ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಪ್ರಭೂಧಿತ ಸರ್ವೀಸಸ್ ಇಂಡಿಯಾ ಮೈಸೂರು ವತಿಯಿಂದ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಪೂರ್ವ ಕಲಿಕಾ ತರಬೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ತಲೆಗೆ ಹೆಲ್ಮೇಟ್, ಕಾಲಿಗೆ ಬೂಟ್, ಗ್ಲೌಸ್, ಮಾಸ್ಕ್, ಗಾರ್ಗಲ್ಸ್ ಹಾಗೂ ಎತ್ತರದಲ್ಲಿ ನಿಂತು ಕೆಲಸ ಮಾಡುವಾಗ ಸೇಫ್ಟಿ ಬೆಲ್ಟ್‌ಗಳನ್ನು ಧರಿಸಿಕೊಂಡೇ ಕೆಲಸ ಮಾಡಬೇಕು. ಇದರಿಂದ ಆಕಸ್ಮಿಕವಾಗಿ ಸಂಭವಿಸಬಹುದಾದ ಅನಾಹುತಗಳಿಂದ ರಕ್ಷಣೆ ಪಡೆಯಬಹುದು ಎಂದರು.ಸಣ್ಣ-ಪುಟ್ಟ ಸಮಸ್ಯೆಯಾದರೂ ದುಡಿಯುವ ಕೈಗೆ ಕೆಲಸವಿಲ್ಲದೆ ಕುಟುಂಬದ ಸದಸ್ಯರು ಬೀದಿ ಪಾಲಾಗಬೇಕಾಗುತ್ತದೆ. ಕೆಲಸ ಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೆಲಸದ ವೇಳೆ ಮದ್ಯಪಾನ ಮಾಡುವುದು, ಬೀಡಿ, ಸಿಗರೇಟ್ ಸೇದುವುದು, ಗುಟ್ಕಗಳನ್ನು ಬಳಸಬಾರದು. ಕೆಲವೊಮ್ಮೆ ಈ ದುಶ್ಚಟಗಳಿಂದ ತಲೆ ಸುತ್ತು ಬಂದು ಅಪಾಯ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕಾರ್ಮಿಕ ನಿರೀಕ್ಷಕರಾದ ಅಮರಾವತಿ, ಗಂಗಾಧರ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್, ನಿರ್ದೇಶಕ ಶಾಂತರಾಜು, ಕಾರ್ಮಿಕ ಇಲಾಖೆಯ ರೂಪ ಇತರರು ಇದ್ದರು.