ಸಂಘದ ಶ್ರೇಯೋಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ

KannadaprabhaNewsNetwork |  
Published : Feb 11, 2024, 01:45 AM IST
ಸೂಲಿಬೆಲೆ ಹೋಬಳಿ ದೊಡ್ಡಹರಳಗೆರೆ ಗ್ರಾಮದ ಹಾಲು ಉತ್ಪಾಧಕರ ಸಹಕಾರ ಸಂಘದ ನೂತನ ಅಧ್ಯಕ್ಷ ಮುನಿಗಂಗಪ್ಪ, ಉಪಾಧ್ಯಕ್ಷ ನಾಗಪ್ಪ ಅವರನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಬಿ.ಎನ್.ಗೋಪಾಲಗೌಡ ಇತರರು ಅಭಿನಂದಿಸಿದರು. | Kannada Prabha

ಸಾರಾಂಶ

ಸೂಲಿಬೆಲೆ: ಸಂಘ, ಸಂಸ್ಥೆಗಳಲ್ಲಿ ಯಾವುದೇ ಮನಸ್ತಾಪ, ಜಾತಿಬೇಧಗಳಿಗೆ ಅವಕಾಶ ನೀಡದೇ ನಮ್ಮ ಊರು, ನಮ್ಮ ಸಂಘ ಎಂಬ ಧ್ಯೇಯದೊಂದಿಗೆ ಸಂಘದ ಶ್ರೇಯೋಭಿವೃದ್ಧಿಗೆ ಸರ್ವ ಸದಸ್ಯರೂ ಶ್ರಮಿಸಬೇಕು ಎಂದು ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು.

ಸೂಲಿಬೆಲೆ: ಸಂಘ, ಸಂಸ್ಥೆಗಳಲ್ಲಿ ಯಾವುದೇ ಮನಸ್ತಾಪ, ಜಾತಿಬೇಧಗಳಿಗೆ ಅವಕಾಶ ನೀಡದೇ ನಮ್ಮ ಊರು, ನಮ್ಮ ಸಂಘ ಎಂಬ ಧ್ಯೇಯದೊಂದಿಗೆ ಸಂಘದ ಶ್ರೇಯೋಭಿವೃದ್ಧಿಗೆ ಸರ್ವ ಸದಸ್ಯರೂ ಶ್ರಮಿಸಬೇಕು ಎಂದು ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು.

ಹೋಬಳಿಯ ದೊಡ್ಡಹರಳಗೆರೆ ಡೇರಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮಾತನಾಡಿದ ಅವರು, ಡೇರಿ ಚುನಾವಣೆಯಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು. ಎಲ್ಲರಿಗೂ ಅಧಿಕಾರ ಸಿಗುವಂತೆ ಹಂಚಿಕೆಯಾಗಬೇಕು. ಸ್ವಾರ್ಥ ತೊರೆದು ಸೇವಾ ಮನೋಭಾವದಿಂದ ಸಂಘದ ಏಳಿಗೆಗೆ ದುಡಿಯಬೇಕು ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ನೂತನ ಅಧ್ಯಕ್ಷ ಮುನಿಗಂಗಪ್ಪರನ್ನು ಅಭಿನಂದಿಸಿ ಮಾತನಾಡಿ, ಅಧ್ಯಕ್ಷರಾಗಿ ಸಂಘದ ಏಳಿಗೆ ಹಾಗೂ ಸಾರ್ವಜನಿಕರ ಕಷ್ಟ-ಸುಖಗಳಿಗೆ ಸ್ಪಂದಿಸಬೇಕು. ಹೆಚ್ಚು ಸಮಯವನ್ನು ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮುನಿಗಂಗಪ್ಪ (ಅಧ್ಯಕ್ಷ) ನಾಗಪ್ಪ(ಉಪಾಧ್ಯಕ್ಷ) ನಿರ್ದೇಶಕರಾಗಿ ಡಾ.ಡಿ.ಟಿ.ವೆಂಕಟೇಶ್, ರಾಮಕೃಷ್ಣಪ್ಪ,ಲಕ್ಷ್ಮಣ,ರಾಮಕೃಷ್ಣ, ಮುನೇಗೌಡ, ನಾರಾಯಣಪ್ಪ, ರಮೇಶ್, ವೆಂಕಟೇಶಪ್ಪ, ಭಾರತಮ್ಮ, ಪುಟ್ಟಮ್ಮ, ಚನ್ನಕೇಶವ ಆಯ್ಕೆಯಾಗಿದ್ದಾರೆ.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಬೈರೇಗೌಡ, ಡಾ.ಡಿ.ಟಿ.ವೆಂಕಟೇಶ್, ಚಿಕ್ಕಹರಳಗೆರೆ ಜಗದೀಶ್, ಲೋಕೇಶ್,ಮುನಿವೀರಪ್ಪ, ನಾರಾಯಣಸ್ವಾಮಿ, ಸೋಮಣ್ಣ, ಅಂಗಡಿಕೃಷ್ಣಪ್ಪ, ಅಂಬರೀಷ್, ಡೇರಿ ಮಾಜಿ ಅಧ್ಯಕ್ಷ ರಾಜಣ್ಣ, ವೆಂಕಟೇಶಪ್ಪ, ಪ್ರಕಾಶ್, ನಂಜೇಗೌಡ, ಗೋಪಾಲಪ್ಪ, ಭಾರತಿ ಶಿವರಾಜ್ಇ ತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ