ಕನ್ನಡಪ್ರಭ ವಾರ್ತೆ ನಾಪೋಕ್ಲು
ಮೂರ್ನಾಡು ಗೌಡ ಮಹಿಳಾ ಒಕ್ಕೂಟ ವತಿಯಿಂದ ಮೂರ್ನಾಡು ಪ್ರಕೃತಿ ಕಾಂಪ್ಲೆಕ್ಸ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಗೌಡ ಮಹಿಳಾ ಒಕ್ಕೂಟ ಮೂರ್ನಾಡು
ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇತಿಹಾಸ ನೋಡಿದರೆ ಮಹಿಳೆಯರು ಯಾವಾಗಲೂ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ ಹಲವಾರು ಸಂದರ್ಭಗಳಲ್ಲಿ ಅವರ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಸರಿಯಾದ ವೇದಿಕೆ ದೊರಕಿಲ್ಲ. ಅಂತಹ ಸಮಯದಲ್ಲಿ ಈ ಮಹಿಳಾ ಒಕ್ಕೂಟ ಮಹಿಳೆಯರಿಗೆ ಒಂದು ಹೊಸ ದಾರಿ ತೋರಿಸುವ ವೇದಿಕೆಯಾಗಲಿದೆ. ಈ ಒಕ್ಕೂಟದ ಮೂಲಕ ಮಹಿಳೆಯರು ಶಿಕ್ಷಣ, ಸಮಾಜಸೇವೆ, ಕ್ರೀಡೆ, ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕಲು ಆಶಯ ಸಿಗಲಿದೆ ಎಂದು ಶುಭ ಹಾರೈಸಿದರು.
ಮನೋರಂಜನೆ ಕ್ರೀಡೆಯನ್ನು ಉದ್ಘಾಟಿಸಿದ ಹಾಕತ್ತೂರ್ ಮುಖ್ಯ ಶಿಕ್ಷಕರಾದ ತೆಕ್ಕಡೆ ಕುಮಾರಸ್ವಾಮಿ ಅವರು ಮಾತನಾಡಿ, ಇಂದು ಮಹಿಳಾ ದಿನಾಚರಣೆಯ
ದಿನನಿತ್ಯ ಮನೆಯ ಕೆಲಸ, ಕುಟುಂಬದ ಜವಾಬ್ದಾರಿ ಮತ್ತು ಸಮಾಜದ ಕರ್ತವ್ಯಗಳಲ್ಲಿ ತುಂಬಾ ನಿರತರಾಗಿರುತ್ತಾರೆ. ಆದರೆ ಜೀವನದಲ್ಲಿ ಸಂತೋಷ,
ಮುಖ್ಯ ಭಾಷಣಕಾರರಾಗಿ ಮಾತನಾಡಿದ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತರಾದ ಕಟ್ಟೆಮನೆ ಪ್ರೇಮ ಗಣೇಶ್ ಅವರು ಮಾತನಾಡಿ, ಇಂದು ಗೌಡ ಮಹಿಳಾ ಒಕ್ಕೂಟದ
ಸಂಘದ ಅಭಿವೃದ್ಧಿಗೆ ಕಾರಣಕರ್ತರಾದ ಮೆರ್ಕಜ್ಜೆ ಲೋಹಿತ್ ಸೋಮಯ್ಯ ಹಾಗೂ ಮೆರ್ಕಜ್ಜೆ ಕೃತಿಕಾ ಪ್ರಮೋದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರು ಆದ ಕಲ್ಲುಮುಟ್ಲು ಜಶ್ಮಿ ಚಿಂತು ವಹಿಸಿ ಮಾತನಾಡಿ, ಇಂದಿನ ಸಮಾಜ ದಲ್ಲಿ ಮಹಿಳೆಯ
ಮಹಿಳೆಯರ ಕಲಾ ಪ್ರತಿಭೆಗಳನ್ನು ಹೊರಹಾಕಲು ಒಳ್ಳೆ ವೇದಿಕೆ. ಮುಂದಿನ ದಿನಗಳಲ್ಲಿ ಒಳ್ಳೆ ಒಳ್ಳೆ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಒಕ್ಕೂಟದ ಸಹಾಯದಿಂದ ಅಭಿವೃದ್ಧಿ
ಹೊಂದಲು ಸಾಧ್ಯ ಎಂದು ಹೇಳಿದರು.ತೆಕ್ಕಡೆ ಭವ್ಯ ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದರು. ಈ ಸಂದರ್ಭ ಮೂರ್ನಾಡ್ ಗೌಡ ಸಮಾಜದ ಅಧ್ಯಕ್ಷರು ಆದ ಪಾಣತ್ತಲೆ ಹರೀಶ್, ಕಾರ್ಯದರ್ಶಿ
ಮೆರ್ಕಜ್ಜೆ ಲೋಹಿತ್ ಸೋಮಯ್ಯ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.ತೆಕ್ಕಡೆ ಆಶಾ, ಕಲ್ಲುಮುಟ್ಲು ಲತಾ, ಜಯಮಾಲಾ ಪ್ರಾರ್ಥನೆ ನೆರವೇರಿಸಿದರು. ಮುಕ್ಕಾಟಿ ಚುಷ್ಮಾ ಸ್ವಾಗತಿಸಿದರು, ಅಂಚೆ ಮನೆ ದಮಯಂತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಬೈಲೋಳಿ ಮೇನಕಾ ಅವರು ವಂದಿಸಿದರು.
ಈ ಸಂದರ್ಭದಲ್ಲಿ ತಸ್ವಿ ಬೋಟಿಕ್ ಅವರ ಸೀರೆ ಪ್ರದರ್ಶನ ಮತ್ತು ಮಾರಾಟ ಮೇಳ ಈ ಕಾರ್ಯಕ್ರಮದ ವಿಶೇಷವಾಗಿತ್ತು.