ಸೈಬರ್ ಅಪರಾಧಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಿ

KannadaprabhaNewsNetwork |  
Published : Jul 25, 2026, 01:45 AM IST
 24 ಜೆ.ಜಿ.ಎಲ್.1)  ಪತ್ರಿಕಾ ವರದಿ ಫಲಶೃತಿ : ಜಾಗೃತಗೊಂಡ ಅಧಿಕಾರಿಗಳು, ಚಿಕ್ಕಮಲ್ಲನಹೊಳೆ ರಸ್ತೆಗೆ ತಾತ್ಕಾಲಿಕ ಮುಕ್ತಿಗೊಂಡಿರುವ ದೃಷ್ಯ. | Kannada Prabha

ಸಾರಾಂಶ

ಕಡೂರುಮಹಿಳೆಯರು ಸೈಬರ್ ಅಪರಾಧಗಳ ಪ್ರಕರಣಗಳ ಬಗ್ಗೆ ಹೆಚ್ಚು ಜಾಗೃತರಾಗಬೇಕು ಎಂದು ಪಿಎಸ್ಐ ಲೀಲಾವತಿ ತಿಳಿಸಿದರು.

ಸಾಮಾಜಿಕ, ಆರ್ಥಿಕ ಕಾರ್ಯಾಗಾರದಲ್ಲಿ ಪಿಎಸ್ಐ ಲೀಲಾವತಿ

ಕನ್ನಡಪ್ರಭ ವಾರ್ತೆ ಕಡೂರು

ಮಹಿಳೆಯರು ಸೈಬರ್ ಅಪರಾಧಗಳ ಪ್ರಕರಣಗಳ ಬಗ್ಗೆ ಹೆಚ್ಚು ಜಾಗೃತರಾಗಬೇಕು ಎಂದು ಪಿಎಸ್ಐ ಲೀಲಾವತಿ ತಿಳಿಸಿದರು.

ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಗ್ರಾಮೀಣ ಕೂಟ ಹಾಗೂ ಕ್ರೆಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಷನ್‌ ನಿಂದ ಏರ್ಪಡಿಸಿದ್ದ ಸಾಮಾಜಿಕ, ಆರ್ಥಿಕ ಕಾರ್ಯಾಗಾರದಲ್ಲಿ ಕಾನೂನು ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ.

ವಂಚಕರು ವೃದ್ಧರು, ಮಹಿಳೆಯರ ಅಸಹಾಯಕತೆ ಹಾಗೂ ಅರಿವಿನ ಕೊರತೆ ಬಳಸಿಕೊಂಡು ಅವರನ್ನು ಸುಲಿಗೆ ಮಾಡು ವುದು ಸಾಮಾನ್ಯ ಎಂಬಂತೆ ಆಗುತ್ತಿದೆ. ಮೊಬೈಲ್ ಮೂಲಕ ಜಾಲತಾಣಗಳ ದುರ್ಬಳಕೆ, ಒಟಿಪಿ ಮೂಲಕ ವಂಚಿಸ ಲಾಗುತ್ತಿದೆ. ಈ ಬಗ್ಗೆ ಎಚ್ಚರವಿರಲಿ ತೊಂದರೆ ಸಂಭವಿಸಿದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆ ಅಥವಾ ಸಹಾಯವಾಣಿ 1930 ಸಂಪರ್ಕಿಸಲು ಸಲಹೆ ನೀಡಿದರು.

ಗ್ರಾಮೀಣ ಕೂಟ ಸಂಸ್ಥೆ ಜೋನಲ್ ಮ್ಯಾನೇಜರ್ ಎಂ.ಕೆ. ಲೋಕೇಶ್ ಮಾತನಾಡಿ ಗ್ರಾಮೀಣ ಕೂಟ ಮತ್ತು ಕ್ರೆಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಷನ್‌ ನಿಂದ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಜತೆಗೆ ಅವರಲ್ಲಿ ಸಾಮಾಜಿಕ ಕಳಕಳಿ ಮೂಡಿಸಲಾಗುತ್ತಿದೆ.

ಸಂಸ್ಥೆ ಕಳೆದ 27 ವರ್ಷಗಳಿಂದ 17 ರಾಜ್ಯಗಳಲ್ಲಿ 45 ಲಕ್ಷಕ್ಕೂ ಅಧಿಕ ಸದಸ್ಯರು, 22 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ಸಾಲ ಸೌಲಭ್ಯದ ಮೂಲಕ ಆರ್ಥಿಕವಾಗಿ ಸದೃಢಗೊಳಿಸುವ ಹಾಗೂ ಸಾಮಾಜಿಕ ಕಳಕಳಿ ಮೂಡಿಸಿ ನೆರವು ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಬಾಲಕಿ ಯರಿಗೆ ಪುರಸ್ಕಾರ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಪೀಠೋಪಕರಣ ಒದಗಿಸಲಾಗುತ್ತಿದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ಆಕ್ಸಿಸ್ ಬ್ಯಾಂಕ್‌ ವ್ಯವಸ್ಥಾಪಕ ಮಾರುತಿ, ಗ್ರಾಮೀಣ ಕೂಟದ ಪ್ರಾದೇಶಿಕ ವ್ಯವಸ್ಥಾಪಕ ಗಿರೀಶ್, ಏರಿಯಾ ಮ್ಯಾನೇಜರ್ ಕುಮಾರಸ್ವಾಮಿ ಮತ್ತಿತರಿದ್ದರು.ಪೋಟೊ

22 ಕೆಡಿಆರ್2

(ಕಡೂರು ಪಟ್ಟಣದ ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಗ್ರಾಮೀಣ ಕೂಟ ಹಾಗೂ ಕ್ರೆಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಷನ್ ವತಿಯಿಂದ ಸಾಮಾಜಿಕ ಅರ್ಥಿಕ ಕಾರ್ಯಾಗಾರ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆದುಳಿನ ಕಾಯಿಲೆಗಳಿಗೆ ಹಾಸನದಲ್ಲೇ ಪರಿಣತ ಚಿಕಿತ್ಸೆ ಲಭ್ಯ
27ರಂದು ಶಾಸಕರ ಮನೆ ಎದುರು ಅನಿರ್ದಿಷ್ಟ ಧರಣಿ