ಅಂಬೇಡ್ಕರ್‌ ಅವರನ್ನು ಹೃದಯದಲ್ಲಿಟ್ಟು ಪೂಜಿಸಿ

KannadaprabhaNewsNetwork | Published : Apr 30, 2025 12:32 AM
೨೮ಶಿರಾ೧: ಶಿರಾ ತಾಲೂಕು ಕರಿರಾಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಸಿದ್ದ ವಿಶ್ವಜ್ಞಾನೋತ್ಸವ ಕಾರ್ಯಕ್ರಮದಲ್ಲಿ ಕನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿದರು. | Kannada Prabha

ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪೂಜೆ ಮಾಡುವುದನ್ನು, ಮೆರವಣಿಗೆ ಮಾಡುವುದನ್ನು ನಿಲ್ಲಿಸಿ. ಯಾರು ಅವರನ್ನು ಹೃದಯದಲ್ಲಿಟ್ಟು, ಅರ್ಥೈಸಿಕೊಳ್ಳುತ್ತಾರೋ ಆಗ ಅವರು ಯಶಸ್ವಿಯಾಗುತ್ತಾರೆ. ಅಂಬೇಡ್ಕರ್ ಅವರು ಒಂದು ಜಾತಿಗೆ ನ್ಯಾಯ, ರಕ್ಷಣೆ ಕೊಟ್ಟಿಲ್ಲ. ದೇಶದ ಸಮಸ್ಥ ನಾಗರೀಕರಿಗೂ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಕನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪೂಜೆ ಮಾಡುವುದನ್ನು, ಮೆರವಣಿಗೆ ಮಾಡುವುದನ್ನು ನಿಲ್ಲಿಸಿ. ಯಾರು ಅವರನ್ನು ಹೃದಯದಲ್ಲಿಟ್ಟು, ಅರ್ಥೈಸಿಕೊಳ್ಳುತ್ತಾರೋ ಆಗ ಅವರು ಯಶಸ್ವಿಯಾಗುತ್ತಾರೆ. ಅಂಬೇಡ್ಕರ್ ಅವರು ಒಂದು ಜಾತಿಗೆ ನ್ಯಾಯ, ರಕ್ಷಣೆ ಕೊಟ್ಟಿಲ್ಲ. ದೇಶದ ಸಮಸ್ಥ ನಾಗರೀಕರಿಗೂ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಕನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು. ಅವರು ತಾಲೂಕು ಹುಲಿಕುಂಟೆ ಹೋಬಳಿಯ ಕರಿರಾಮನಹಳ್ಳಿ ಗ್ರಾಮದಲ್ಲಿ ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರಿರಾಮನಹಳ್ಳಿ ಅಂಬೇಡ್ಕರ್ ಗ್ರಾಮಶಾಖೆ ಇವರ ಸಹಯೋಗದಲ್ಲಿ ಭಗವಾನ್ ಬುಧ್ದ, ವಿಶ್ವ ಗುರು ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಜಯಂತೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿಶ್ವ ಜ್ಞಾನೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಹುಟ್ಟಿ ೧೩೪ ವರ್ಷ ಕಳೆದರೂ, ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟು ೭೮ ವರ್ಷವಾದರೂ ಸಹ ನಮ್ಮಲ್ಲಿ ಅನಕ್ಷರತೆ ಇದೆ. ಭಾರತ ದೇಶದಲ್ಲಿ ಬ್ರಾಂಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ವಿದ್ಯೆಯನ್ನು ಕೊಡಬೇಕು ಉಳಿದ ಜಾತಿಯವರಿಗೆ ಜ್ಞಾನವನ್ನು ಕೊಡಬಾರದು ಎಂಬ ನಿಷೇಧವನ್ನು ಇಟ್ಟಿದ್ದರೋ, ಅಂತಹ ನಿಷೇಧದ ವ್ಯವಸ್ಥೆಯೊಳಗೂ ಶಿಕ್ಷಣವನ್ನು ಪಡೆದು ದೇಶಕ್ಕೆ ಸಂವಿಧಾನವನ್ನು ಕೊಟ್ಟು ಈ ನೆಲದಲ್ಲಿ ಹುಟ್ಟಿದ, ಹುಟ್ಟುವ ಎಲ್ಲರಿಗೂ ಶಿಕ್ಷಣ ಕೊಡಬೇಕು ಎಂಬ ಒಂದು ನೀತಿಯನ್ನು ಮಾಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್. ಹಾಗಾಗಿ ಇವರ ಹುಟ್ಟಿದ ದಿನವನ್ನು ಇಡೀ ಪ್ರಪಂಚದಲ್ಲಿ ಆಚರಣೆ ಮಾಡುತ್ತಿರುವ ಹೆಮ್ಮೆಯ ಸಂಗತಿ ಎಂದರು. ಯುವ ಹೋರಾಟಗಾರ್ತಿ ಜನನಿ ವತ್ಸಲ ಮಾತನಾಡಿ, ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು ಮಹಿಳೆಯರಿಗೆ ಹಕ್ಕುಗಳನ್ನು ಒದಗಿಸಿದ್ದಾರೆ. ಇಂದಿನ ಯುವಕರು, ಯುವತಿಯರು ಶಿಕ್ಷಣವನ್ನು ಸರಿಯಾಗಿ ಬಳಸಿಕೊಳ್ಳದೆ ದಾರಿ ತಪ್ಪುತ್ತಿದ್ದಾರೆ. ಕೇವಲ ಹತ್ತನೇ ತರಗತಿ ಹಾಗೂ ಪಿಯುಸಿ ಶಿಕ್ಷಣಕ್ಕೆ ಮೊಟಕುಗೊಳಿಸುತ್ತಿದ್ದೀರಿ. ಯುವಕ, ಯುವತಿಯರು ವಿದ್ಯಾವಂತರಾಗಿ ಯಾರಲ್ಲೂ ಗುಲಾಮರಾಗಬಾರದೆಂಬ ಉದ್ದೇಶದಿಂದ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕೊಟ್ಟಿದ್ದು ಅದನ್ನು ಉತ್ತಮವಾಗಿ ಬಳಸಿಕೊಂಡಾಗ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯ. ಉದ್ಯೋಗಕ್ಕಾಗಿ ಶಿಕ್ಷಣವನ್ನು ಕಲಿಯದೆ ಕಾನೂನು ಹಾಗೂ ಸಾಮಾಜಿಕ ವ್ಯವಸ್ಥೆಯ ಉಳಿವಿಗಾಗಿ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕಾಗಿ ಶಿಕ್ಷಣವನ್ನು ಕಲಿಯಬೇಕಿದೆ ಎಂದರು.ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಟೈರ್ ರಂಗನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು ಹೊಸಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಗೀತಾ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೂವಿನ ಅಲಂಕೃತ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ರಾಜ್ಯ ದಲಿತ ಮುಖಂಡ ಜೆ.ಎನ್.ರಾಜಸಿಂಹ, ತಾಲೂಕು ದಲಿತ ಡಿ.ಎಸ್.ಎಸ್.ಕಾರ್ಯಾಧ್ಯಕ್ಷ ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ಡಿ.ಎಸ್.ಎಸ್. ಅಧ್ಯಕ್ಷ ಸುರೇಶ್, ನಾಗರಾಜು, ಕರಿರಾಮನಹಳ್ಳಿ ಡಿ.ಎಸ್.ಎಸ್ ಸಂಚಾಲಕ ಭೂತರಾಜು, ಶಿಕ್ಷಕರಾದ ಸುರೇಶ್, ನರಸಿಂಹಮೂರ್ತಿ, ಶಿವಣ್ಣ, ಸಾಹಿತಿ ದ್ವಾರನಕುಂಟೆ ಡಾ.ಲಕ್ಷ್ಮಣ್, ಉಮೇಶ್, ಹಂದಿಕುಂಟೆ ಗ್ರಾ.ಪಂ.ಎಸ್.ಡಿ.ಎ ತಿಪ್ಪೇಸ್ವಾಮಿ, ತಾಲೂಕು ಮಹಿಳಾ ಡಿ.ಎಸ್.ಎಸ್.ಅಧ್ಯಕ್ಷೆ ಲಾವಣ್ಯ, ಗ್ರಾ.ಪಂ.ಉಪಾಧ್ಯಕ್ಷೆ ರಂಗಮ್ಮ, ಸದಸ್ಯರಾದ ಗೋವಿಂದಪ್ಪ, ಮುಖಂಡರಾದ ನಿಂಗೇಗೌಡ, ಶ್ರೀರಂಗಪ್ಪ, ಶಿವಕುಮಾರ್, ರವಿಚಂದ್ರನ್, ಸೈನಿಕ ಮಧುಸೂದನ್, ಮಾಜಿ ಸೈನಿಕರಾದ ಕಾದ್ರೀಶ್, ನರಸಪ್ಪ, ಶಿಕ್ಷಕರಾದ ಹನುಮಂತರಾಯಪ್ಪ, ರಾಂರಾಜ್, ರಾಜಣ್ಣ, ಶಂಕರ್, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.