತಂತ್ರ್ಯ ಹೋರಾಟ, ದೇಶದ ರಕ್ಷಣೆಗೆ, ಸಾಮಾಜಿಕ ಸೇವೆ, ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹಳ ಮಹತ್ವ ಪೂರ್ಣವಾದದ್ದು ಎಂದು ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಹೇಳಿದರು.

ಡಂಬಳ ಗ್ರಾಮದ ಚಂದನವನ ರೈತ ಉತ್ಪಾದಕ ಕಂಪನಿಯು ಕೃಷಿ ಇಲಾಖೆ ಮತ್ತು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ,ಓನಕೆ ಓಬವ್ವ ಮತ್ತು ಆಧುನಿಕ ಯುಗದಲ್ಲಿ ಉತ್ತಮ ಸೇವೆ ನೀಡುತ್ತಿರುವ ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿಯವರ ಸಾಧನೆ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಎನ್ ಆರ್ ಎಲ್ ಎಂ ಸಂಸ್ಥೆಯ ಲಲಿತಾ ಜೊಂಡಿ ಮಾತನಾಡಿ, ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ದಿಟ್ಟತನದಿಂದ ಮುಂದೆ ಬಂದು ಸ್ವಾವಲಂಬಿ ಬದುಕು ಸಾಗಿಸಬೇಕು ಹಾಗೂ ಉದ್ಯಮಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಜಯಮ್ಮ ಯಲಭೋವಿ ಮಾತನಾಡಿ, ಮಹಿಳೆಯರು ಸದಾ ತನ್ನ ಕುಟುಂಬವನ್ನು, ತನ್ನ ಸಹೋದ್ಯೋಗಿಗಳನ್ನು, ತನ್ನ ಸಮುದಾಯವನ್ನು ನೋಡಿಕೊಳ್ಳಬಲ್ಲಳು ಎಂದು ಹೇಳಿದರು.

ಹಿರಿಯ ಮಹಿಳಾ ಹೋರಾಟಗಾರ್ತಿ ಜಯಮ್ಮ ಯಲಭೋವಿ ಅವರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಇಸಾಪ್ ಸಂಸ್ಥೆಯ ಸುಮೀತ್, ಆಯ್ ಟಿ ಸಿ ಕಂಪನಿಯ ಗಿರೀಶ್, ಜೈ ಕಿಸಾನ್ ಸಂಸ್ಥೆಯ ಪ್ರವೀಣ್, ಕೃಷಿ ಇಲಾಖೆಯ ಗೌರಿಶಂಕರ ಸಜ್ಜನ್, ಚಂದನವನ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಬಸವರಾಜ ಬೇವಿನಮರದ, ನಿರ್ದೇಶಕರಾದ ಬಸವರಾಜ ಹಮ್ಮಿಗಿ, ಅನೀಲಕುಮಾರ ಪಲ್ಲೇದ, ನಿಂಗರಾಜ ಓಂಟೆಲ್ಲಭೋವಿ, ಸಿಇಓ ಬೀರಪ್ಪ ಬಚೇನಳ್ಳಿ, ಡಿಇಓ ಪೂಜಾ ಕರದಾನಿ, ರೈತ ಮಹಿಳೆರಾದ ಯಲ್ಲಮ್ಮ ಬಂಡಿ, ನಿರ್ಮಲಾ ಕೊಂತಿಕೊಲ್ಲ, ಶೋಭಾ ತಳಗೇರಿ, ಲಕ್ಷ್ಮಿ ರಾಘಣ್ಣವರ, ರೇಖಾ ಜೊಂಡಿ, ಜ್ಯೋತಿ ಬಾವಿ, ಶಕುಂತಲಾ ಪ್ಯಾಟಿ, ಸುಮಿತ್ರ ಬೇವಿನಮರದ, ಶೋಭಾ ಕೊಳ್ಳಾರ, ಉಮಾ ಹಮ್ಮಿಗಿ, ಶಶಿಕಲಾ ತುಮ್ಮರಗುದ್ದಿ, ರೇಣುಕಾ ಕರದಾನಿ, ಭಾರತಿ ತುಮ್ಮರಗುದ್ದಿ, ಈರಮ್ಮ ಕರದಾನಿ, ಸುನಂದಾ ಪಲ್ಲೇದ, ರೇಣುಕಾ ಒಂಟೆಲ್ಲಭೋವಿ, ಬಾಯಕ್ಕ ಕೆರಿ ಸಿದ್ದವ್ವ ಅಣ್ಣಿಗೇರಿ, ಸಾವಿತ್ರಿ ಪಾಟೀಲ, ರಾಜೇಶ್ವರಿ ಸಾಲಿಮಠ, ಸಾವಿತ್ರಿ ಹಿರೇಮಠ, ರೇಣುಕಾ ಪಾಟೀಲ ರೈತ ಮಹಿಳೆಯರು ಇದ್ದರು. ಅಕ್ಕಮ್ಮ ಶೆಲವಡಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿ ರಾಘಣ್ಣವರ ವಂದಿಸಿದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ