ನವದುರ್ಗೆ ರೂಪದಲ್ಲಿ ಮಕ್ಕಳ ಪೂಜೆ

KannadaprabhaNewsNetwork |  
Published : Oct 20, 2026, 01:15 AM IST
ನವರಾತ್ರಿ ಅಂಗವಾಗಿ ವಿಶೇಷ ಕನ್ಯಾ ಪೂಜೆ | Kannada Prabha

ಸಾರಾಂಶ

ಬ್ರಾಹ್ಮಿ ಮಹಿಳಾ ಸಂಘ ಮತ್ತು ಋಗ್ವೇದಿ ಯೂತ್ ಕ್ಲಬ್, ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಕುಟೀರದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಕನ್ಯಾ ಪೂಜೆ ಜರುಗಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬ್ರಾಹ್ಮಿ ಮಹಿಳಾ ಸಂಘ ಮತ್ತು ಋಗ್ವೇದಿ ಯೂತ್ ಕ್ಲಬ್, ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಕುಟೀರದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಕನ್ಯಾ ಪೂಜೆ ಜರುಗಿತು.

ನವದುರ್ಗೆಯ ಅವತಾರದಲ್ಲಿ ಶಕ್ತಿಯನ್ನು ಪೂಜಿಸುವ ಸಲುವಾಗಿ ಮಕ್ಕಳಿಗೆ ದೇವಿಯಂತೆ ಅಲಂಕರಿಸಿ ಪೂಜಿಸಿ ಆಶೀರ್ವಾದ ಪಡೆಯುವ ಕನ್ಯಾಪೂಜೆ ನವರಾತ್ರಿಯಲ್ಲಿ ವಿಶೇಷವಾದ ಒಂದು ಸಂಸ್ಕೃತಿ ಮತ್ತು ಪರಂಪರೆಯಾಗಿದೆ.

9 ಪುಟ್ಟ ಮಕ್ಕಳಲ್ಲಿ ದೇವರನ್ನು ವಿಶೇಷವಾಗಿ ನವದುರ್ಗೆಯರನ್ನು ಕಣ್ತುಂಬಿಸಿಕೊಳ್ಳುವ ಆ ದೃಶ್ಯಗಳು ಮನಸ್ಸಿಗೆ ಬಹಳಷ್ಟು ಸಂತೋಷ ಮತ್ತು ಆನಂದವನ್ನು ತರುತ್ತದೆ. ಮಕ್ಕಳು ಮುಗ್ಧ ಮತ್ತು ಶುದ್ಧ ಮನಸ್ಸಿನ ರೂಪ. ಕುಮಾರಿಕಾ, ತ್ರಿಮೂರ್ತಿ, ಕಲ್ಯಾಣಿ, ರೋಹಿಣಿ, ಕಾಳಿ, ಚಂಡಿಕಾ, ಶಾಂಭವಿ, ದುರ್ಗಾ, ಸುಭದ್ರ ರೂಪದಲ್ಲಿ ಪೂಜಿಸಿ ಹೆಣ್ಣು ಮಕ್ಕಳಿಗೆ ಪಾದ ತೊಳೆದು ಅರಿಶಿನ ಕುಂಕುಮ ನೀಡಿ, ಹಸೆಮಣೆಯಲ್ಲಿ ಕೂರಿಸಿ, ಪೂಜಿಸಿ, ನಂತರ ಆರತಿ ಮಾಡಿ, ಮಕ್ಕಳಿಗೆ ಸಕಲ ಇಷ್ಟವಾದ ವಸ್ತುಗಳನ್ನು ವಿಶೇಷವಾಗಿ ಪುಸ್ತಕ, ಪೆನ್ನು,ಪೆನ್ಸಿಲ್, ರಬ್ಬರ್, ಬಟ್ಟೆ, ಬ್ಯಾಗ್, ಆಧ್ಯಾತ್ಮ ಪುಸ್ತಕಗಳು ಮತ್ತು ಅಲಂಕಾರಿಕ ವಸ್ತುಗಳು ಮುಂತಾದ ಎಲ್ಲಾ ಪದಾರ್ಥಗಳನ್ನು ನೀಡಿ ಅವರಿಂದ ಅಕ್ಷತೆಯ ಮೂಲಕ ಸೆರಗುವಡ್ಡಿ ಆಶೀರ್ವಾದ ಪಡೆಯುವ ಸಂಭ್ರಮವೇ ಕನ್ಯಾ ಪೂಜೆಯಾಗಿದೆ.

ಕನ್ಯಾಪೂಜೆಯ ವಿಶೇಷ ಉಪನ್ಯಾಸ ನೀಡಿದ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ಮಾತನಾಡಿ, ದುರ್ಗಾ ಪೂಜೆ ವಿಶೇಷವಾಗಿ ಶಕ್ತಿ, ಚೈತನ್ಯ, ಆಧ್ಯಾತ್ಮ ರಹಸ್ಯ, ಪ್ರಕೃತಿಯ ಚಿಂತನೆ, ದೈವೀಕ ಶಕ್ತಿಯ ಸ್ವೀಕಾರ, ಲಕ್ಷ್ಮಿ,ಸರಸ್ವತಿಯ ಸ್ವರೂಪದಲ್ಲಿ ಸರ್ವರಿಗೂ ಹಣ,ವಿದ್ಯೆ,ತೇಜಸ್ಸು ಪ್ರಾಪ್ತಿಯಾಗಿ, ಭಯದಿಂದ ಮುಕ್ತರಾಗಿ, ಶತ್ರು ನಾಶದಿಂದ ಮತ್ತು ಸಮಾಜದ ದುಷ್ಟ ಶಕ್ತಿಗಳು ನಾಶವಾಗಲಿ ಎಂದು ಪ್ರಾರ್ಥಿಸಿ , ಸಂತೋಷಭರಿತವಾದ ಸಮಾಜ ಮತ್ತು ಪರಿಸರವನ್ನು ಸೃಷ್ಟಿ ಮಾಡುವ ಹಬ್ಬವಾಗಿದೆ ಎಂದರು.

ಬ್ರಾಹ್ಮಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮಿ ಸುರೇಶ್ ರವರು ಕಳೆದ ಹಲವು ದಶಕಗಳಿಂದ ಬ್ರಾಹ್ಮಿ ಮಹಿಳಾ ಸಂಘ ಕನ್ಯಾಪೂಜೆಯನ್ನು ವಿಶೇಷವಾಗಿ ಬಹಳ ಭಕ್ತಿಯಿಂದ ಶ್ರದ್ಧೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಂಸ್ಕೃತಿ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸುವ ಮತ್ತು ಪರಿಚಯಿಸುವ ರೂಢಿಗೆ ತರುವ ಜೊತೆಗೆ ಸರ್ವರಿಗೂ ಒಳಿತನ್ನು ಬಯಸುವುದೇ ಕನ್ಯಾ ಪೂಜೆಯಾಗಿದೆ. ಇದಕ್ಕಾಗಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಬ್ರಾಹ್ಮಿ ಮಹಿಳಾ ಸಂಘದ ಕಾರ್ಯದರ್ಶಿ ರೇಖಾ, ಉಪಾಧ್ಯಕ್ಷರಾದ ಭಾನುಮತಿ, ಮಾಜಿ ಅಧ್ಯಕ್ಷರುಗಳಾದ ವತ್ಸಲ, ವಿಜಯಲಕ್ಷ್ಮಿ, ರಾಧಾ, ಪಾರ್ವತಿ, ವೀಣಾ, ನಂದಿನಿ, ಹೆಗಡೆ, ಶಂಕರ ಅಭಿಯಾನದ ಕುಸುಮಋಗ್ವೇದಿ ವಾಣಿಶ್ರೀ, ಸರಸ್ವತಿ, ಪವಿತ್ರ ಮಾಲಾ, ಋಗ್ವೇದಿ ಯೂತ್ ಕ್ಲಬ್ ಶರಣ್ಯ, ಸಾನಿಕ, ವರ್ಷಿಣಿ, ಯಶಸ್ವಿನಿ, ಶ್ರಾವ್ಯ ಋಗ್ವೇದಿ ಹಾಗೂ ಭೋಜರಾಜ್, ವಲ್ಲಿಶ್ ಮುರುಗೇಶ್, ನೂರಾರು ಭಕ್ತರು ಹಾಜರಿದ್ದರು.,

ಬ್ರಾಹ್ಮಿ ಮಹಿಳಾ ಸಂಘದಿಂದ ಭಜನೆ, ಲಲಿತಾ ಸಹಸ್ರನಾಮ, ಪಾರಾಯಣ, ಸ್ತೋತ್ರ ಪಠಣ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ.27ರಂದು ಅರ್ಹರಿಗೆ ನಿವೇಶನ ಹಂಚಿಕೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಕೃತಜ್ಞತೆ ಮರೆಯಾಗಿ ಲಾಭ, ನಷ್ಟದಲ್ಲೇ ಜನರು ಜೀವನ ಕಳೆಯುತ್ತಿದ್ದಾರೆ: ರವಿಕಾಂತೇಗೌಡ