ಕನ್ನಡಪ್ರಭ ವಾರ್ತೆ ತುರುವೇಕೆರೆ
ಭೂ ಸೇನಾ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಠ ಜಾತಿ ಸಮುದಾಯದವರು ವಾಸಿಸುವ ಕಾಲೋನಿಗಳ ಅಭಿವೃದ್ಧಿ ಮತ್ತು ಪ್ರಗತಿ ಯೋಜನೆಯಡಿ ಸುಮಾರು 50 ಲಕ್ಷ ರು ವೆಚ್ಚದಲ್ಲಿ ಸುಮಾರು 400 ಮೀಟರ್ ನಷ್ಟು ಸಿಸಿ ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಗುತ್ತಿಗೆದಾರರು ಮತ್ತು ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್, ಸದಸ್ಯರಾದ ಹೊಸಳ್ಳಿ ದೇವರಾಜು, ಆದರ್ಶ್, ಪವಿತ್ರಾ ಮಹೇಶ್, ಶ್ರೀನಿವಾಸ್, ಎ.ಬಿ.ಜಗದೀಶ್, ಬಡಗರಹಳ್ಳಿ ತ್ಯಾಗರಾಜ್, ದೊಡ್ಡಾಘಟ್ಟ ಶ್ರೀನಿವಾಸ್, ಸೋಮೇನಹಳ್ಳಿ ಶಿವಾನಂದ್, ಪಾಲಣ್ಣ, ಹೊನ್ನಪ್ಪ, ಕಣತೂರು ರವಿಕುಮಾರ್, ಹಾವಾಳ ಕೃಷ್ಣ, ಬೂವನಹಳ್ಳಿ ಪುನಿತ್, ತೊರೆಮಾವಿನಹಳ್ಳಿ ರಾಮಕೃಷ್ಣ, ಮೊರಸರಕೊಟ್ಟಿಗೆ ಕಾಂತರಾಜು, ಮಲ್ಲಾಘಟ್ಟ ಆನಂದ್, ದಲಿತ ಮುಖಂಡರಾದ ಮಂಜುನಾಥ್, ರಮೇಶ್, ರಾಮಚಂದ್ರು ಸೇರಿದಂತೆ ಹಲವರು ಇದ್ದರು.