ಬಣಜಿಗ ಸಮಾಜದ ಏಳಿಗೆಗೆ ಒಗ್ಗಟ್ಟಾಗಿ ಶ್ರಮಿಸಿ

KannadaprabhaNewsNetwork |  
Published : Oct 22, 2024, 12:08 AM IST
21ಎಂಡಿಎಲ್01 | Kannada Prabha

ಸಾರಾಂಶ

ಮುದಗಲ್ ನ ವಿಜಯ ಮಹಾತೇಂಶ್ವರ ಮಠದ ಸಭಾಂಗಣದಲ್ಲಿ ಬಣಜಿಗ ಸಮಾಜದ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ಮುದಗಲ್

ಬಣಜಿಗ ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಶ್ರಮಿಸಿದಾಗಿ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಬಣಜಿಗ ಸಮಾಜದ ಹಿರಿಯರಾದ ಡಾ. ಶಿವಬಸ್ಸಪ್ಪ ಹೆಸರೂರು ಅಭಿಪ್ರಾಯ ಪಟ್ಟರು.

ಪಟ್ಟಣದ ವಿಜಯ ಮಹಾಂತೇಶ್ವರ ಮಠದ ಸಭಾಂಗಣದಲ್ಲಿ ಸೋಮವಾರ ನಡೆದ ಬಣಜಿಗ ಸಮಾಜದ ಸಭೆಯ ಕಾರ್ಯಕ್ರಮವನ್ನು ಸಸಿಗಳಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಎಲ್ಲಾ ರಂಗಗಳಲ್ಲಿಯೂ ನಮ್ಮ ಜನಾಂಗದವರು ಸಂಘಟಿತರಾಗಿ ಸೇವೆಗೆ ಅಣಿಯಾಗಬೇಕು. ಶಿಕ್ಷಣ, ರಾಜಕೀಯ ಸೇರಿದಂತೆ ಆರ್ಥಿಕ ವ್ಯವಸ್ಥೆಯಲ್ಲಿಯೂ ಕೂಡ ಬೆಳವಣಿಗೆಯಾಗಬೇಕು ಎಂದರು.

ಸಂಘಟಿತ ಸಮಾಜದ ನಿರ್ಮಾಣ ನಮ್ಮ ನಿಮ್ಮೆಲ್ಲರ ಕೈಯಲ್ಲಿದ್ದು ಎಲ್ಲರೂ ಕೂಡ ಬಸವಾದಿ ಶರಣರು ಹಾಕಿಕೊಟ್ಟ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶದ ಬದುಕು ಸಾಗಿಸೋಣ ಎಂದು ಕರೆ ನೀಡಿದರು.

ಸಭೆ ಉದ್ದೇಶಿಸಿ ಮುದಗಲ್‌ ನ ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುದಗಲ್ ಪಟ್ಟಣದ ಬಣಜಿಗ ಸಮಾಜಕ್ಕೆ ಮಲ್ಲಪ್ಪ ಮಾಟೂರು ಅವವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಮಾಜದ ಏಳಿಗೆಗೆ ಶ್ರಮಿಸುವಂತೆ ಆದೇಶಿಸಲಾಯಿತು. ಶಿವಾನಂದ ಸುಂಕದ, ವಾರದ ಮಲ್ಲಣ್ಣ, ಮಹಾಂತೇಶ ಸುಂಕದ, ಶರಣಪ್ಪ ಚಿತ್ರನಾಳ, ಈರಣ್ಣ ಗುಡೂರು, ಮಲ್ಲಪ್ಪ ಮಾಟೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ