ಲೋಕಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಆರ್.ಬಿ.ತಿಮ್ಮಾಪುರ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಮುಂಬರುವ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ಒಗ್ಗಟ್ಟಿನಿಂದ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಶಾಸಕ ಆರ್.ಬಿ. ತಿಮ್ಮಾಪೂರ ಕರೆ ನೀಡಿದರು.
ಪಟ್ಟಣದಲ್ಲಿ ಶನಿವಾರ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ನೇರವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕೇ ಹೊರತು, ಪಕ್ಷಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕು. ಕಾರ್ಯಕರ್ತರಿಗೆ ಸದಾ ಮುಕ್ತವಾಗಿರುವ ಮತ್ತು ಪಕ್ಷದ ಚಟುವಟಿಕೆಗಳ ಕೇಂದ್ರಬಿಂದುವಾಗಲಿರುವ ನೂತನ ಬ್ಲಾಕ್ ಕಾಂಗ್ರೆಸ್ ಕಚೇರಿಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ದಾನಿಗಳ ಸಹಕಾರ: ಪಕ್ಷದ ಕಚೇರಿ ನಿರ್ಮಾಣ ಹಾಗೂ ಸಂಘಟನಾತ್ಮಕ ಕಾರ್ಯಗಳಿಗೆ ಉದಾರವಾಗಿ ಸಹಾಯ ಹಸ್ತ ಚಾಚಿರುವ ದಾನಿಗಳು ಹಾಗೂ ಪಕ್ಷದ ಮುಖಂಡರನ್ನು ಸಚಿವರು ಅಭಿನಂದಿಸಿದರು.
ಬಿಡಿಸಿಸಿ ಬ್ಯಾಂಕ ಚುನಾವಣೆಗೆ ಪಕ್ಷದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ, ಕಾಂಗ್ರೇಸ್ ಪಕ್ಷ ವತಿಯಿಂದ ಟಿ.ವ್ಹಿ.ಅರಳಿಕಟ್ಟಿಯವರನ್ನು ಕಣಕ್ಕಿಳಿಸಲಾಗಿದೆ, ಅರಳಿಕಟ್ಟಿಯವರಿಗೆ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಸಹಾಯ ಸಹಕಾರ ನೀಡಿ ಒಗ್ಗಟ್ಟನ್ನು ಪ್ರದರ್ಶಿಸಿ ಗೆಲವು ಸಾಧಿಸಲು ಪಣತೊಣಬೇಕು ಎಂದ ಅವರು, ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಶಿಸ್ತು ಕಾಪಾಡಿಕೊಂಡು, ಹೈಕಮಾಂಡ್ ಹಾಗೂ ಸ್ಥಳೀಯ ನಾಯಕರ ಮಾರ್ಗದರ್ಶನದಂತೆ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕೆಪಿಸಿಸಿ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ, ಮುಧೋಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೊಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಉದಯಸಿಂಗ್ ಪಡತಾರೆ, ಶಿವಕುಮಾರ ಮಲಘಾಣ, ವಕೀಲ ಐ.ಎಚ್. ಅಂಬಿ ಮಾತನಾಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ರಾಜುಗೌಡ ಪಾಟೀಲ, ರಾಘು ಮೊಕಾಶಿ, ಕಲ್ಮೇಶ ಸಾರವಾಡ, ಕೃಷ್ಣಪ್ಪ ಕನಕರಡ್ಡಿ, ದಾನೇಶ ತಡಸಲೂರ, ಮಾರುತಿ ಮಾನೆ, ಸಂಜಯ ನಾಯಕ, ಸಂಗಪ್ಪ ಇಮ್ಮನ್ನವರ, ತಿಮ್ಮಣ್ಣ ಗುಲಾಬಸಾಬ ಅತ್ತಾರ, ಅರಳಿಕಟ್ಟಿ, ವೆಂಕಟೇಶ ಅಂಕಲಗಿ, ಲಕ್ಷ್ಮಣ ಮಾಲಗಿ, ಹೊಳಬಸು ದಂಡಿನ, ಮುದಕಣ್ಣ ಅಂಬಿಗೇರ, ಮಹಾದೇವ ಹೊಸಟ್ಟಿ, ಗುರುರಾಜ ಉದಪುಡಿ, ಆನಂದ ಹಿರೇಮಠ, ಬೀರಪ್ಪ ಮಾಯನ್ನವರ, ರೆಹಮಾನ ತೊರಗಲ್, ರವಿ ರೊಡ್ಡಪ್ಪನವರ, ಕೆ.ಕೆ. ಬಾಗವಾನ, ಗೋಪಾಲಗೌಡ ಪಾಟೀಲ, ವಿಠ್ಠಲಗೌಡ ಪಾಟೀಲ, ಗಣಪತಿ ಗಸ್ತಿ, ಕುಮಾರ ಕಾಳಮ್ಮನವರ, ಜಾವೇದ ಮುಧೋಳ, ಶೆಟ್ಟೆಪ್ಪ ಮಾಳಿ, ಸುಲ್ತಾನ ಕಲಾದಗಿ, ಶಬ್ಬೀರ ಬಾಗವಾನ, ಗೋಪಾಲ ಲಮಾಣಿ, ಪ್ರದೀಪ ಉಪ್ಪಾರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಇದ್ದರು.ಕಾಂಗ್ರೇಸ್ ಪಕ್ಷ ಶಿಸ್ತಿನ ಪಕ್ಷ, ಇಲ್ಲಿ ವ್ಯಕ್ತಿಗತವಾಗಿ ಪೂಜೆ ಇಲ್ಲ ಪಕ್ಷದ ಸಿದ್ದಾಂತಕ್ಕೆ ಗೌರವ ಕೊಟ್ಟರೆ ಎಲ್ಲ ಕಾರ್ಯಕರ್ತರಿಗೂ ಗೌರವ ಕೊಟ್ಟಂತೆ, ಯಾವುದೇ ತಮ್ಮ ಸಮಸ್ಯೆಯ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಿ ಮುಂಬರುವ ದಿನಗಳಲ್ಲಿ ನಮ್ಮ ಹೆಚ್ಚಿನ ಕಾರ್ಯಕರ್ತರ ಬಲ ಬೇಕು ಪಕ್ಷದ ಸಿದ್ದಾಂತಕ್ಕೆ ಒಪ್ಪಿ ಬರುವವರನ್ನು ಪಕ್ಷಕ್ಕೆ ಕರೆ ತನ್ನಿ, ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.