26 ರಂದು ಮಹಿಳಾ ಸ್ವ ಸಹಾಯ ಸಂಘಗಳ ಸಮಾವೇಶ

KannadaprabhaNewsNetwork | Published : Apr 21, 2025 12:53 AM

ಸಾರಾಂಶ

ತರೀಕೆರೆ, ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಳೇಬೀಡಿನ ಶ್ರೀಮಠ ಪುಷ್ಪಗಿರಿಯಿಂದ ಏ. 26 ರಂದು ಮಧ್ಯಾನ 3 ಗಂಟೆಗೆ ಹೊಸದುರ್ಗ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪುಷ್ಪಗಿರಿ ಮಹಿಳಾ ಸ್ವ-ಸಹಾಯ ಸಂಘಗಳ ಸಮಾವೇಶ ಮತ್ತು ಸಾಂಸ್ಕೃತಿಕ ಉತ್ಸವ ನಡೆಯಲಿದೆ ಎಂದು ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ.

ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿ ಮಾಹಿತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಳೇಬೀಡಿನ ಶ್ರೀಮಠ ಪುಷ್ಪಗಿರಿಯಿಂದ ಏ. 26 ರಂದು ಮಧ್ಯಾನ 3 ಗಂಟೆಗೆ ಹೊಸದುರ್ಗ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪುಷ್ಪಗಿರಿ ಮಹಿಳಾ ಸ್ವ-ಸಹಾಯ ಸಂಘಗಳ ಸಮಾವೇಶ ಮತ್ತು ಸಾಂಸ್ಕೃತಿಕ ಉತ್ಸವ ನಡೆಯಲಿದೆ ಎಂದು ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ.

ಭಾನುವಾರ ಪಟ್ಟಣದ ಶ್ರೀ ಬೂದಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶ್ರೀ ಕ್ಷೇತ್ರ ಪುಷ್ಪಗಿರಿ ಮಹಾ ಸಂಸ್ಥಾನ ಸುಂದರ ಪ್ರವಾಸಿ ತಾಣವಾಗಿ ಬೆಳೆದಿದೆ. ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮುನ್ನೆಲೆಗೆ ಬಂದಿದೆ. 2020ರಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸ ಸಿದ್ದು, 12 ಜಿಲ್ಲೆಗಳಲ್ಲಿ ಸ್ವಸಹಾಯ ಸಂಘಗಳನ್ನು ತೆರೆಯಲಾಗಿದೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮಹಿಳೆ ಯರು ಮಂದೆ ಬರಬೇಕು. ಸಂಘದ ಸದಸ್ಯರಿಗೆ ಸ್ವಯಂ ಉದ್ಯೋಗದ ಬಗ್ಗೆ ಮತ್ತು ಮಹಿಳೆಯರು ಸ್ವಾವಲಂಬಿಗಳಾಗಲು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.ಗ್ರಾಮಗಳಲ್ಲಿ ಯುವಕರನ್ನು ಗುರುತಿಸಿ ಕೃಷಿ ಉತ್ತೇಜಿಸಲು ಹತ್ತು ಜನ ಯುವ ರೈತರನ್ನು ಒಗ್ಗೂಡಿಸಿ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಅವರನ್ನು ಸಮಾಜದಲ್ಲಿ ಮುನ್ನಲೆಗೆ ತರಲಾಗುವುದು, ಜಾತಿ ಧರ್ಮಕ್ಕೆ ಸೀಮಿತ ವಾಗದೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪುಷ್ಪಗಿರಿ ಮಹಿಳಾ ಸ್ವ-ಸಹಾಯ ಸಂಘಗಳ ಸಮಾವೇಶ ದಲ್ಲಿ ಮಹಾಸಂಸ್ಥಾನದ ಸಿಂಹಸನಾಧೀಶ್ವರ 1108 ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ಚಲನಚಿತ್ರ ನಟರು ಮತ್ತಿತರರು ಭಾಗವಹಿಸಲಿದ್ದಾರೆ. ಹೊಸದುರ್ಗದಲ್ಲಿ ನಡೆಯುತ್ತಿರುವುದು 4ನೇ ಸಮಾವೇಶ.ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಮುಖಂಡರಾದ ವಕೀಲರು ರವಿ ಶಾನುಬೋಗ್, ಎಲ್.ಐ.ಸಿ.ಪ್ರತಿನಿಧಿ ಕೆ.ವಿ.ಬಾಬು, ನಟರಾಜ್, ರಾಜಪ್ಪ, ಮತ್ತಿತರರು ಭಾಗವಹಿಸಿದ್ದರು.ಸಿ

---------------ಫೋಟೋ ಇದೆಃ20ಕೆಟಿಆರ್.ಕೆ.2ಃ ತರೀಕೆರೆಯಲ್ಲಿ ಏರ್ಪಾಡಾಗಿದ್ದ ಸುದ್ದಿಗೋಷ್ಟಿಯಲ್ಲಿ ಶ್ರೀ ಮಠ ಪುಷ್ಪಗಿರಿ ಶ್ರೀ ಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ ಶ್ರೀಮದ್ ಶ್ರೀಶೈಲ ಪುಷ್ಪಗಿರಿ ಸೂರ್ಯ ಸಿಂಹಸನಾಧೀಶ್ವರ 1108 ಜಗದ್ಗುರು ಪರಮಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಮಾತನಾಡಿದರು. ಮುಖಂಡರಾದ ವಕೀಲರು ರವಿಶಾನುಬೋಗ್, ಎಲ್.ಐ.ಸಿ.ಪ್ರತಿನಿಧಿ ಕೆ.ವಿ.ಬಾಬುಮತ್ತಿತರರು ಇದ್ದಾರೆ. --------------------

Share this article