ದೊಡ್ಡಬಳ್ಳಾಪುರ: ದೇಹದ ಅಭಿವೃದ್ಧಿಗೆ ಅಪೌಷ್ಟಿಕತೆಯು ಒಂದು ತೊಡಕಾಗಿದ್ದು, ಇದನ್ನು ಹೋಗಲಾಡಿಸುವಲ್ಲಿ ಮಹಿಳೆಯರ ಮಹತ್ವದ್ದಾಗಿದೆ. ಸರಿಯಾದ ಪೋಷಣೆಗೆ ಒತ್ತು ನೀಡುವ ಮೂಲಕ ದೈನಂದಿನ ಜೀವನದಲ್ಲಿ ಆಹಾರವನ್ನು ಆಯ್ಕೆ ಮಾಡಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಉಷಾ ರವೀಂದ್ರ ತಿಳಿಸಿದರು.
ತಾಲೂಕಿನ ಹಾಡೋನಹಳ್ಳಿಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಿಶು ಅಭಿವೃದ್ಧಿ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆ-2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರ ಸೇವನೆ ಎಂಬ ಧೈಯ ವಾಕ್ಯದೊಂದಿಗೆ ಪೌಷ್ಟಿಕ ಆಪಾರ ಮಾಸಾಚರಣೆ ಆಚರಿಸಲಾಗುತ್ತಿದೆ. ದೈನಂದಿನ ಆಹಾರದಲ್ಲಿ ಪೋಷಕಾಂಶಗಳ ಪಾತ್ರ ಹಾಗೂ ವೈವಿಧ್ಯಮಯ ಆಹಾರ ಗುಂಪುಗಳ ಆಯ್ಕೆ ಆಹಾರದ ತಟ್ಟೆಯ ಬಗ್ಗೆ ಅರಿವು ಇರಬೇಕು. ಆಕ್ಷತೆ ಮತ್ತು ಕಳಪೆ ಆಹಾರ ಪದ್ದತಿಗಳ ಅಪಾಯಗಳದ್ದು ಎಲ್ಲಾ ವಯಸ್ಸಿನ ಜನರು ತಮ್ಮ ಜೀವನದಲ್ಲಿ ಪೌಷ್ಟಿಕಾಂಶಕ್ಕೆ ಆದ್ಯತೆ ನೀಡಬೇಕಿದೆ ಎಂದರು.ಹಣ್ಣು ತರಕಾರಿ ಸೇವಿಸಿ:
ಕೇಂದ್ರ ಗೃಹ ವಿಜ್ಞಾನಿ ಡಾ.ಗೋಪಿಕಾ ಸಿ.ಮುತ್ತಗಿರ ಮಾತನಾಡಿ, ಸರಿಯಾದ ಪೋಷಣೆಗೆ ಒತ್ತು ನೀಡುವ ಮೂಲಕ ದೈನಂದಿನ ಅಪೌಷ್ಟಿಕತೆ, ಕಳಪೆ ಆಹಾರ ಪದ್ಧತಿಯಿಂದ ಜೀವಕ್ಕೆ ಅಪಾಯ ಅಪೌಷ್ಟಿಕತೆ ತಡೆಗೆ ಮಹಿಳೆಯರ ಪಾತ್ರ ಮುಖ್ಯ, ನಿತ್ಯ ಆಹಾರದ ತಟ್ಟೆಯ ಬಗ್ಗೆ ಅರಿವು ಅಗತ್ಯ. ಜೀವನದಲ್ಲಿ ಜನರು ತೆಗೆದುಕೊಳ್ಳುವ ಆಹಾರದ ಆಯ್ಕೆಗಳು ಹೇಗೆ ಅವರ ಆರೋಗ್ಯವನ್ನು ಕಾಮಡಿಕೊಳ್ಳಲು ಸಹಾಯ ಮಾಡುತ್ತವೆ ಹಾಗೂ ಹೆಚ್ಚಿನ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿದರು. ಮಣ್ಣಿನ ಆರೋಗ್ಯ ಕಾಪಾಡಿ:ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ಮಾತನಾಡಿ, ಉತ್ಪಾದನೆಯ ಆಪಾರದಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಮಣ್ಣಿನ ಫಲವತ್ತತೆ ಮತ್ತು ದೊರೆಯುವ ಪೋಷಕಾಂಶಗಳ ಮೇಲೆ ಅವಲಂಭಿಸವಾಗಿರುವ ಕಾರಣ, ಮಣ್ಣಿಗೆ ಹೆಚ್ಚಿನ ಸಾವಯವ ಗೊಬ್ಬರಗಳು, ಜೈವಿಕ ಗೊಬ್ಬರಗಳು ಮತ್ತು ಹಸಿರೆಲೆ ಗೊಬ್ಬರಗಳು ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆಯೊಂದಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡರೆ ಸ್ವಾಭಾವಿಕವಾಗಿ ಉತ್ಪಾದನೆಯಾದ ಆಯನವು ಪೋಷಕಾಂಶ ಭರಿತವಾಗಿರುತ್ತದೆ ಎಂದು ತಿಳಿಸಿದರು.
ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ:ಕಾರ್ಯಕ್ರಮದಲ್ಲಿ ರೈತ ಮಹಿಳೆಯರು ಪ್ರದರ್ಶಿಸಿದ್ದ ವಿವಿಧ ರೀತಿಯ ಪೋಷಕಾಂಶಯುಕ್ತ ಹಣ್ಣು ಮತ್ತು ತರಕಾರಿಗಳು ಸಿರಿಧಾನ್ಯಾಧಾರಿತ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ಕ್ರಾಂತಿ ಕಿರಣ್ ವೀಕ್ಷಿಸಿ, ಅಂಗನವಾಡಿ ಶಿಕ್ಷಕಿಯರು ಹಾಗೂ ಮಹಿಳೆಯರಿಗೆ ಕಾನೂನಿನ ಬಗ್ಗೆ ಅರಿವು ಅಗತ್ಯ ಎಂದು ತಿಳಿಸಿದರು.
ಹಾಡೋನಹಳ್ಳಿ ಗ್ರಾಪಂ ಸದಸ್ಯ ಎಚ್ ಎನಾಗರಾಜು ಮಾತನಾಡಿ, ಪೌಷ್ಟಿಕ ಆಹಾರದ ಮಹತ್ವ ಮತ್ತು ಪೋಷಕರಿಗೆ ಪೌಷ್ಟಿಕ ಆಹಾರದ ಬಗ್ಗೆ ತಿಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರವಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುಕ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತ ಲಕ್ಷ್ಮೀ, ಘಾಟಿ ವೃತ್ತದ ಮೇಲ್ವಿಚಾರಕಿ ಲಕ್ಷ್ಮೀ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಜಿ.ಈಶ್ವರಪ್ಪ, ವೀರನಾಗಪ್ಪ, ಜಿ.ಕೆ.ನಿಂಗರಾಜು ಭಾಗವಹಿಸಿದ್ದರು.
23ಕೆಡಿಬಿಪಿ1-ದೊಡ್ಡಬಳ್ಳಾಪುರದ ಹಾಡೋನಹಳ್ಳಿ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆ-2025 ಕಾರ್ಯಕ್ರಮಕ್ಕೆ ಕೃಷಿ ವಿವಿ ಪ್ರಾಧ್ಯಾಪಕರಾದ ಡಾ.ಉಪಾ ರವೀಂದ್ರ ಚಾಲನೆ ನೀಡಿದರು.