ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕು ಪಡೆಯಲು ಸಾಧ್ಯ

KannadaprabhaNewsNetwork |  
Published : May 03, 2026, 02:15 AM IST
2ಎಚ್‌ವಿಆರ್2 | Kannada Prabha

ಸಾರಾಂಶ

ಹಾವೇರಿಯ ಸುಭಾಸ್ ಸರ್ಕಲ್‌ನಲ್ಲಿ ಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಕಾರ್ಮಿಕ ದಿನ ಆಚರಿಸಲಾಯಿತು.

ಹಾವೇರಿ: ವಿಶ್ವಕಾರ್ಮಿಕರ ದಿನಾಚರಣೆ ನಿಮಿತ್ತ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳು ಇಲ್ಲಿನ ಸುಭಾಸ್ ಸರ್ಕಲ್‌ನಲ್ಲಿ ಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಕಾರ್ಮಿಕ ದಿನ ಆಚರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮೂಗದೂರ ಮಾತನಾಡಿ, ಎಲ್ಲಾ ಶ್ರಮಜೀವಿಗಳನ್ನು ನೆನೆದು ವಿಶ್ವ ಕಾರ್ಮಿಕ ದಿನ ಆಚರಿಸುತ್ತೇವೆ. ಆದರೆ ದುಡಿಯವ ವರ್ಗದವರ ಬವಣೆ ನಿಂತಿಲ್ಲ. ಕಾರ್ಮಿಕರಿಗಾಗಿ ಸರ್ಕಾರದ ಹತ್ತಾರು ಸೌಲಭ್ಯಗಳಿವೆ. ಆದರೆ ಸಂಘಟನೆ ಮತ್ತು ಹೋರಾಟದ ಕೊರತೆಯಿಂದ ಅರ್ಹ ಕಾರ್ಮಿಕರಿಗೆ ಹಕ್ಕುಗಳು ದೊರೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ನಕಲಿ ಕಾರ್ಮಿಕ ಕಾರ್ಡ್‌ ನೆಪದಲ್ಲಿ ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನೂರಾರು ಅರ್ಹ ಕಾರ್ಮಿಕರ ಕಾರ್ಡಗಳನ್ನು ರದ್ದುಮಾಡುವ ಮೂಲಕ ಶ್ರಮಜೀವಿಗಳಿಗೆ ಅನ್ಯಾಯಮಾಡಿದ್ದಾರೆ. ಅರ್ಹ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರಯಲೇ ಬೇಕು, ನಾವು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಅರ್ಹ ಕಾರ್ಮಿರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಹಕ್ಕುಗಳನ್ನು ಕೇಳುತ್ತಿದ್ದೇವೆ. ನಾವು ಸಂಘಟಿತರಾಗಿ ಹೋರಾಟ ಮಾಡಿದರೆ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.ಈ ವೇಳೆ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ನಜೀರಸಾಬ ಪಟೇಲ, ಗುಲ್ಜಾರ ಗಣಜೂರ, ಸಂಜೀವಪ್ಪ ಹರಪನಹಳ್ಳಿ, ಹಸನಸಾಬ ಗಣಜೂರ, ಮಾರುತಿ ಕದರಮಮಡಲಗಿ, ನಾಗರಾಜ ಮಲಗೋಡ, ಬಸಯ್ಯ ಕುಲಕರ್ಣಿ, ರಿಯಾಜ ಅಹ್ಮದ ಕೊಟ್ಟಿಗೇರಿ, ಮಹಮ್ಮದ ರಫೀಕ ದೇವಗಿರಿ, ರಿಯಾಜ್ ಅಹ್ಮದ್ ದೇವಿಹೊಸೂರ, ಮಕಬೂಲಹ್ಮದ ಇನಾಮದಾರ, ಅಹ್ಮದ ಪಟೇಲ, ಕರಿಮಸಾಬ ಸವಣೂರ, ಹಜರತ್‌ಅಲಿ ಶೇಕಸನದಿ, ಮುಕ್ತಿಯಾರ ಅಹ್ಮದ್ ಹುಂಬಿಗೇರಿ, ಮಹಬೂಬಖಾನ ಪಠಾಣ, ಪ್ರಕಾ ಅರಸನಾಳ, ರಮ್ಜಾನಸಾಬ ಜಮಾದಾರ, ಮಾರುತಿ ಮುಳಗುಂದ, ಅಲ್ಲಾಉದ್ದಿನ, ವೆಂಕಟೇಶ ಹರಪಮಹಳ್ಳಿ, ಸುಬಾನ ಪಟೇಲ್, ಮಹ್ಮದಖಾನ ಗುತ್ತಲ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಸಂಘದ ಚುನಾವಣೆ: ಗೆಲುವು ಸಾಧಿಸಿದ ಕ್ರಿಯಾ ಸಮಿತಿ
ಅಂಕಗಳ ಜತೆಯಲ್ಲಿ ಕೌಶಲ್ಯಜ್ಞಾನವಿದ್ದರೆ ಯಶಸ್ಸು: ಶಾಸಕ ಪ್ರಕಾಶ ಕೋಳಿವಾಡ