ಮೆಥೋಡಿಸ್ಟ್ ಚರ್ಚಿನಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆ

KannadaprabhaNewsNetwork |  
Published : Jun 19, 2024, 01:00 AM IST
ಸುರಪುರ ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ವಿಶ್ವ ಅಪ್ಪಂದಿರ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.  | Kannada Prabha

ಸಾರಾಂಶ

ಸುರಪುರ ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ವಿಶ್ವ ಅಪ್ಪಂದಿರ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ವಿಶ್ವ ಅಪ್ಪಂದಿರ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಸತ್ಯಮಿತ್ರ, ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಮತ್ತು ನಿಸ್ವಾರ್ಥ ಪ್ರೀತಿ ಅನುಪಮವಾಗಿದೆ. ದೇವರು ಸಹ ನಮ್ಮೆಲ್ಲರನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಾನೆ. ಹಿರಿಯರಿಗೆ ಗೌರವ ನೀಡುವುದನ್ನು ಪ್ರತಿಯೊಬ್ಬ ಕಿರಿಯರು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿದ್ದ ಅಪ್ಪಂದಿರಿಗೆ ಹೂ ಗುಚ್ಚ ನೀಡಿ ಸನ್ಮಾನಿಸಲಾಯಿತು. ಸಭಾ ಪಾಲಕರಾದ ರೆವರೆಂಡ್ ಪ್ರಕಾಶ ಹಂಚಿನಾಳ, ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಅಮಿತಪಾಲ್, ಜಯಪ್ಪ, ಸಿಮಿಯೋನ್, ವಿಜಯಕುಮಾರ, ರಮೇಶ್, ಇಮಾನುವೆಲ್, ದೇವಪುತ್ರ, ಥಾಮಸ ಮ್ಯಾಥ್ಯೂ, ಹನೋಕ್, ಸುನಾಥ, ಸುಕುಮಾರಿ, ಸುಜಾತಾ, ಸುನೀಲಾ ಶಾಂತಕುಮಾರ, ಸೋನಾ ಸುಕುಮಾರಿ, ಪ್ರಭುಕುಮಾರಿ, ಸುಮತಿ, ಲಲಿತಾ, ಸಾಗರಿಕ, ಸುಜಾತಾ, ಶಾಲಿನಿ, ಶೋಭಾ, ಸುನೀತಾ, ಸ್ಟೆಲ್ಲಾ, ರೆಬೆಕ್ಕಾ, ರತ್ನಮ್ಮ, ಪವಿತ್ರಾ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಾಂತಿಕಾರಿ ಪುರುಷರ ಆದರ್ಶ ರೂಢಿಸಿಕೊಳ್ಳಿ: ವಿನಯಕುಮಾರ್‌
ಆದಿಚುಂಚನಗಿರಿ ಜಾತ್ರೆ ಮಹೋತ್ಸವದ ಕೊನೇ ದಿನ ಗಂಗಾಪೂಜೆ