ಮಹಿಳೆಯರು ಸಾವಿತ್ರಿ ಬಾಯಿ ಫುಲೆಯವರನ್ನು ಅನುಸರಿಸಬೇಕು-ಶಾಮಲಾ

KannadaprabhaNewsNetwork |  
Published : Jan 05, 2025, 01:33 AM IST
ಫೋಟೊ ಶೀರ್ಷಿಕೆ: 3ಹೆಚ್‌ವಿಆರ್5ಹಾವೇರಿ ತಾಲೂಕಿನ ಕರ್ಜಗಿ ಗ್ತಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನ ಆಚರಿಸಲಾಯಿತು.  | Kannada Prabha

ಸಾರಾಂಶ

ಸಮಾಜ ಸುಧಾರಣೆಯ ಕಾರ್ಯಗಳನ್ನು ಮಾಡುತ್ತಾ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪ್ರೋತ್ಸಾಹದಾಯಕ ಪುರುಷನ ಪ್ರೇರಣೆಯಿಂದ ಸಾವಿತ್ರಿ ಬಾಯಿ ಫುಲೆಯವರನ್ನು ಇಂದಿನ ಮಹಿಳಾ ಮಣಿಗಳು ಅನುಸರಿಸಿದ್ದೆ ಆದರೆ ಸಮಾಜ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ ಎಂದು ಶಿಕ್ಷಕಿ ಶಾಮಲಾ ಲೋತಿಮಠ ಅಭಿಪ್ರಾಯ ಪಟ್ಟರು.

ಹಾವೇರಿ: ಸಮಾಜ ಸುಧಾರಣೆಯ ಕಾರ್ಯಗಳನ್ನು ಮಾಡುತ್ತಾ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪ್ರೋತ್ಸಾಹದಾಯಕ ಪುರುಷನ ಪ್ರೇರಣೆಯಿಂದ ಸಾವಿತ್ರಿ ಬಾಯಿ ಫುಲೆಯವರನ್ನು ಇಂದಿನ ಮಹಿಳಾ ಮಣಿಗಳು ಅನುಸರಿಸಿದ್ದೆ ಆದರೆ ಸಮಾಜ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ ಎಂದು ಶಿಕ್ಷಕಿ ಶಾಮಲಾ ಲೋತಿಮಠ ಅಭಿಪ್ರಾಯ ಪಟ್ಟರು.ತಾಲೂಕಿನ ಕರ್ಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ 194ನೇ ಜನ್ಮದಿನದ ಪ್ರಯುಕ್ತ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಸಾವಿತ್ರಿ ಬಾಯಿ ಫುಲೆ ಅವರು ಸಮಾಜದಲ್ಲಿ ಅಸ್ಪೃಶ್ಯತೆ, ಲಿಂಗ ಸಮಾನತೆ, ಮತ್ತು ಶಿಕ್ಷಣದ ಅಗತ್ಯತೆ ಕುರಿತು ಹೋರಾಟ ನಡೆಸಿದರು. ಅಸ್ಪೃಶ್ಯರು ಮತ್ತು ಶೋಷಿತ ವರ್ಗಗಳಿಗೆ ಸಮಾನ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ಮಹಿಳೆಯರು ಮತ್ತು ಅಸ್ಪೃಶ್ಯರಿಗೆ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಪ್ರಯತ್ನಿಸಿದರು ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ್ ನೀರಲಗಿ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಇಂದಿಗೂ ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಸಮಾನತೆಗೆ ಪ್ರೇರಣಾದಾಯಕ ವ್ಯಕ್ತಿತ್ವ. ಅವರ ಜೀವನ ಮತ್ತು ಕೊಡುಗೆ ನಮ್ಮನ್ನು ಸಮಾನತೆಯ ಸಮಾಜದ ನಿರ್ಮಾಣದತ್ತ ಪ್ರೇರೇಪಿಸುತ್ತದೆ ಎಂದರು. ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಶಿಕ್ಷಕರ ಸಂಘಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.ಇದೆ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ವತಿಯಿಂದ ಶಾಲೆಯಲ್ಲಿನ ಮಹಿಳಾ ಶಿಕ್ಷಕಿಯರನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಗಿರಿಜಾ ಅಣ್ಣಿ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಲತಾ ಕಳ್ಳಿಹಾಳ ಮಾನವ ಬಂಧುತ್ವ ವೇದಿಕೆಯ ಸದಸ್ಯೆ ಕವಿತಾ ಪ್ರಕಾಶ, ಶಾಲೆಯ ಮುಖ್ಯ ಶಿಕ್ಷಕ, ಸಹ ಶಿಕ್ಷಕ ಶಿಕ್ಷಕಿಯರು, ಗ್ರಾಪಂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಿದ್ದಲಿಂಗಯ್ಯ ಕಮತರ ಸ್ವಾಗತಿಸಿದರು. ಪ್ರಕಾಶ ಮಾನವಾಚಾರಿ ನಿರೂಪಿಸಿದರು. ಉಮೇಶ ಮಾದಪ್ಪನವರ ವಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌