‘ಹೋಮಿಯೋ ಎವಿಡೆನ್ಸ್ ಡಾಟ್‌ಕಾಮ್ ಎಂಬ ‘ಡಿಜಿಟಲ್ ಡಾಟಾಬೇಸ್’ ವೆಬ್‌ಸೈಟ್ ಫಾದರ್ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ. ರೋಶನ್ ಕ್ರಾಸ್ತಾ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಹೋಮಿಯೋಪಥಿ ಜನಕ ಡಾಕ್ಟರ್ ಸ್ಯಾಮ್ಯುಯೆಲ್ ಹಾನ್ನಿಮನ್ನರ ೨೬೯ನೇ ಜನ್ಮ ದಿನದ ನೆನಪಿಗಾಗಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಹೋಮಿಯೋಪಥಿ ದಿನಾಚರಣೆ ಆಚರಿಸಲಾಯಿತು.ಸಿಎಜಿ ಆಫ್ ಇಂಡಿಯಾದ ಅಧಿಕಾರಿ ಡಾ. ರಾಹುಲ್ ಕಾರ್ಯಕ್ರಮ ಉದ್ಘಾಟಿಸಿದರು. ೧೯೯೯ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿ, ಕೇರಳ ಸರ್ಕಾರದ ಹೋಮಿಯೋಪಥಿ ವಿಭಾಗದ ವೈದ್ಯಕೀಯ ಅಧಿಕಾರಿ ಡಾ. ಜೆರಾಲ್ಡ್ ಜಯಕುಮಾರ್, ಇದ್ದರು.
ಫಾದರ್ ಮುಲ್ಲರ್ ಸೇವಾಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರ್ ಫಾದರ್ ಅಗಸ್ಟಸ್ ಮುಲ್ಲರ್‌ರವರ ಪ್ರತಿಮೆಗೆ ಹಾಗೂ ಡಾ. ಸಾಮ್ಯುವೆಲ್ ಹಾನ್ನಿಮನ್ನರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭ ಡಾ. ಬಾತ್ರಾ ಪ್ರಾಯೋಜಿತ ಬಾತ್ರಾ ವಿದ್ಯಾರ್ಥಿ ವೇತನವನ್ನು ಅನಘಾ, ಏಂಜಲಿನ್ ಜಾಯ್ ಮತ್ತು ಪರ್ಲಿನ್ ಟೆಲ್ಲಿಸ್‌ಗೆ ವಿತರಿಸಲಾಯಿತು.
ವಿಶ್ವ ಹೋಮಿಯೋಪಥಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರನ್ನು ಪುರಸ್ಕರಿಸಲಾಯಿತು.
ಈ ವೇಳೆ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಹಳೆಯ ವಿದ್ಯಾರ್ಥಿ ಡಾ. ಜೆರಾಲ್ಡ್ ಜಯಕುಮಾರ್‌ರವರು ಡಾ. ಬಿನುರಾಜ್ ಟಿ.ಕೆ ಯವರ ಜೊತೆಗೂಡಿ ಹೊರತಂದ ‘ಹೋಮಿಯೋ ಎವಿಡೆನ್ಸ್ ಡಾಟ್‌ಕಾಮ್ ಎಂಬ ‘ಡಿಜಿಟಲ್ ಡಾಟಾಬೇಸ್’ ವೆಬ್‌ಸೈಟ್ ಫಾದರ್ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ. ರೋಶನ್ ಕ್ರಾಸ್ತಾ ಬಿಡುಗಡೆಗೊಳಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ಆಡಳಿತಾಧಿಕಾರಿ ರೆ.ಫಾ. ಅಶ್ವಿನ್ ಕ್ರಾಸ್ತ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್,
ಉಪಪ್ರಾಂಶುಪಾಲೆ ಡಾ. ವಿಲ್ಮಾ ಮೀರಾ ಡಿ’ಸೋಜಾ, ಕಾರ್ಯಕ್ರಮದ ಸಂಯೋಜಕ ಡಾ. ಸೆಬಾಸ್ಟಿಯನ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.