ಕನ್ನಡಪ್ರಭ ವಾರ್ತೆ ಶಿರಾ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತ ದೇಶವನ್ನು ವಿಶ್ವಗುರುವನ್ನಾಗಿ ಮಾಡಿದ್ದಾರೆ. ಪ್ರಪಂಚದ ಅನೇಕ ದೇಶಗಳು ಸಂಕಷ್ಟದ ಸಂದರ್ಭದಲ್ಲಿ ಭಾರತದ ಸಲಹೆ ಕೇಳುವ ಮಟ್ಟಕ್ಕೆ ಮೋದಿಯವರು ಭಾರತದ ಗರಿಮೆಯನ್ನು ಕೊಂಡೊಯ್ದಿದ್ದಾರೆ. ಆದ್ದರಿಂದ ಕಾರ್ಯಕರ್ತರು ಸಂಕಲ್ಪ ಮಾಡಿ ಒಟ್ಟಾಗಿ ಸಕ್ರೀಯವಾಗಿ ಪಕ್ಷ ಸಂಘಟಿಸಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.ನಗರಕ್ಕೆ ಹೊರವಲಯದಲ್ಲಿರುವ ಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಏರ್ಪಸಿದ್ದ ಗ್ರಾಮ ಚಲೋ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ಕೋವಿಡ್‌ನಂತಹ ಸಂದರ್ಭದಲ್ಲೂ ದೇಶದ ಜನರನ್ನು ಕಾಪಾಡಿದ್ದಾರೆ. ದೇಶದ ಹಿಂದುಗಳಿಗೆ ಕೊಟ್ಟ ಮಾತಿನಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಯಾವತ್ತು ಅಧಿಕಾರಕ್ಕಾಗಿ ಕೆಲಸ ಮಾಡುವುದಿಲ್ಲ. ದೇಶದ ಏಕತೆಗಾಗಿ, ಬಿಜೆಪಿ ಪಕ್ಷದ ಸಿದ್ಧಾಂತಕ್ಕಾಗಿ ಕೆಲಸ ಮಾಡುತ್ತಾರೆ ಎಂದರು.ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಕಳೆದ ೧೦ ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಕಾರ್ಯಕರ್ತರು ಬೂತ್ಮಟ್ಟದಲ್ಲಿ ಪ್ರಚಾರ ಮಾಡಿ ಜನರಿಗೆ ತಿಳಿಸಬೇಕು. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ನಾವು ಅವರ ಸುಳ್ಳನ್ನು ಸಾಬೀತು ಪಡಿಸುವಲ್ಲಿ ವಿಫಲರಾದ ಕಾರಣ ಅವರು ಅಧಿಕಾರಕ್ಕೆ ಬಂದಿದ್ದಾರೆ. ಜನರು ಯಾರೂ ಸಹ ಗ್ಯಾರಂಟಿ ಯೋಜನೆಗಳಿಗೆ ಆಕರ್ಷಿತರಾಗಿಲ್ಲ ಎಂದು ತಿಳಿಸಿದರು.
ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಮಾತನಾಡಿದರುಈ ಸಂದರ್ಭದಲ್ಲಿ ರಾಜ್ಯ ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಆರ್.ಕೆ. ಶ್ರೀನಿವಾಸ್, ಯಂಜಲಗೆರೆ ಮೂರ್ತಿ, ರಾಜ್ಯ ಕಾಡುಗೊಲ್ಲ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ನಗರಸಭೆ ಸದಸ್ಯ ರಂಗರಾಜು, ಮಾಜಿ ನಗರ ಅಧ್ಯಕ್ಷ ವಿಜಯರಾಜ್, ಮುಖಂಡರಾದ ಮಾಗೋಡು ಪ್ರತಾಪ್, ಎಸ್.ಪಿ. ಕೃಷ್ಣಮೂರ್ತಿ, ಗಿರಿಧರ್, ರಂಗಸ್ವಾಮಿ, ಮುದಿಮಡು ಮಂಜುನಾಥ್, ಹೊನ್ನಗೊಂಡನಹಳ್ಳಿ ಚಿಕಣ್ಣ, ಪ್ರಕಾಶ್ ಮುದ್ದುರಾಜು, ಗೋವಿಂದರಾಜು ಚಿಕ್ಕನಕೋಟೆ ಕರಿಯಣ್ಣ, ಜಗದೀಶ್, ಸಂತೆಪೇಟೆ ನಟರಾಜು, ಬಸವರಾಜು, ಯಲಿಯೂರು ಮಂಜುನಾಥ್, ಮದ್ದೇವಳ್ಳಿ ರಾಮಕೃಷ್ಣಪ್ಪ, ಭೂವನಹಳ್ಳಿ ಲಿಂಗರಾಜು, ಗರುದಾಸ್ ಸೇರಿದಂತೆ ಹಲವರು ಹಾಜರಿದ್ದರು.