ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮಹತ್ತರ: ಶಾಂತಕುಮಾರಿ

KannadaprabhaNewsNetwork |  
Published : Mar 23, 2025, 01:31 AM IST
ಏ | Kannada Prabha

ಸಾರಾಂಶ

ಶೃಂಗೇರಿ, ಮಾತೃ ಸ್ವರೂಪಿಣಿಯಾಗಿ ಕುಟುಂಬ, ಸಮಾಜ, ರಾಜಕೀಯ, ಆರ್ಥಿಕ, ಧಾರ್ಮಿಕ ಸೇರಿದಂತೆ ಸಮಾಜದ ಪ್ರಗತಿಯಲ್ಲಿ ಮುಖ್ಯವಾಹಿನಿಯಾಗಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಚಿಕ್ಕಮಗಳೂರು ಜಿಲ್ಲಾ ಸಂಚಾಲಕಿ ಶಾಂತಕುಮಾರಿ ಹೇಳಿದರು.

ಪಟ್ಟಣದ ರಾಜಾನಗರ ಶ್ರೀ ವಿದ್ಯಾಭಾರತೀ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಾತೃ ಸ್ವರೂಪಿಣಿಯಾಗಿ ಕುಟುಂಬ, ಸಮಾಜ, ರಾಜಕೀಯ, ಆರ್ಥಿಕ, ಧಾರ್ಮಿಕ ಸೇರಿದಂತೆ ಸಮಾಜದ ಪ್ರಗತಿಯಲ್ಲಿ ಮುಖ್ಯವಾಹಿನಿಯಾಗಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಚಿಕ್ಕಮಗಳೂರು ಜಿಲ್ಲಾ ಸಂಚಾಲಕಿ ಶಾಂತಕುಮಾರಿ ಹೇಳಿದರು.

ಪಟ್ಟಣದ ರಾಜಾನಗರ ಶ್ರೀ ವಿದ್ಯಾಭಾರತೀ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಹಿಳೆ ಶಕ್ತಿ ಸ್ವರೂಪಿಣಿಯಾಗಿಯೂ ಮೂರು ಮುಖ್ಯ ಕರ್ತವ್ಯ ನಿರ್ವಹಿಸುತ್ತಾಳೆ ಕತೃತ್ವ, ನೇತೃತ್ವ, ಮಾತೃತ್ವ. ಕುಟುಂಬದಲ್ಲಿ ಜವಾಬ್ದಾರಿ ಸ್ಥಾನಮಾನ ನಿರ್ವಹಿಸುತ್ತಾಳೆ. ನೇತೃತ್ವ ಎಂದರೆ ಆಡಳಿತದಲ್ಲಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೇತೃತ್ವ ವಹಿಸಿದ್ದಳು. ಇನ್ನು ಮಾತೃತ್ವ ಎಂದರೆ ತಾಯಿ ಮೊದಲ ಗುರು. ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕಲಿಸುತ್ತಾಳೆ ಎಂದು ಹೇಳಿದರು.

. ಮಾತೃತ್ವ ಹೆಣ್ಣುಮಕ್ಕಳಿಗೆ ಮಗುವಿನಿಂದಲೇ ಬರುತ್ತದೆ. ಹೆಣ್ಣು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ ಜವಾಬ್ದಾರಿ ಯುತರನ್ನಾಗಿ ಮಾಡಬೇಕು. ಮಹಿಳಾ ದಿನಾಚರಣೆ ಮಾಸದಲ್ಲಿ ಈ ಸಮಾವೇಶ ಮಾಡಿದ್ದು ತುಂಬಾ ಒಳ್ಳೆಯ ಕೆಲಸ. ಸಮಾಜದ ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಶ್ರೀ ರಾಘವೇಂದ್ರ ಭಟ್ ಮಾತನಾಡಿ ಬ್ರಾಹ್ಮಣರು ಸಂಘಟಿತ ರಾಗಬೇಕು. ಬ್ರಾಹ್ಮಣ್ಯವೆಂದರೆ ಜಾತಿ ಸೂಚಕವಲ್ಲ. ಒಂದು ಸಂಸ್ಕಾರ, ಭಾರತೀಯತೆ. ಧರ್ಮವನ್ನು, ಭಾರತೀಯತೆ, ಸಂಸ್ಕಾರ, ಸಂಸ್ಕೃತಿ ಎತ್ತಿಹಿಡಿದಿದ್ದು ಬ್ರಾಹ್ಮಣ ಸಮಾಜ ಸಂಘಟನೆಯಾಗಬೇಕು. ಸಂಘಟನೆಯೇ ಬ್ರಾಹ್ಮಣ ಶಕ್ತಿಯಾಗಬೇಕು. ಶಿಕ್ಷಣದತ್ತ ಬ್ರಾಹ್ಮಣ ಸಮಾಜ ಹೋಗಬೇಕು. ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಭಾರತೀಯತೆ, ಬ್ರಾಹ್ಮಣ್ಯ, ಸಂಸ್ಕೃತಿ, ಸಂಸ್ಕಾರಗಳನ್ನು ಅಳವಡಿಸಬೇಕು. ಬ್ರಿಟೀಷರು ಬಿಟ್ಟು ಹೋದ ಮೆಕಾಲೆ ಶಿಕ್ಷಣ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಹೋಗುತ್ತಿದೆ. ಶಿಕ್ಷಣದಲ್ಲಿ ಕ್ರಿಶ್ಚಿಯನ್ ಕರಣ ಆಗುತ್ತಿದೆ. ನಮ್ಮದೇ ಆದ ಶಿಕ್ಷಣ ವ್ಯವಸ್ಥೆ ಅಳವಡಿಸಬೇಕು. ವೇದಗಳ ಸಂರಕ್ಷಣೆ ಯಾಗಬೇಕು .ಪ್ರಾಥಮಿಕ ಹಂತದಿಂದಲೇ ವೈದಿಕ ಶಿಕ್ಷಣ ನೀಡಬೇಕು ಎಂದರು.

ತಾಲೂಕು ಬ್ರಾಹ್ಮಣ ಮಹಿಳಾ ಘಟಕದ ಅಧ್ಯಕ್ಷೆ ಕವನ ಶಾಮಸುಂದರ್ ಮಾತನಾಡಿ ಬ್ರಾಹ್ಮಣ ಸಮುದಾಯದವರು ಸಂಘಟಿತರಾಗಬೇಕು. ಅದರಲ್ಲೂ ಮಹಿಳಾ ಸಂಘಟನೆ ಬಲವರ್ಧನೆಯಾಗಬೇಕು. ಸಂಘಟನೆಯಿಂದ ವಿಮುಖ ರಾಗಬಾರದು. ಮಾತೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿಕೊಡಬೇಕು. ಪ್ರಾಚೀನ ಕಾಲದಿಂದಲೂ ಮಹಿಳೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸುತ್ತಾ ಬಂದಿದ್ದಾಳೆ. ಗಾರ್ಗಿ, ಮೈತ್ರಿಯಂತಹವರು ಉದಾಹರಣೆ. ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾದಿಸಿದ್ದಾಳೆ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪ ಘಟಕದ ಶ್ರೀ ಮಹಾಬಲರಾವ್, ತಾಲೂಕು ಬ್ರಾಹ್ಮಣ ಮಹಿಳಾ ಘಟಕದ ನಾಗಮಣಿ ಮುರುಳಿಕೃಷ್ಣ, ಲಕ್ಷ್ಮಿ ಜಯರಾಮ್, ಶ್ರೀನಿವಾಸ್ ರಾವ್, ವಿದ್ಯಾಶ್ರೀಧರ್, ಕಿರುತೆರೆ ನಟಿ ಶ್ರೀ ವಿದ್ಯಾಚಿದಂಬರ ಶಾಸ್ತ್ರಿ, ಭಾನುಪ್ರಕಾಶ್ ಶರ್ಮಮತ್ತಿತರರು ಇದ್ದರು.

22 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ರಾಜಾನಗರ ವಿದ್ಯಾಭಾರತೀ ಸಭಾಭವನದಲ್ಲಿ ತಾಲೂಕು ವಿಪ್ರ ಮಹಿಳಾ ಸಮಾವೇಶ ನಡೆಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...