ಸಿದ್ದಾಪುರ: ಕೆರೆಯಲ್ಲಿ ಈಜಲು ತೆರಳಿದ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಿದ್ದಾಪುರ ಠಾಣೆ ವ್ಯಾಪ್ತಿಯ ಹಾಲುಗುಂದ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
------------------------------
ಅಮ್ಮತ್ತಿಯಲ್ಲಿ ಜಿಲ್ಲಾ ಮಟ್ಟದ ಲೆಜೆಂಡ್ಸ್ ಫುಟ್ಬಾಲ್ ಪಂದ್ಯಾಟಸಿದ್ದಾಪುರ: ಅಮ್ಮತ್ತಿಯ ಎಎಫ್‌ಸಿ ಅಮ್ಮತ್ತಿ ಕೊಡಗು ವತಿಯಿಂದ ಜಿಲ್ಲಾ ಮಟ್ಟದ ಲೆಜೆಂಡ್ಸ್ ಪುಟ್ಬಾಲ್ ಪಂದ್ಯಾಟ ಏ. 4 ಮತ್ತು 5ರಂದು ಅಮ್ಮತ್ತಿಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ 30,000 ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ 20,000 ರು. ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಪಂದ್ಯಾಟಕ್ಕೆ ಪ್ರವೇಶ ಶುಲ್ಕ 3,000 ನಿಗದಿಪಡಿಸಲಾಗಿದ್ದು, ಪಂದ್ಯಾಟ 40 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9535553315, 9480730781 ಹಾಗೂ 9449704232 ಸಂಪರ್ಕಿಸಲು ಕೋರಿದ್ದಾರೆ.