ಮಣಿಪಾಲ ಕೆಎಂಸಿಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ

KannadaprabhaNewsNetwork |  
Published : Jun 16, 2025, 06:12 AM IST
ಆಚರಣೆ*  | Kannada Prabha

ಸಾರಾಂಶ

ನಿಯಮಿತ ರಕ್ತದಾನಿಗಳು, ಅಫೆರೆಸಿಸ್ ದಾನಿಗಳು, ರಕ್ತದಾನ ಪ್ರೇರಕರು ಮತ್ತು ಸಂಘಟಕರನ್ನು ಅವರ ಅತ್ಯುತ್ತಮ ಬದ್ಧತೆಗಾಗಿ ಗೌರವಿಸಲಾಯಿತು. ಸಾರ್ವಜನಿಕರಿಗಾಗಿ ಆಯೋಜಿಸಲಾದ ಘೋಷ ವಾಕ್ಯ ಬರವಣಿಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಿ ಮಾತನಾಡಿ, ರಕ್ತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ ಮತ್ತು ಪರ್ಯಾಯವಿಲ್ಲ. ಅಗತ್ಯವಿರುವವರಿಗೆ ಅದನ್ನು ದಾನ ಮಾಡಬೇಕು. ಎಲ್ಲ ಅರ್ಹ ವ್ಯಕ್ತಿಗಳು ನಿಯಮಿತವಾಗಿ ದಾನ ನೀಡಬೇಕೆಂದು ಕರೆ ನೀಡಿದರು.

ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀರಾಮ ರಾವ್ ಮಾತನಾಡಿ, ಒಂದು ಯೂನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು. ಭಾರತವು ಪ್ರಸ್ತುತ ವಾರ್ಷಿಕವಾಗಿ ಸುಮಾರು ಒಂದು ಮಿಲಿಯನ್ ಯೂನಿಟ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಪ್ರತಿ ಎರಡು ಸೆಕೆಂಡಿಗೆ ಯಾರಿಗಾದರೂ ರಕ್ತದ ಅವಶ್ಯಕತೆಯಿದೆ. ನಾವು ನಿಯಮಿತ ಮತ್ತು ಸ್ವಯಂಪ್ರೇರಿತ ರಕ್ತದಾನವನ್ನು ಪ್ರೋತ್ಸಾಹಿಸಬೇಕು ಎಂದರು.

ದರು. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ನಿಯಮಿತ ರಕ್ತದಾನಿಗಳು, ಅಫೆರೆಸಿಸ್ ದಾನಿಗಳು, ರಕ್ತದಾನ ಪ್ರೇರಕರು ಮತ್ತು ಸಂಘಟಕರನ್ನು ಅವರ ಅತ್ಯುತ್ತಮ ಬದ್ಧತೆಗಾಗಿ ಗೌರವಿಸಲಾಯಿತು. ಸಾರ್ವಜನಿಕರಿಗಾಗಿ ಆಯೋಜಿಸಲಾದ ಘೋಷ ವಾಕ್ಯ ಬರವಣಿಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು .

ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಶ್ಯಾಮಿಲಿ, ರಕ್ತ ಕೇಂದ್ರದ ಮುಖ್ಯಸ್ಥ ಡಾ. ಗಣೇಶ್ ಮೋಹನ್ ಮತ್ತು ರಕ್ತ ಕೇಂದ್ರದ ಪ್ರಾಧ್ಯಾಪಕ ಡಾ. ಶಮೀ ಶಾಸ್ತ್ರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಡಾ. ಗಣೇಶ್ ಮೋಹನ್ ಸ್ವಾಗತಿಸಿದರು. ಡಾ. ಶಮೀ ಶಾಸ್ತ್ರಿ ವಂದಿಸಿದರು. ವಿಶ್ವೇಶ ಎನ್. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಓದಿದರು. ಡಾ. ದೀಪ್ ಕಾರ್ಯಕ್ರಮದ ನಿರೂಪಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ