ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸ್ಥಳಕ್ಕೆ ದೇವರಹಿಪ್ಪರಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳ ಮನವಿಯನ್ನು ಆಲಿಸಿದರು. ಬಳಿಕ ಮನವಿ ಪತ್ರ ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆದ ಗ್ರಾಮದ ಮಹಿಳೆಯರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಗ್ರಾಮಸ್ಥರ ಪರವಾಗಿ ಯುವ ಮುಖಂಡ ಟಿಪ್ಪು ಸುಲ್ತಾನ್ ಸಿಪಾಯಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸಿ.ಸಿ ರಸ್ತೆ, ಚರಂಡಿ, ಗ್ರಾಮದ ರಸ್ತೆ ಸುಧಾರಣೆ ಸಲುವಾಗಿ ಸಾಕಷ್ಟು ಬಾರಿ ತಿಳಿಸಿದರು ಪಂಚಾಯತಿ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂದು ಅವರ ವಿರುದ್ಧ ಆರೋಪಿಸಿದರು. ಹಾಗೂ ಸಮಸ್ಯೆ ಪರಿಹರಿಸಲು ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು.
ಇದೇ ಸಂಧರ್ಭದಲ್ಲಿ ಮುಖಂಡರಾದ ಶಂಕ್ರೆಪ್ಪ ಬಂಗಾರಗುಂಡ, ಶಫೀಕ ಸಿಪಾಯಿ, ನಿಂಗಣ್ಣ ಪಾಕಿ, ಪರಶುರಾಮ ಬಡಗೇರ, ವಾಜಿದ0, ಮೈನುದ್ದೀನ್ ಬಾಗವಾನ, ಇಬ್ರಾಹಿಂ ಹವಾಲ್ದಾರ, ಮಹ್ಮದ ಬಾಗವಾನ, ಶಕೀಲ ಪೊಲಾಸಿ, ಈರಣ್ಣ ಬಡಿಗೇರ, ತೌಫಿಕ್ ಸಿಪಾಯಿ, ಸದ್ದಾಂ ಬಿಂಜಲಬಾವಿ, ಇಸ್ಮಾಯಿಲ್ ಬಡೇಘರ, ಸದ್ದಾಂ ಪೊಲಾಸಿ, ಮುರ್ತುಜ್ ಸವಾರ, ಗಪ್ಪಾರ ಮೋಮಿನ್ ಸೇರಿದಂತೆ ಗ್ರಾಪಂ ಅಧಿಕಾರಿಗಳು, ಮುಖಂಡರು, ನೂರಾರು ಮಹಿಳೆಯರು ಭಾಗವಹಿಸಿದ್ದರು.