ಕನ್ನಡಪ್ರಭ ವಾರ್ತೆ ಉಡುಪಿ
ಯೋಗ ಗುರುಗಳಾದ ರಾಜೇಶ ಶೆಟ್ಟಿ ಅವರು ಯೋಗದಿಂದ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು ಹಾಗೂ ವಿವಿಧ ಬಗೆಯ ಯೋಗಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು. ಯೋಗ ಮಾಸ್ಟರ್ ದಯಾನಂದ ಕೆ.ಶೆಟ್ಟಿ ಸಹಕರಿಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಯಂಟ್ಸ್ ಗ್ರೂಪ್ ಮುಂಬಯಿ ಕೇಂದ್ರ ಸಮಿತಿಯ ಸದಸ್ಯರಾದ ದಿನಕರ್ ಅಮೀನ್, ಜಯಂಟ್ಸ್ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಮನ್ನ, ತೇಜಶ್ವರ ರಾವ್, ದೇವದಾಸ್ ಕಾಮತ್, ರೇಖಾ ಪೈ, ದಿವಾಕರ ಪೂಜಾರಿ, ರೋಶನ್ ಬಲ್ಲಾಳ್, ವಿನ್ಸೆಂಟ್, ವಾದಿರಾಜ್ ಸಾಲಿಯಾನ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ತೆಂಕಪೇಟೆ ಫ್ರೆಂಡ್ಸ್ ನಿಂದ ಯೋಗನಗರದ ತೆಂಕಪೇಟೆ ಫ್ರೆಂಡ್ಸ್ ವತಿಯಿಂದ ರಾಷ್ಟ್ರೀಯ ಚಿಂತಕರ ವೇದಿಕೆ, ಆರೋಗ್ಯ ಭಾರತಿ ಉಡುಪಿ ಮತ್ತು ಯೋಗಾಸಕ್ತರ ಸಹಯೋಗದಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಲ್ಲಿನ ಒಳಕಾಡಿನ ಪದ್ಮಾವತಿ ಸಭಾಂಗಣದಲ್ಲಿ ನಡೆಸಲಾಯಿತು. ತಾಯಿ ಭಾರತಿಗೆ ಪುಷ್ಪಾರ್ಚನೆ ನಡೆಸುವ ಮೂಲಕ ಯೋಗ ಶಿಕ್ಷಕಿ ಶ್ರೀಮತಿ ಪ್ರಿಯಾಂಕ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿ ಕೊಟ್ಟರು.
ಮಾಜಿ ನಗರಸಭಾ ಸದಸ್ಯ ಶ್ಯಾಮಪ್ರಸಾದ್ ಕುಡ್ವ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಪ್ರಮುಖರಾದ ಕೆ. ಅಜಿತ್ ಪೈ, ನಟೇಶ ವೈ. ಆರ್., ಶಕುಂತಲಾ ಶೆಣೈ, ಯು. ಅಜಿತ್ ಶೆಣೈ, ಪಿ. ಸದಾನಂದ ಶೆಣೈ, ಪಿ. ಪ್ರಭಾಕರ್ ಭಟ್, ಮುಕ್ತ ಕಾಮತ್, ಮಾಧವ ಕಾಮತ್, ಮೋಹನದಾಸ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.