ಮಹಿಳಾ ದಿನಾಚರಣೆ: ಮಹಿಳೆಯರಿಗಾಗಿ ಚಿತ್ರಕಲಾ ಸ್ಪರ್ಧೆ

KannadaprabhaNewsNetwork |  
Published : Mar 10, 2026, 02:30 AM IST
ಪೊಟೊ: 09ಎಸ್‌ಎಂಜಿಕೆಪಿ07 | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಲ್ಲಿ ಸುಪ್ತವಾಗಿರುವ ಚಿತ್ರಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಅಂತಹ ಕಲಾಪ್ರತಿಭೆಗಳನ್ನು ಉತ್ತೇಜಿಸುವ ಸಲುವಾಗಿ ಮಾ. 15ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಜಿ.ಪಂ ಸಿಇಓ ಎನ್.ಹೇಮಂತ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಲ್ಲಿ ಸುಪ್ತವಾಗಿರುವ ಚಿತ್ರಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಅಂತಹ ಕಲಾಪ್ರತಿಭೆಗಳನ್ನು ಉತ್ತೇಜಿಸುವ ಸಲುವಾಗಿ ಮಾ. 15ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಜಿ.ಪಂ ಸಿಇಓ ಎನ್.ಹೇಮಂತ್‌ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ದಿನದ ಮಹತ್ವವನ್ನು ಸಾರುವುದರ ಜೊತೆಗೆ ಸಾರ್ವಜನಿಕರಲ್ಲಿ ಪರಿಸರ ಹಾಗೂ ಪ್ರಕೃತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ ಎಂದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳಾ ಸ್ಪರ್ಧಿಗಳು ಪ್ರಕೃತಿ ಎಂಬ ವಿಷಯದ ಮೇಲೆ ಚಿತ್ರವನ್ನು ಚಿತ್ರಿಸಬೇಕು. ಸ್ಪರ್ಧಿಗಳಿಗೆ 2x2.5 ಅಳತೆಯ ಕ್ಯಾನ್ವಾಸನ್ನು ಆಯೋಜಕರಿಂದ ನೀಡಲಾಗುವುದು. ಚಿತ್ರಕ್ಕೆ ಅಗತ್ಯವಾಗಿರುವ ಕುಂಚ, ಬಣ್ಣ ಇತ್ಯಾದಿ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಸ್ಪರ್ಧೆಯಲ್ಲಿ ವಿಜೇತರಿಗೆ ಮೊದಲ ಬಹುಮಾನ 8 ಸಾವಿರ ರು. , ದ್ವಿತೀಯ ಬಹುಮಾನ 6000 ರು. , ತೃತೀಯ ಬಹುಮಾನ 4000 ರು. ಹಾಗೂ ಎರಡು ಪ್ರಶಂಸಾ ಬಹುಮಾನಗಳು ಇದ್ದು, ತಲಾ 2 ಸಾವಿರ ರು. ಗಳ ನಗದು ಪುರಸ್ಕಾರದ ಜೊತೆಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು.

ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಜಿಲ್ಲೆಯಲ್ಲಿ ವಾಸವಾಗಿರುವ ಮಹಿಳೆಯರು ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಪ್ರವೇಶ ಉಚಿತವಾಗಿದ್ದು, ವಯಸ್ಸಿನ ನಿರ್ಬಂಧವಿರುವುದಿಲ್ಲ. ಆಸಕ್ತರು ತಮ್ಮ ಹೆಸರನ್ನು ಮುಂಚಿತವಾಗಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಹಾಗೂ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಜಿಲ್ಲೆಯಲ್ಲಿ ತಾವು ವಾಸವಾಗಿರುವ ಬಗ್ಗೆ ಆಧಾರ್ ಸೇರಿದಂತೆ ಯಾವುದೇ ಒಂದು ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು ಎಂದರು.

ನಕಲು ಪ್ರತಿ, ಮೊಬೈಲ್ ಹಾಗೂ ಇತರೆ ಯಾವುದೇ ಮಾಧ್ಯಮಗಳ ಮೂಲಕ ಚಿತ್ರಗಳನ್ನು ನೋಡಿಕೊಂಡು ಚಿತ್ರ ಬರೆಯಲು ಅವಕಾಶ ಇರುವುದಿಲ್ಲ. ಆಸಕ್ತರು ನೋಂದಣಿ ಮತ್ತು ಮಾಹಿತಿಗಾಗಿ ಸಹಾಯವಾಣಿ : ಮೊ.7760932206, 9483815226 ಅನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2 ಹಂತದ ಜನಗಣತಿಗೆ ಜಿಲ್ಲಾಡಳಿತ ಸಿದ್ದತೆ: ಡಾ. ಅನುರಾಧ
ಜೆಜೆಎಂ ಸ್ಟ್ಯಾಂಪ್ ಪೇಪರ್ ಹಗರಣ: ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ