ಬರೆದಂತೆ ಬದುಕು ಸಾಗಿಸಿದ ವಿಶ್ವಕವಿ ಕುವೆಂಪು: ಎಚ್‌.ಟಿ.ಕರಿಬಸಪ್ಪ ಅಭಿಮತ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ರಾಷ್ಟ್ರಕವಿ, ವಿಶ್ವಮಾನವ ಕುವೆಂಪು ಬರೆದ ಕೃತಿಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಪರಿಗಣಿಸಿ, ಕೆಳಹಂತದ ವ್ಯಕ್ತಿಗಳನ್ನು ನಾಯಕನಾಗಿಸಿದ್ದಾರೆ. ಸಮಸಮಾಜದ ಹಾಗೂ ಸಾಮರಸ್ಯ ಬದುಕಿನ ಮಹತ್ವದ ಅರಿವನ್ನು ಕುವೆಂಪು ಅವರ ಸಾಹಿತ್ಯದಲ್ಲಿ ಕಾಣಬಹುದು ಎಂದು ಉಪನ್ಯಾಸಕ, ಲೇಖಕ ಎಚ್.ಟಿ. ಕರಿಬಸಪ್ಪ ಆನವಟ್ಟಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಮಹಾನ್ ಗ್ರಂಥಗಳಲ್ಲಿ ಕೆಲವೇ ವ್ಯಕ್ತಿಗಳನ್ನು ನಾಯಕರನ್ನಾಗಿ ಬಿಂಬಸಿದ್ದಾರೆ. ಆದರೆ, ಕುವೆಂಪು ಬರೆದ ಕೃತಿಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಪರಿಗಣಿಸಿ, ಕೆಳಹಂತದ ವ್ಯಕ್ತಿಗಳನ್ನು ನಾಯಕನಾಗಿಸಿ, ಸಮಸಮಾಜದ ಹಾಗೂ ಸಾಮರಸ್ಯ ಬದುಕಿನ ಮಹತ್ವದ ಅರಿವನ್ನು ಕುವೆಂಪು ಅವರ ಸಾಹಿತ್ಯದಲ್ಲಿ ಕಾಣಬಹುದು ಎಂದು ಉಪನ್ಯಾಸಕ ಹಾಗೂ ಲೇಖಕ ಎಚ್.ಟಿ. ಕರಿಬಸಪ್ಪ ಹೇಳಿದರು.

ಶನಿವಾರ ಆನವಟ್ಟಿಯ ದಾನಮ್ಮ ಬಡಾವಣೆಯಲ್ಲಿ ಎಚ್.ಟಿ. ಕರಿಬಸಪ್ಪ ಹಾಗೂ ಎಚ್.ಸಿ. ಸುನಂದ ದಂಪತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಜನ್ಮದಿನಾಚರಣೆ, ಪೌರಕಾರ್ಮಿಕರಿಗೆ ಸನ್ಮಾನ, ನವದಂಪತಿಗೆ ಅಭಿನಂದನೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಿಸರ್ಗ ಕವಿ ಅಂತಲೇ ಕರೆಸಿಕೊಳ್ಳುವ ವಿಶ್ವಕವಿ ಕುವೆಂಪು ಅವರ ಬರವಣಿಗೆಯನ್ನು ಕೃತಿ ರಚಿಸಲು ಮಾತ್ರ ಬಳಸದೇ, ಬರೆದಂತೆ ಬದುಕು ಸಾಗಿಸಿ, ಮನುಷ್ಯನ ಢಾಂಬಿಕತೆ, ಮೌಢ್ಯಗಳನ್ನು ವಿರೋಧಿಸಿ, ವೈಚಾರಿಕತೆಯನ್ನು ಜಗತ್ತಿಗೆ ಸಾರಿದರು. ಹಾಗಾಗಿ, ಎಲ್ಲ ಕಾಲಘಟದಲ್ಲೂ ಕುವೆಂಪು ಸಾಹಿತ್ಯ ಆದರ್ಶವಾಗಿದೆ ಎಂದರು.

ಸರ್ಕಾರ ಪೌರಕಾರ್ಮಿಕರನ್ನು ಮತ್ತು ನೀರುಗಂಟಿಗಳ ಸೇವೆಯನ್ನು ಕಾಯಂ ಮಾಡುವ ಜೊತೆಗೆ ಅವರನ್ನು ಅಧಿಕಾರಿಗಳು ಹಾಗೂ ಇತರ ಜನರು ಗೌರವದಿಂದ ಕಾಣಬೇಕು. ಹಾಗಾಗಿ, ಜಲಗಾರ ನಾಟಕದಲ್ಲಿ ಜಾಡಮಲೆಯ ಮಹತ್ವವನ್ನು ಕುವೆಂಪು ಅವರು ತುಂಬ ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಅವರ ಜನ್ಮದಿನದ್ದು ಪೌರ ಕಾರ್ಮಿಕರನ್ನು ಸನ್ಮಾನಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಸಹಾಯಕ ಪ್ರಾಧ್ಯಾಪಕ ಆರ್.ಸಿ. ಭೀಮಪ್ಪ ಒಂದು ದೇಶ, ಒಂದು ಭಾಷೆ ಎಂಬ ಘೋಷಣೆ ಮಾಡುವ ಸರ್ಕಾರಕ್ಕೆ ಸ್ಪಷ್ಟವಾಗಿ ‘ಜೈ ಭಾರತ ಜನನಿಯ ತಾನುಜಾತೆ, ಜೈ ಹೇ ಕರ್ನಾಟಕ ಮಾತೆ ಅಂದ ಅವರು ಸರ್ವಜನಾಂಗದ ಶಾಂತಿಯ ತೋಟ, ಹಿಂದೂ, ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಂದು ಭಾರತ ಬಹುತ್ವ ಧರ್ಮಗಳ ನಾಡು ಎಲ್ಲರನ್ನು ಪರಿಗಣಿಸಬೇಕಾಗುತ್ತದೆ ಎಂದು ಉತ್ತರ ನೀಡಿದ್ದಾರೆ.

ಅರುಣ್ ಕುಮಾರ್ ಹಿತ್ತಲ್ಲ ಅವರು ‘ಭಾರತೀಯ ಮತ್ತು ಪಾಶ್ಚಾತ್ಯ ಶಿಕ್ಷಣ ಅದರೊಂದಿಗೆ ವಿಶೇಷವಾಗಿ ಅಮೆರಿಕ ಶಿಕ್ಷಣ ಪದ್ಧತಿ ಬಗ್ಗೆ ಎಳೆಎಳೆಯಾಗಿ ಉಪನ್ಯಾಸ ನೀಡಿದರು.

ಆನವಟ್ಟಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಹಾಗೂ ನೀರುಗಂಟಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಅಶೋಕ್ ತತ್ತೂರು, ಮಾಲತೇಶ್, ಮಂಜಪ್ಪ, ಪ್ರೇಮಕುಮಾರ್ ಅವರು ಕುವೆಂಪು ರಚಿಸಿರುವ ಪದ್ಯಗಳನ್ನು ಹಾಡಿದರು.

ಸರಳ ಮಂತ್ರ ಮಾಂಗಲ್ಯ ಮೂಲಕ ಮದುವೆಯಾದ ಈ.ಕೆ ಮಾಲತೇಶ್ ಹಾಗೂ ಲತಾ ನವದಂಪತಿಗೆ ಸಾಹಿತ್ಯ ಪುಸ್ತಕಗಳನ್ನು ನೀಡಿ, ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎಚ್.ಜಯಪ್ಪ, ಉಪನ್ಯಾಸಕರಾದ ಅರುಣಕುಮಾರ್ ಹುರುಳಿ, ಉಮೇಶ್ ಬಿಚ್ಚುಗತ್ತಿ, ಸೈನಿಕ ವಿನಯ್, ಶಿಕ್ಷಕ ಪ್ರಕಾಶ್ ಮಡ್ಲೂರು, ಮಾಲತೇಶ್ ಮುಖಂಡರಾದ ಕೊಟ್ರೇಶಯ್ಯ ಹಿರೇಮಠ್, ಮುತ್ತಣ್ಣ, ಸೃಜನ್, ದೇವರವರ್, ವಿಜಯಪ್ಪ ಗೌಡ, ಶೇಖರ್ ಗೌಡ, ಎಪಿಪಿ ರಾಜಶೇಖರ್ ಇದ್ದರು.

- - -

-ಕೆಪಿ30ಎಎನ್‌ಟಿ1ಇಪಿ:

ಆನವಟ್ಟಿಯ ದಾನಮ್ಮ ಬಡಾವಣೆಯಲ್ಲಿ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ನೀರುಗಂಟಿಗಳನ್ನು ಸನ್ಮಾನಿಸಲಾಯಿತು.

Share this article