ಸವಣೂರು: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೇ ಅದು ರಾಷ್ಟ್ರೀಯ, ಜನಾಂಗಿಯ, ಭಾಷಾವಾರು ಸಾಂಸ್ಕೃತಿಕ ಆರ್ಥಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿ ಎಲ್ಲ ರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿ ಸುನಂದಾ ಚಿನ್ನಾಪುರ ಹೇಳಿದರು.
ಗ್ರಾಪಂ ಅಧ್ಯಕ್ಷೆ ಕಮಲವ್ವ ಹುಲಗೂರು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ರೇಣವ್ವ ತಳವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ ಕರೆಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆ ಎಂದರೆ ಸ್ಫೂರ್ತಿ, ಮಹಿಳೆ ಎಂದರೆ ಜ್ಯೋತಿ, ಮಹಿಳೆ ಎಂದರೆ ಸೌಂದರ್ಯದ ಗಣಿ, ಮಹಿಳೆ ಎಂದರೆ ಸಹನಾ ಮೂರ್ತಿ... ಹೀಗೆ ನಾನಾ ಪದಗಳಿಂದ ವರ್ಣಿಸಿದರೂ ಆಕೆ ವರ್ಣನಾತೀತಳು ಎಂದರು.ಗ್ರಾಪಂ ಸದಸ್ಯರಾದ ಸುರೇಶ್ ಗುಜರಿ, ಕಲ್ಲಪ್ಪ ಗುಂಜಳ, ಚಿಕ್ಕಪ್ಪ ಹಡಪದ, ಬಸಪ್ಪ ಕೌದಿ, ರುದ್ರವ್ವ ತಿಮ್ಮಯ್ಯನವರ, ಗಿರಿಜವ್ವ ಧರಿಯಪ್ಪನವರ, ನೀಲಮ್ಮ ಕಮ್ಮಾರ, ಈರವ್ವ ಜೇಕನಕಟ್ಟಿ, ಶಕುಂತಲಾ ಸವಣೂರು, ಗ್ರಾಪಂ ಕಾರ್ಯದರ್ಶಿ ಬಸವರಾಜ ಭಜಂತ್ರಿ, ಶಿಕ್ಷಕರಾದ ವಿಜಯಲಕ್ಷ್ಮಿ ಪಲ್ಲೇದ, ಎಲ್ಲಮ್ಮ ಮರಡೂರು, ಧರೆಪ್ಪನವರ, ಸುವರ್ಣಾ ಬೆಂತೂರ, ಸಂಜೀವಿನಿ ಯೋಜನೆ ಎಂಬಿಕೆ ಎಸ್‌ಡಿಎಂಸಿ ಸದಸ್ಯರು ಹಾಗೂ ಕೃಷ್ಣಾಪುರ, ವಡ್ನಿಕೊಪ್ಪ, ಕಡಕೋಳ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು. ಎಂ.ಸಿ. ಗೋಣೆಪ್ಪನವರ್, ಶಿಕ್ಷಕ ಎಸ್.ವಿ. ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.ವ್ಯಕ್ತಿತ್ವ ವಿಕಸನ ಕುರಿತು ಕಾರ್ಯಾಗಾರ
ರಾಣಿಬೆನ್ನೂರು: ವ್ಯಕ್ತಿಯಲ್ಲಿನ ದೈಹಿಕ, ಮಾನಸಿಕ ವಿಶೇಷ ಅಂಶಗಳ ಸಂಘಟನೆಯೇ ವ್ಯಕ್ತಿತ್ವ ಎಂದು ಹಿರೇಕೆರೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಪಿ.ಐ. ಶಿದ್ದನಗೌಡರ ತಿಳಿಸಿದರು.ನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ವ್ಯಕ್ತಿತ್ವ ವಿಕಸನ ಮತ್ತು ಮಾನವ ಸಂವಹನ ಕೌಶಲ್ಯಗಳು ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಸಂವಹನ ಕೌಶಲ್ಯಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಭಾಷಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.ಪ್ರಾ. ಪ್ರೊ. ನಾರಾಯಣ ನಾಯಕ ಎ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ನಾಗರಾಜ ಗವಿಯಪ್ಪನವರ, ಪ್ರೊ. ಎಂ.ಎನ್. ಸೂರಣಗಿ, ಪ್ರೊ. ರೇಖಾ ಶಿಡೇನೂರ, ಪ್ರೊ. ಸಾಯಿಲತಾ ಮಡಿವಾಳರ, ಪೂಜಾ ಕಾಟಿ, ಸಹನಾ ಹರವಿಶೆಟ್ಟರ ರಂಜಿತ ಕರಿಯಣ್ಣನವರ, ಸೌಜನ್ಯ ಹಾಗೂ ಸಿಬ್ಬಂದಿ ಇದ್ದರು.