ಬೆಳಗಾವಿ: ನಗರದ ದಿ.ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸ್ಥಾನಿಕ ಸಂಸ್ಥೆಯಲ್ಲಿ ಇತ್ತೀಚೆಗೆ ವಿಶ್ವಜಲ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರ ಜಿ.ಎಂ.ಶಿವಕುಮಾರ ನೀರಿನ ಸದ್ಬಳಕೆಗೆ ಅಗತ್ಯವಾಗಿರುವ ನೀರಾವರಿ ಯೋಜನೆಗಳ ಆಧುನೀಕರಣದ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಅಭಿಯಂತರ ಎಸ್.ಎಸ್.ಖಣಗಾವಿ ವಹಿಸಿದ್ದರು. ಬಿ.ಜಿ.ಧರೆಣ್ಣಿ ಸೇರಿದಂತೆ ಸಂಸ್ಥೆಯ ಇನ್ನಿತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ವೆಂಕಟೇಶ ಸ್ವಾಗತಿಸಿದರು. ಸಂಸ್ಥೆಯ ಸದಸ್ಯ ವಿಲಾಸ ಬದಾಮಿ ಪರಿಚಯಿಸಿದರು. ಸಿ.ಬಿ.ಹಿರೇಮಠ ನಿರೂಪಿಸಿದರು. ಮಂಜುನಾಥ ಶರನಪ್ಪನ್ನವರ ವಂದಿಸಿದರು.