ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರಗತಿಗೆ ಶ್ರಮಿಸಿ: ಎಚ್.ಎಸ್.ಕೀರ್ತನಾ

KannadaprabhaNewsNetwork |  
Published : Jan 22, 2026, 02:15 AM IST
20 ಬೀರೂರು 1ಬೀರೂರಿನ ಗುರುಭವನದಲ್ಲಿ ಶಿಕ್ಷಕರ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್ಎಸ್ ಕೀರ್ತನಾ ಮಾತನಾಡಿದರು | Kannada Prabha

ಸಾರಾಂಶ

ಬೀರೂರುಎಸ್ಎಸ್ಎಲ್ಸಿ ಫಲಿತಾಂಶ ಉತ್ತಮಗೊಳಿಸಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡ ಬೇಕು ಎಂದು ಜಿಲ್ಲಾಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ ಸೂಚಿಸಿದರು.

- ಎಸ್ಎಸ್ಎಲ್ಸಿ ಫಲಿತಾಂಶ ಕಾರ್ಯಾಗಾರದಲ್ಲಿ ಜಿ.ಪಂ. ಸಿಇಒ ಸೂಚನೆಕನ್ನಡಪ್ರಭ ವಾರ್ತೆ, ಬೀರೂರು

ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮಗೊಳಿಸಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡ ಬೇಕು ಎಂದು ಜಿಲ್ಲಾಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ ಸೂಚಿಸಿದರು.

ಬೀರೂರು ಪಟ್ಟಣದ ಗುರುಭವನದಲ್ಲಿ ಸೋಮವಾರ ಕಡೂರು-ಬೀರೂರು ಶೈಕ್ಷಣಿಕ ವಲಯದ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆ-1ರ ಪ್ರಗತಿ ಪರಿಶೀಲನೆ ಮತ್ತು ಫಲಿತಾಂಶ ಸುಧಾರಣೆ ಕಳೆದ ಸಾಲಿನಲ್ಲಿ ಕಡಿಮೆ ಪಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರು ಮತ್ತು ವಿಷಯವಾರು ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದರು.ಶಿಕ್ಷಕರು ಬ್ಲೂಪ್ರಿಂಟ್ ಆಧಾರದಲ್ಲಿ ಪ್ರಶ್ನೆಗಳನ್ನುಗುರುತಿಸಿ ಅವುಗಳನ್ನು ಬೋಧಿಸಿ ಮಕ್ಕಳ ಅಧ್ಯಯನಕ್ಕೆ ಕೊಡಬೇಕು. ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರಗತಿಗೆ ಕ್ರಮವಹಿಸಬೇಕು. 50 +ಅಂಕಗಳ ಆಧಾರದಲ್ಲಿ ನೋಟ್ಸ್ ಕ್ರಿಯಾಯೋಜನೆ ತಯಾರಿಸಿ ಬೋಧಿಸಬೇಕು ಎಂದ ಅವರು ಪಠ್ಯಕ್ರಮಸೂಚಿಸಿದರು.ಶಾಲೆಗೆ ಪೋಷಕರನ್ನು ಕರೆಸಿ ಮಗುವಿನ ಹಿಂದುಳಿದಿರುವಿಕೆ ಗೆ ಮನೆಯ ವಾತಾವರಣ ಕಾರಣವೇ ಎಂಬ ಮಾಹಿತಿ ಪರಿಶೀಲಿಸಿ, ಮಕ್ಕಳ ಕಲಿಕೆ ಉತ್ತಮಗೊಳಿಸಲು ಯತ್ನಿಸಬೇಕು. ನಿರಂತರವಾಗಿ ಶಾಲೆಗೆ ಗೈರು ಹಾಜರಾಗುವ ಮಕ್ಕಳ ಮನೆಗೆ ತೆರಳಿ, ಅವರ ನಿರಾಸಕ್ತಿ ಅಥವಾ ಗೈರುಹಾಜರಿಗೆ ಕಾರಣ ತಿಳಿದು ಶಾಲೆಗೆ ಹಾಜರಾಗಲು ಮನ ಒಲಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಶಿಕ್ಷಕರ ಜತೆ ವಾರಕ್ಕೆ ಒಂದು ಸಭೆ ನಡೆಸಿ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರಳ ಬೋಧನಾ ಕ್ರಮ ಅನುಸರಿಸಿ ಸುಲಭವಾಗಿ ಅಂಕಗಳಿಸುವ ವಿಷದ ಹಾಗೂ ಪ್ರಶ್ನೆಗಳ ಬೋಧಕರು ನೀಡಿ ಎರಡೂ ವಲಯಗಳು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು. ಪ್ರತಿ ಶಾಲೆ ಮುಖ್ಯಶಿಕ್ಷಕರು ವಿಷಯವಾರು ಶಿಕ್ಷಕರಿಂದ ಪರಿಶೀಲನೆ ನಡೆಸಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಜವಾಬ್ದಾರಿ ಎಂದರು.ಡಿಡಿಪಿಐಗಳಾದ(ಆಡಳಿತ), ಸುಂದರೇಶ್ (ಅಭಿವೃದ್ಧಿ) ಮತ್ತು ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ನಾಗರಾಜ್ ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು. ಕಡೂರು ಬಿಜ ಎಂ.ಎಚ್. ತಿಮ್ಮಯ್ಯ, ಬೀರೂರು ಬಿಇಒ ಕಚೇರಿ ವಿಷಯ ನಿರೀಕ್ಷಕರಾದ ಸತ್ಯನಾರಾಯರು, ಕಾಂತರಾಜ್, ಶಿಕ್ಷಣ ಸಂಯೋಜಕರಾಗಿ ಉಮೇಶ್, ಕೃಷ್ಣಮೂರ್ತಿ ಭಾಗವಹಿಸಿದ್ದರು20 ಬೀರೂರು 1ಬೀರೂರಿನ ಗುರುಭವನದಲ್ಲಿ ಶಿಕ್ಷಕರ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್ಎಸ್ ಕೀರ್ತನಾ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

50% ಮುಗಿದ ವಾರಾಹಿ ಏತ ನೀರಾವರಿಗೆ ತಡೆ : ಕಿಚ್ಚು
ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!