ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಸಂದರ್ಭದಲ್ಲಿ ಕಲಬುರಗಿ ಜಿಮ್ಸ್‍ನ ಡೀನ್ ಮತ್ತು ನಿರ್ದೇಶಕರಾದ ಡಾ. ಉಮೇಶ ಎಸ್.ಆರ್. ಅವರು ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮಗಳ ಅಗತ್ಯತೆ 2024ರ ವಿಶ್ವ ಪರಿಸರ ದಿನದ ಅಭಿಯಾನವು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಅಜಯಕುಮಾರ ಜಿ., ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ. ಆರ್., ಕಲಬುರಗಿ ಜಿಮ್ಸ್ ಶೈಕ್ಷಣಿಕ ರೆಜಿಸ್ಟ್ರಾರ್ ಡಾ. ಫರಖಾನಾ ಖುಶನೂದ್ ಹಾಗೂ ವಿವಿಧ ಬೋಧಕರು, ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ದಿನಾಚರಣೆ ಅಂಗವಾಗಿ ಜೂ.4ರಂದು energy conservation and its sustainable consumption ಎಂಬ ವಿಷಯದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಮೊದಲ ವರ್ಷದಿಂದ ಅಂತಿಮ ವರ್ಷದವರೆಗಿನ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದರು. ಜೂ.5 ರಂದು ಮ್ಯಾರಥಾನ್ ಈವೆಂಟ್‍ನಲ್ಲಿ ಸುಮಾರು 400-500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕವನ್ನು ವಿತರಿಸಲಾಯಿತು.