ಹೊಸಕೋಟೆ: ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ವಿವಿಧ ಕೌಶಲ್ಯಗಳ ತರಬೇತಿ ಪಡೆದು ಆರ್ಥಿಕ ಆದಾಯ ಕಂಡುಕೊಳ್ಳಬೇಕು ಎಂದು ಹೊಸಕೋಟೆ ಜೆಎಂಎಫ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ನಿರ್ಮಲಾ ತಿಳಿಸಿದರು.
ಡಾ.ಮಾಲಿನಿ ಮಾತನಾಡಿ, ಟೈಲರಿಂಗ್ ತರಬೇತಿ ಪಡೆದ ಮಹಿಳೆಯರು ಇಲ್ಲಿ ನೀಡಿರುವ ಪ್ರಮಾಣಪತ್ರಗಳನ್ನು ಬಳಸಿಕೊಂಡು ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಹಾಗೂ ಅಂಗಡಿ ಮಾಡಲು ಸಹಾಯಧನ ಲಭ್ಯವಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಹೆಣ್ಣು ಮಕ್ಕಳು ಸ್ವಂತ ಹೊಲಿಗೆ ಮತ್ತು ಗಾರ್ಮೆಂಟ್ಸ್ ಉದ್ಯಮದಿಂದ ಕೋಟ್ಯಂತರ ರು. ವಹಿವಾಟು ನಡೆಯುತ್ತಿದ್ದು, ಉದ್ಯಮಿದಾರರು ಅಥವಾ ಅಂಗಡಿ ಮಾಲೀಕರಾಗಿ ಹತ್ತಾರು ಮಹಿಳೆಯರಿಗೆ ಉದ್ಯೋಗ ನೀಡಬಹುದು ಎಂದರು.ಈ ವೇಳೆ ಪೇದೆ ಶ್ವೇತಾ, ಸರ್ಕಾರಿ ಅಭಿಯೋಜಕರಾದ ಪ್ರಶಾಂತ್, ಟೈಲರಿಂಗ್ ತರಬೇತಿ ಕೇಂದ್ರದ ಅಧ್ಯಕ್ಷೆ ರೂಪಾ, ನವಕರ್ನಾಟಕ ರಾಜ್ಯ ಪ್ರೆಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ.ಶ್ರೀನಿವಾಸ್ ಗೌಡ, ಮಹಿಳಾ ಕಾರ್ಮಿಕ ಘಟಕ ರಾಜ್ಯಾಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಶೋಭ, ಕಾರ್ಮಿಕ ಪರಿಷತ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪೂಜಾ, ಮುಖಂಡರಾದ ಕೃಷ್ಣಪ್ಪ ಇತರರಿದ್ದರು.(ಡಿಸಿ ಸುದ್ದಿನಲ್ಲಿ ಸಿಂಗಲ್ ಕಾಲಂ ಫೋಟೋ)
ಪೋಟೋ: 16 ಹೆಚ್‌ಎಸ್‌ಕೆ 2ಹೊಸಕೋಟೆಯ ರೂಪಾ ಹೊಲಿಗೆ ತರಬೇತಿ ಕೇಂದ್ರದಲ್ಲಿ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.