ಮಹಿಳೆಯರು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಿ: ನಟಿ ಪೂಜಾ ಗಾಂಧಿ

KannadaprabhaNewsNetwork |  
Published : Dec 16, 2025, 01:30 AM IST
ಪೋಟೋ: 15ಎಂಜಿಕೆಪಿ05 | Kannada Prabha

ಸಾರಾಂಶ

ಮಹಿಳೆಯರು ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಜತೆಯಲ್ಲಿ ಸಂಘಟಿತರಾಗಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮುಂಗಾರು ಮಳೆ ನಟಿ ಪೂಜಾ ಗಾಂಧಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಿಳೆಯರು ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಜತೆಯಲ್ಲಿ ಸಂಘಟಿತರಾಗಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮುಂಗಾರು ಮಳೆ ನಟಿ ಪೂಜಾ ಗಾಂಧಿ ಅಭಿಪ್ರಾಯಪಟ್ಟರು.

ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಜಿಲ್ಲೆ 318ರ ವತಿಯಿಂದ ಆಯೋಜಿಸಿದ್ದ “ಶೋಭಾ-ಜಿಲ್ಲಾ ಸಮಾವೇಶ” ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮಾಜಿಕ ಅರಿವು ಮೂಡುತ್ತದೆ ಎಂದು ತಿಳಿಸಿದರು.

ಇನ್ನರ್ ವ್ಹೀಲ್ ಸಂಸ್ಥೆ ಪ್ರಪಂಚದಾದ್ಯಂತ ವಿಶೇಷ ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ಮಹಿಳಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹೆಚ್ಚು ಹೆಚ್ಚು ಸದಸ್ಯರು ಇಂತಹ ಸಂಸ್ಥೆಗಳನ್ನು ಸೇರುವುದರ ಮುಖಾಂತರ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ನಮಗಾಗುವ ಸೋಲುಗಳನ್ನು ಸವಾಲಾಗಿ ತೆಗೆದುಕೊಳ್ಳಬೇಕು ಎಂದರು. ಕುವೆಂಪು ಗೀತೆಗಳನ್ನು ಮತ್ತು ಮುಂಗಾರು ಮಳೆಯ ಕುಣಿದು ಕುಣಿದು ಬಾರೆ ಗೀತೆಯನ್ನು ಹಾಡಿದರು.

ಇನ್ನರ್ ವ್ಹೀಲ್ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ಮಾತನಾಡಿ, ಇನ್ನರ್ ವ್ಹೀಲ್ ಜಿಲ್ಲೆಯ ಎಲ್ಲಾ ಸದಸ್ಯರು, ಮಾಜಿ ಚೇರ್ಮನ್‌ಗಳ ಸಹಕಾರದಿಂದ ಎಲ್ಲಾ ಇನ್ನರ್‌ವ್ಹೀಲ್ ಕ್ಲಬ್‌ಗಳು ಒಂದುವರೆ ಕೋಟಿ ರು.ಗೂ ಹೆಚ್ಚು ಸಮುದಾಯಗಳ ಸೇವೆ ಮಾಡಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ. ತಾಯಿ ಆಶೀರ್ವಾದದಂತೆ ಜಿಲ್ಲಾ ಸಮಾವೇಶವನ್ನು ಭಕ್ತಿ ಹಾಗೂ ಪ್ರಾಮಾಣಿಕವಾಗಿ ಮಾಡುವುದರ ಮುಖಾಂತರ ಅವರಿಗೆ ಈ ಸಮಾವೇಶ ಸಮರ್ಪಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಇನ್ನರ್‌ವ್ಹೀಲ್ ಜಿಲ್ಲಾ ಮಾಜಿ ಚೇರ್ಮನ್ ಭಾರತಿ ಚಂದ್ರಶೇಖರ್, ಸಮಾವೇಶದ ಕಾರ್ಯದರ್ಶಿ ವೀಣಾ ಹರ್ಷ, ವಾರಿಜಾ ಜಗದೀಶ್, ಶಿವಮೊಗ್ಗ ನಗರದ ಐದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರಾದ ವೀಣಾ ಸುರೇಶ್, ಲತಾ ರಮೇಶ್, ಅನ್ನಪೂರ್ಣ ರಂಗನಾಥ್, ಶಾರದಾ ಬಸವರಾಜ್, ಶೀಲಾ ಸುರೇಶ್, ಜಿಲ್ಲಾ ಕಾರ್ಯದರ್ಶಿ ಉಮಾ ಮಹೇಶ್, ವೈಸ್ ಚೇರ್ಮನ್ ರಜಿನಿ ಭಟ್, ವೈಶಾಲಿ ಕುಡುವ, ದೀಪಾ ಭಂಡಾರಿ, ಸಹನ ನಾಗರಾಜ್, ಕವಿತ ನಿಯತ್, ಅನಿತಾ, ಬಿಂದು ವಿಜಯಕುಮಾರ್, ಅನುರಾಧ ಗಿರಿಮಾಜಿ, ಮಮತಾ ಸುಧೀಂದ್ರ, ರಾಜೇಶ್ವರಿ ಪ್ರತಾಪ್, ಆಶಾ ಶ್ರೀಕಾಂತ್, ವಿಜಯ ರಾಯ್ಕರ್, ಜಯಂತಿ ವಾಲಿ, ವಾಣಿ ಪ್ರವೀಣ್, ಮಧುರ ಮಹೇಶ್, ಜ್ಯೋತಿ ಸುಬ್ಬೇಗೌಡ, ವೇದ ನಾಗರಾಜ್, ಪೂರ್ಣಿಮಾ ನರೇಂದ್ರ, ಗೀತಾ ಬಸವ ಕುಮಾರ್, ಸುನಂದ ಜಗದೀಶ್, ವಿದ್ಯಾ ಮಂಜುನಾಥ್, ನಮಿತಾ ಸೂರ್ಯ ನಾರಾಯಣ್, ಕಾರ್ಯದರ್ಶಿಗಳು, ಎಂಟು ಜಿಲ್ಲೆಗಳಿಂದ 700ಕ್ಕೂ ಹೆಚ್ಚು ಜನ ಇನ್ನರ್‌ವ್ಹೀಲ್ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!