ಗದಗ: ಶ್ರೀ ದೇವಿಯ ಆರಾಧನೆ ಮಾಡಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಐ.ಕೆ. ಕಮ್ಮಾರ ಹೇಳಿದರು.
ನಗರಸಭೆ ಸಹಾಯಕ ಅಭಿಯಂತರ ಎಚ್.ಎ. ಬಂಡಿವಡ್ಡರ ಮಾತನಾಡಿ, ಮಠದ ಪರಿಸರಕ್ಕೆ ಪೂರಕವಾದ ಪ್ರಾಥಮಿಕ ಸೌಲಭ್ಯಗಳಾದ ರಸ್ತೆ, ಚರಂಡಿ, ನಿರ್ಮಾಣ ಕಾರ್ಯಗಳು ತ್ವರಿತಗತಿಯಲ್ಲಿ ಮಾಡಿಸುತ್ತೇವೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀಶಂಕರಾನಂದ ಸ್ವಾಮಿಗಳು ಮಾತನಾಡಿ, ಕಾಲಕ್ಕೆ ತಕ್ಕಂತೆ ದೇವಿಯು ಅಸುರ ಶಕ್ತಿಗಳ ಸಂಹಾರ ಗೈಯಲು ಒಂಬತ್ತು ಅವತಾರಗಳನ್ನು ತಾಳಿ ತನ್ನ ಇರುವಿಕೆ ನೀಡಿದ್ದಾಳೆ. ಆದ ಕಾರಣ ಮಾನವರು ಸದಾವಕಾಲ ದೇವಿಯ ಆರಾಧನೆ ಮಾಡಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದರು.ಪ್ರವಚನಕಾರ ಶರಣ ಮಲ್ಲೇಶಪ್ಪ ಅಣ್ಣಿಗೇರಿ, ನಗರಸಭೆ ಆಯುಕ್ತ ಮಹೇಶ ಪೋತದಾರ, ಸಿಂಧು, ಎಂ.ಟಿ. ಸೂರಿ, ಬಿ.ಬಿ. ಹಡಪದ, ಎಸ್.ಜಿ. ಕೋತಂಬ್ರಿ, ಎಸ್.ಐ. ಚಳಗೇರಿ, ಬಸವರಾಜ ಹಡಪದ, ಕಾಮನಗೌಡ್ರ, ಕೆ.ಜಿ. ಕೊಳ್ಳಿ, ಉಮೇಶ ಅಬ್ಬಿಗೇರಿ ಸೇರಿದಂತೆ ಇತರರು ಇದ್ದರು. ಶ್ರೀಕಾಂತ ಹೂಲಿ, ಅಮರೇಶ ಕರಬಿಷ್ಠಿ ಸಂಗೀತ ಸೇವೆ ನೀಡಿದರು. ಪ್ರಸಾದ ಸೇವೆ ನಾಗರತ್ನಾ ಮುಕ್ತಿನಾಥ ಹಾಗೂ ಶ್ರೀ ಮುಕ್ಕಣ್ಣೇಶ್ವರ ಗೆಳೆಯರ ಸೇವಾ ಬಳಗದವರು ವಹಿಸಿಕೊಂಡಿದ್ದರು. ಕೆ.ಬಿ. ಕೊಣ್ಣೂರ ನಿರೂಪಿಸಿದರು. ಆರ್.ಎಫ್. ಹಾಳಕೇರಿ ಸ್ವಾಗತಿಸಿದರು. ಎಸ್.ಕೆ. ಮಾಗುಂಡ ವಂದಿಸಿದರು.